Kannada News: ಕೊನೆಗೂ ಬಿಜೆಪಿ ಪಕ್ಷದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಫೈನಲ್ ಆಯ್ತಾ? ಬೊಮ್ಮಾಯಿ ಅಲ್ಲ, ಯತ್ನಾಳ್ ಅಲ್ಲ. ಮತ್ಯಾರು ಅಂತೇ ಗೊತ್ತೆ?

Kannada News: ಕಾಂಗ್ರೆಸ್ ಪಕ್ಷವು ಈಗ ಅಧಿಕಾರಕ್ಕೆ ಬಂದಿದ್ದು, ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುವುದಕ್ಕೆ ಸಿದ್ಧವಾಗಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕ ಯಾರು ಎನ್ನುವುದೇ ಇನ್ನು ಅಂತಿಮವಾಗಿ ತೀರ್ಮಾನ ಆಗಿಲ್ಲ. ಮೊದಲಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೆಸರುಗಳು ಕೇಳಿಬಂದಿತ್ತು.

bjp vipaksha stana aayke Kannada News:

ಆದರೆ ಈಗ ಮತ್ತೊಬ್ಬ ಬಿಜೆಪಿ ನಾಯಕನ ಹೆಸರು ಕೇಳಿಬರುತ್ತಿದೆ.. ಈಗ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಲು ಧಾರವಾಡ ಹುಬ್ಬಳ್ಳಿ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರು ಕೂಡ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹಾಗೂ ಯತ್ನಾಳ್ ಅವರು ಕೂಡ ಉತ್ತರ ಕರ್ನಾಟಕದವರೇ. ಮೊದಲಿಗೆ ಅರವಿಂದ್ ಬೆಲ್ಲದ್ ಅವರು ರಾಜ್ಯದ ಸಿಎಂ ಆಗುತ್ತಾರೆ ಎನ್ನಲಾಗಿತ್ತು.. ಇದನ್ನು ಓದಿ..Delhi Sakshi Case: ಸಾಕ್ಷಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಸಾಹಿಲ್ ಹಾಗೂ ಸಾಕ್ಷಿ ನಡುವೆ ಏನೆಲ್ಲಾ ನಡೆದಿತ್ತು ಗೊತ್ತೇ?? ಅದಾದ ಮೇಲೆ ಏನಾಯ್ತು ಗೊತ್ತೆ??

ಆದರೆ ಅಂತಿಮ ಘಳಿಗೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆದರು. ವಿಧಾನಸಭಾ ಚುನಾವಣೆಯಲ್ಲಿ ಇವರು 38 ಸಾವಿರ ಮತಗಳನ್ನು ಪಡೆದು ಗೆದ್ದಿದ್ದಾರೆ. ಈ ವಿಚಾರದ ಬಗ್ಗೆ ಖುದ್ದು ಅರವಿಂದ್ ಬೆಲ್ಲದ್ ಅವರು ಪ್ರತಿಕ್ರಿಯೆ ನೀಡಿ, “ವಿರೋಧ ಪಕ್ಷದ ನಾಯಕ ಯಾರು ಎನ್ನುವುದು ಹೈಕಮ್ಯಾಂಡ್ ಗೆ ಬಿಟ್ಟ ನಿರ್ಧಾರ, ಇದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ.

ನಮ್ಮ ಪಕ್ಷದಲ್ಲಿ ಲಾಬಿ ನಡಿಯಲ್ಲ, ಉತ್ತರ ಕರ್ನಾಟಕಕ್ಕೆ ವಿರೋಧ ಪಕ್ಷದ ಸ್ಥಾನ ಕೊಡಬೇಕು ಎಂದು ಪಕ್ಷ ತೀರ್ಮಾನ ಮಾಡುತ್ತದೆ. ವಿರೋಧ ಪಕ್ಷದ ನಾಯಕ ಯಾರು ಎಂದು ಪಕ್ಷದ ಹಿರಿಯರು ತೀರ್ಮಾನ ಮಾಡುತ್ತಾರೆ. ನಾನು ನಮ್ಮ ಪಕ್ಷದ ಶಿಸ್ತಿನ ಸಿಪಾಯಿ.. ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಪಕ್ಷದ ವಿರೋಧ ನಾಯಕ ಯಾರಾಗುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Red Mi Prime 10: ಚೀನಾ ಮೊಬೈಲ್ ಆದರೂ ಜನ ಹೆಚ್ಚು ಖರೀದಿ ಮಾಡುವ ರೆಡ್ಮಿ 10 ಪ್ರೈಮ್ ಬೆಲೆ ಇಳಿಕೆ- ಖರೀದಿ ಮಾಡಿ, ಎಷ್ಟು ಅಂತೇ ಗೊತ್ತೇ??

Comments are closed.