Bhagyalakshmi: ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿ ಬಗ್ಗೆ ಪ್ರೇಕ್ಷಕರ ಅಭಿಪ್ರಾಯವೇನು ಗೊತ್ತೇ?? ಜನರು ಹೇಳುತ್ತಿರುವುದೇನು ಗೊತ್ತೇ?

Bhagyalakshmi: ಕಲರ್ಸ್ ಕನ್ನಡ (Colors Kannada) ವಾಹಿನಿಯ ಭಾಗ್ಯಲಕ್ಷ್ಮಿ (Bhagyalakshmi) ಧಾರವಾಹಿ ಈಗ ಕನ್ನಡದ ಟಾಪ್ 5 ಧಾರವಾಹಿಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಧಾರವಾಹಿ ನೋಡಿದವರು ಕುಸುಮ ಪಾತ್ರವನ್ನು ನೋಡಿ ತಮಗೂ ಇಂಥ ಅತ್ತೆ ಬೇಕು ಎನ್ನುತ್ತಿದ್ದಾರೆ. ಅತ್ತೆ ಸೊಸೆ ಎಂದರೆ ಅವರಿಬ್ಬರ ನಡುವೆ ಜಗಳ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಈ ಥರವೇ ತೋರಿಸಲಾಗುತ್ತದೆ. ಆದರೆ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಉಲ್ಟಾ ಆಗಿದೆ.

fans reaction about bhagyalakshmi serial Bhagyalakshmi:
Bhagyalakshmi: ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿ ಬಗ್ಗೆ ಪ್ರೇಕ್ಷಕರ ಅಭಿಪ್ರಾಯವೇನು ಗೊತ್ತೇ?? ಜನರು ಹೇಳುತ್ತಿರುವುದೇನು ಗೊತ್ತೇ? 2

ಅತ್ತೆಗೆ ತುಂಬಾ ಗತ್ತು, ತನ್ನ ಮಾತೆ ನಡೆಯಬೇಕು ಎನ್ನುವ ಭಾವನೆ ಕೂಡ ಇದೆ. ಆದರೆ ಕುಸುಮ ತನ್ನ ಸೊಸೆಯನ್ನು ಓದಿಸಬೇಕು ಎಂದು ತೆಗೆದುಕೊಂಡಿರುವ ನಿರ್ಧಾರ ಈಗ ಎಲ್ಲರ ಗಮನ ಸೆಳೆದಿದೆ. ಮಗ ತಾಂಡವ್ ಗೆ ಹೆಂಡತಿ ಭಾಗ್ಯ ಮೇಲೆ ಮನಸ್ಸಿಲ್ಲ, ಹೆಂಡತಿಯನ್ನು ದಡ್ಡಿ ಅವಳಿಗೆ ಏನು ಗೊತ್ತಾಗುವುದಿಲ್ಲ ಎಂದು ಯಾವಾಗಲೂ ಹೀಯಾಳಿಸುತ್ತಾನೆ, ಭಾಗ್ಯ ಓದಿಲ್ಲ ಅವಳಿಗೆ ಏನು ಗೊತ್ತಾಗುವುದಿಲ್ಲ ಎಂದು ತಾಂಡವ್ ಮತ್ತು ಮಗಳು ತನ್ವಿ ಹೀಯಾಳಿಸುತ್ತಾರೆ. ಇದನ್ನು ಓದಿ..Varun Tej: ಇನ್ನು ಮದುವೆಗೆ ಆಗಿಲ್ಲ, ಆಗಲೇ ನಟಿಗೆ ಷರತ್ತು ವಿಧಿಸಿದ ನಟ ವರುಣ್ ತೇಜ್- ಮಡೆಯಾಗುವುದು ನಟಿಯನ್ನೇ, ಆದರೆ ಮದುವೆ ಆದಮೇಲೆ??

ಇದನ್ನು ಸಹಿಸದ ಅತ್ತೆ ಕುಸುಮ, ಸೊಸೆಯನ್ನು ಓದಿಸಿ ಬುದ್ಧಿವಂತಳಾಗಿ ಮಾಡುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಇದು ಮಗ ತಾಂಡವ್ ಮತ್ತು ಮೊಮ್ಮಗಳು ತನ್ವಿಗೆ ಇಷ್ಟವಿಲ್ಲ, ಹಾಗಿದ್ದರೂ ಕೂಡ ಕುಸುಮ ತಮ್ಮ ಹಠವನ್ನು ಬಿಟ್ಟಿಲ್ಲ. ಭಾಗ್ಯಳನ್ನು ಓದಿಸುತ್ತೇನೆ ಎಂದು ಸೊಸೆಯ ಕೈಯಲ್ಲಿ 10ನೇ ಪರೀಕ್ಷೆ ಬರೆಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅತ್ತೆ ಕುಸುಮ ಪಾತ್ರದಲ್ಲಿ ನಟಿಸುತ್ತಿರುವುದು ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಪದ್ಮಜಾ ರಾವ್ ಅವರು.

ಪದ್ಮಜಾ ರಾವ್ (Padmaja Rao) ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ಇವರ ಅಭಿನಯಕ್ಕೆ ಸಿನಿಮಾಗಿಂತ ಹೆಚ್ಚು ಮೆಚ್ಚುಗೆ ಸಿಗುತ್ತಿದೆ. ಪದ್ಮಜಾ ಅವರ ಖಡಕ್ ಮಾತುಗಳು, ನ್ಯಾಯದ ಪರವಾಗಿ ನಿಲ್ಲುವ ಗುಣ, ಮಗನನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಂಡಿರುವುದು ಈ ಎಲ್ಲಾ ಗುಣಗಳು ಜನರಿಗೆ ಇಷ್ಟವಾಗಿದೆ. ಇವರ ಅಭಿನಯಕ್ಕೆ ಜನರು ಮಾರುಹೋಗಿದ್ದು, ನಮಗೂ ಕುಸುಮ ಅಂಥ ಅತ್ತೆ ಬೇಕು ಎನ್ನುತ್ತಿದ್ದಾರೆ. ಇದನ್ನು ಓದಿ..Sree Leela: ತಾಯಿಗೆ ಕೊಟ್ಟ ಮಾತಿಗಾಗಿ ಗಟ್ಟಿ ನಿರ್ಧಾರ ಮಾಡಿಯೇ ಬಿಟ್ಟ ಶ್ರೀ ಲೀಲಾ: ಚಿಂತೆಯಲ್ಲಿ ನಿರ್ದೇಶಕರು, ಹೀರೋಗಳು. ಏನಾಗಿದೆ ಗೊತ್ತೇ??

Comments are closed.