BEL Jobs: ಕೆಲಸ ಬೇರೆ ರಾಜ್ಯದವರಿಗೆ ಹೋಗುತ್ತಿದೆ ಎನ್ನುವ ಮುನ್ನ, ಮೊದಲು BEL ನಲ್ಲಿ ಅರ್ಜಿ ಹಾಕಿ. ತಿಂಗಳಿಗೆ 50 ಸಾವಿರ ಸಂಬಳ. ಏನು ಮಾಡಬೇಕು ಗೊತ್ತೇ?
BEL Jobs: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈಗ ಸೂಚನೆ ನೀಡಲಾಗಿದೆ. BEL ನಲ್ಲಿ ಇವ ಒಟ್ಟಾರೆಯಾಗಿ 2 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳು ಖಾಲಿ ಇದೆ. ಈ ಕೆಲಸಕ್ಕೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. 2023ರ ಜೂನ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಆಸಕ್ತರು ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ಈ ಕೆಲಸ ಸಿಕ್ಕರೆ ಕರ್ನಾಟಕದಲ್ಲಿ ಪೋಸ್ಟಿಂಗ್ ಆಗುತ್ತದೆ. ಖಾಲಿ ಇರುವುದು 2 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳು, ಈ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ ಮಾನ್ಯತೆ ಪಡೆದಿರುವ ಯೂನಿವರ್ಸಿಟಿ ಅಥವಾ ಮಂಡಳಿಯಿಂದ ಬಿಇ ಅಥವಾ ಬಿಟೆಕ್ ಪಾಸ್ ಮಾಡಿರಬೇಕು. ಕೆಲಸಕ್ಕೆ ಅಗತ್ಯವಿರುವ ವಯೋಮಿತಿ, 2023ರ ಮೇ1ಕ್ಕೆ 32 ವರ್ಷ ಮೀರಿರಬಾರದು. ಇದನ್ನು ಓದಿ..News: ಭಾರತೀಯ ಸೇನೆಯು ಯಾಕೆ ಮಾರುತಿ ಜಿಪ್ಸಿ ಮೇಲೆ ಆಸಕ್ತಿ ತೋರುತ್ತಿದೆ ಗೊತ್ತೇ?? ಇದರಲ್ಲಿ ಇರುವ ವಿಶೇಷತೆ ಏನು ಗೊತ್ತೇ??
SC ಅಭ್ಯರ್ಥಿಗಳಿಗೆ 5 ವರ್ಷ, PWD ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ. SC/ST/PWD ವಿದ್ಯಾರ್ಥಿಗಳು ಅರ್ಜಿ ಶುಲ್ಕ ಕಟ್ಟುವ ಅಗತ್ಯ ಇರುವುದಿಲ್ಲ. ಬೇರೆ ಅಭ್ಯರ್ಥಿಗಳು ಆನ್ಲೈನ್ ಮೂಲಕ 400 ರೂಪಾಯಿ ಅರ್ಜಿ ಶುಲ್ಕ ಕಟ್ಟಬೇಕಾಗುತ್ತದೆ. ಈ ಕೆಲಸಕ್ಕೆ ಸೇರುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹40,000 ಇಂದ ₹50,000 ವೇತನ ಇರುತ್ತದೆ.
ಕೆಲಸಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಪೋಸ್ಟಿಂಗ್ ಕೋಡಲಾಗುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ನೀವು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳ ಜೊತೆಗೆ ಈ ವಿಳಾಸಕ್ಕೆ ಕಳಿಸಿ..
ಸೀನಿಯರ್ ಡೆಪ್ಯುಟಿ ಜನರಲ್ ಮ್ಯಾನೇಜರ್ (HR/ಮಿಲಿಟರಿ ಕಮ್ಯುನಿಕೇಷನ್ಸ್ & MR)
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಜಾಲಹಳ್ಳಿ ಪೋಸ್ಟ್
ಬೆಂಗಳೂರು – 560013 ಇದನ್ನು ಓದಿ..Karnataka BJP: ಕರ್ನಾಟಕದಲ್ಲಿ BJP ಹೀನಾಯ ಸೋಲಿಗೆ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದ ಮೊದಲ ನಾಯಕ. ಈ ಕುರಿತು ಹೇಳಿದ್ದೇನು ಗೊತ್ತೇ??
Comments are closed.