Yatnal: ಕೊನೆಗೂ MB ಪಾಟೀಲ್ ರವರಿಗೆ ಠಕ್ಕರ್ ಕೊಟ್ಟ ಬಸವನ ಗೌಡ ಯತ್ನಾಳ್- ಕಾಂಗ್ರೆಸ್ ಸಚಿವರಿಗೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ??
Yatnal: ಬಿಜೆಪಿಯ ಬಸವನಗೌಡ ಯತ್ನಾಳ್ ಹಾಗೂ ಕಾಂಗ್ರೆಸ್ ನ ಎಂಬಿ ಪಾಟೀಲ್ ನಡುವೆ ವಾಕ್ಸಮರ ನಿಲ್ಲದೆ ದೊಡ್ಡದಾಗುತ್ತಲೇ ಇದೆ. ಈಗ ಇದು ಇನ್ನಷ್ಟು ಹೆಚ್ಚುವ ಹಾಗೆ ಕಾಣುತ್ತಿದೆ. ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಮಾತನಾಡಿದ್ದಕ್ಕೆ ಯತ್ನಾಳ್ ಆಕ್ರೋಶಗೊಂಡಿದ್ದರು. ಕೆಲ ಸಮಯದ ಹಿಂದೆ ಎಂಬಿ ಪಾಟೀಲ್ ಅವರು ನೀಡಿದ್ದ ಹೇಳಿಕೆಗೆ ಈಗ ಯತ್ನಾಳ್ ಅವರು ಪ್ರತ್ಯುತ್ತರ ಕೊಟ್ಟಿದ್ದಾರೆ.

ನಿನ್ನೆ ಟ್ವೀಟ್ ಮಾಡಿದ್ದ ಯತ್ನಾಳ್ ಅವರು, “ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಎಂಬಿ ಪಾಟೀಲ್ ಅವರು ಮರೆಯಬಾರದು. Fir ಮಾಡಿಸ್ತೀವಿ, ಜೈಲಿಗೆ ಕಳುಹಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರ? ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗು ಅವರ ಮಂತ್ರಿಗಳು intolerant ಆಗಬಾರದು!..” ಎಂದು ಟ್ವೀಟ್ ಮಾಡಿದ್ದರು. ಇದನ್ನು ಓದಿ..Renukacharya: ಎಷ್ಟೆಲ್ಲ ಮಾಡಿದರೂ ಸೋತ ರೇಣುಕಾಚಾರ್ಯ ಮಹತ್ವದ ಹೆಜ್ಜೆ- ಇದು ಇದು ಬೇಕಾಗಿರೋದು ಎಂದ ಫ್ಯಾನ್ಸ್. ರೇಣುಕಾರ್ಯ ಹೊಸ ದಿಟ್ಟ ಹೆಜ್ಜೆ. ಏನು ಗೊತ್ತೆ?
ಇದಕ್ಕೆ ಎಂಬಿಪಿ ಉತ್ತರ ಕೊಟ್ಟಿದ್ದರು ಆದರೆ ಈಗ ಈ ಜಗಳ ಇನ್ನು ದೊಡ್ಡದಾಗುತ್ತಿದೆ. ಯತ್ನಾಳ್ ಅವರು ಈ ಹಿಂದೆ ಸಿಎಂ ಸ್ಥಾನಕ್ಕೆ 2500 ಕೋಟಿ ಕೇಳಿದ್ದರು ಎಂದು ಆರೋಪ ಮಾಡಿದ್ದರು, ಇದಕ್ಕೆ ಎಂಬಿಪಿ ಅವರು ಉತ್ತರ ನೀಡಿದ್ದು, ಚುನಾವಣೆ ರಿಸಲ್ಟ್ ಬಂದು ಒಂದು ತಿಂಗಳಾಗಿದೆ, ಇನ್ನು ವಿರೋಧ ಪಕ್ಷದ ನಾಯಕನ ಸ್ಥಾನ ಫೈನಲ್ ಆಗಿಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಇನ್ನು ರೇಟ್ ಫಿಕ್ಸ್ ಆಗಿಲ್ವಾ ಎಂದು ಹೇಳಿದ್ದಾರೆ ಎಂಬಿ ಪಾಟೀಲ್. ಇದಕ್ಕೆ ಯತ್ನಾಳ್ ಅವರು ಕೂಡ ಪ್ರತ್ಯುತ್ತರ ಕೊಟ್ಟಿದ್ದಾರೆ..
“ನಾನು ಹೇಳಿದ್ದು ಅರ್ಥ ಮಾಡಿಕೊಳ್ಳುವುದಕ್ಕೆ ತಾಳ್ಮೆ ಹಾಗು ಸ್ವಲ್ಪ ತಿಳುವಳಿಕೆ ಬೇಕಾಗುತ್ತದೆ ಎಂಬಿ ಪಾಟೀಲರೇ! ನಾನು ಹೇಳಿದ್ದು ರಾಜಕೀಯ ವ್ಯವಸ್ಥೆಯ ಬಗ್ಗೆ. ನಿಮಗೆ ಗೃಹ ಹಾಗು ಭಾರಿ ಸಂಪನ್ಮೂಲ ಜಲಸಂಪನ್ಮೂಲ ಇಲಾಖೆ ಸಿಗದಿರುವ ಕಾರಣ ತಾವು ಇಷ್ಟು ಹತಾಶರಾಗಬೇಡಿ. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ..” ಎಂದು ಟ್ವೀಟ್ ಮಾಡಿದ್ದರು. ಇನ್ನು ಎಂಬಿಪಿ ಅವರ ಟ್ವೀಟ್ ಗು ಯತ್ನಾಳ್ ಅವರು ಉತ್ತರ ಕೊಟ್ಟಿದ್ದು.. “ಸಂವಿಧಾನ ವಿರೋಧಿ ಅಥವಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರೋಧವಾಗಿದ್ದರೆ ಯಾವ ನ್ಯಾಯಾಲಯ ಯೋಗಿ ಮಾಡೆಲ್ ವಿರುದ್ಧ ತೀರ್ಪು ನೀಡಿದೆ ಎಂಬಿ ಪಾಟೀಲರೇ! ನಿಮ್ಮ ನಾಯಕರನ್ನು ಮತ್ತು ಭಾಂದವರನ್ನು ಸಂತೋಷಪಡಿಸುವ ಭರದಲ್ಲಿ ಏನೋ ಮಾಡಿಬಿಡುತ್ತೇವೆ ಎಂದು ಮೆರೆಯಬೇಡಿ! ನಾನು ಹೇಳಿದ್ದು ದೇಶವಿರೋಧಿ ಚಟುವಟಿಕೆ ನಡೆಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು, ನನ್ನ ಮಾತಿಗೆ ಈಗಲೂ ನಾನು ಬದ್ದ..” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ..ATM: ನೀವು ಎಟಿಎಂ ನಲ್ಲಿ ಹಣ ತೆಗೆಯುತ್ತಿರ?? ಹಾಗಿದ್ದರೆ ಸಿಹಿ ಸುದ್ದಿ- ಕೊನೆಗೂ ಬೇಕಾದುದನ್ನು ನೀಡಿದ ಎಟಿಎಂ. ಸುದ್ದಿ ಕೇಳಿದರೆ, ಕುಣಿದು ಸ್ಟೆಪ್ ಹಾಕ್ತಿರಾ.
Comments are closed.