Raghav Chadha: ಪರಿಣಿತಿ ಚೋಪ್ರಾ ರವರನ್ನು ಮದುವೆಯಾಗುತ್ತಿರುವ ಆಪ್ ಸಂಸದನಿಗೆ ಮೊದಲ ಶಾಕ್ – ನಟಿಯನ್ನು ಪಟಾಯಿಸಿದ ಬೆನ್ನಲ್ಲೇ ಏನಾಗಿದೆ ಗೊತ್ತೇ? ಪಾಪ ಗುರು.
Raghav Chadha: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Pariniti Chopra) ಇತ್ತೀಚೆಗೆ ಎಂಗೇಜ್ಮೆಂಟ್ ಮಾಡಿಕೊಂಡು, ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆಮ್ ಆದ್ಮಿ (Aam Aadmi) ಪಕ್ಷದ ಸಂಸದ ರಾಘವ್ ಚಡ್ಡಾ (Radha Chadha) ಅವರೊಡನೆ ಮದುವೆ ಫಿಕ್ಸ್ ಆಗಿದ್ದು, ಈ ವೇಳೆ ರಾಘವ್ ಚಡ್ಡಾ ಅವರಿಗೆ ಒಂದು ಸಂಕಷ್ಟ ಎದುರಾಗಿದೆ. ಅಷ್ಟಕ್ಕೂ ಆಗ್ತಿರೋದೇನು ಎಂದು ತಿಳಿಸುತ್ತೇವೆ ನೋಡಿ.. ರಾಘವ್ ಚಡ್ಡಾ ಅವರ ಬಂಗಲೆ ಹಂಚಿಕೆ ವಿಚಾರವನ್ನು ದೆಹಲಿ ಕೋರ್ಟ್ ತಡೆಹಿಡಿದಿದ್ದು ಇದರ ಬಳಿಕ ರಾಘವ್ ಅವರು ಕೇಸ್ ಉನ್ನತ ನ್ಯಾಯಾಲಯಕ್ಕೆ ಶಿಫ್ಟ್ ಆಗಿದೆ..

ಒಂದು ವರ್ಷದ ಹಿಂದೆ, ರಾಘವ್ ಚಡ್ಡಾ ಅವರಿಗೆ ದೆಹಲಿಯ ಪ್ಯಾಂಡರಾ ರಸ್ತೆಯಲ್ಲಿರುವ ಬಂಗಲೆ ತೆರವು ಮಾಡಬೇಕು ಎಂದು ರಾಜ್ಯಸಭಾ ಸೆಕ್ರೆಟರಿಯಟ್ ಆದೇಶ ನೀಡಿತ್ತು. ಸಂಸದರಿಗೆ ನೀಡುವ ಬಂಗಲೆಗಳಿಗಿಂತ ಉನ್ನತ ದರ್ಜೆಯ ಬಂಗಲೆ ನೀಡಿರುವುದರಿಂದ ಈ ಸೂಚನೆ ನೀಡಲಾಗಿತ್ತು. ಈ ಆದೇಶಕ್ಕೆ ಪಟಿಯಾಲ ಹೌಸ್ ಕೋರ್ಟ್ ತಡೆ ನೀಡಿದ್ದು, ಕಾನೂನಿನ ಪ್ರಕ್ರಿಯೆಗಳಿಲ್ಲದೆ ಸಂಸದ ರಾಘವ್ ಹಾಗೂ ಅವರ ತಂದೆ ತಾಯಿಯನ್ನು ಮನೆಯಿಂದ ಹೊರಗೆ ಹಾಕುವ ಹಾಗಿಲ್ಲ ಎಂದು ನ್ಯಾಯಾಧೀಶರಾದ ಸುಧಾಂಶು ಕೌಶಿಕ್ ತಡೆ ನೀಡಿದ್ದರು. ಮುಂದಿನ ವಿಚಾರಣೆ ಜುಲೈ 10ರಂದು ನಡೆಯಬೇಕು ಎಂದಿದ್ದರು. ಇದನ್ನು ಓದಿ..Adipurush: ಪಟಾಕಿಗೆ 50 ಲಕ್ಷ ಖರ್ಚು ಮಾಡಿರುವ ಆಧಿಪುರುಷ್ ತಂಡ, ಬಿಡುಗಡೆ ಕಾರ್ಯಕ್ರಮಕ್ಕೆ ಸುರಿದದ್ದು ಎಷ್ಟು ಕೋಟಿ ಗೊತ್ತೇ? ತಿಳಿದರೆ ಊಟ ಬಿಟ್ಟು ಚಿಂತೆ ಮಾಡ್ತೀರಾ.
ರಾಘವ್ ಚಡ್ಡಾ ಅವರು ಮೊದಲ ಸಾರಿ ಸಂಸದರಾಗಿದ್ದು, ಅವರಿಗೆ ಮಾಜಿ ಕೇಂದ್ರ ಮಂತ್ರಿ, ಮಾಜಿ ಮುಖ್ಯಮಂತ್ರಿ ಗಳಿಗೆ ನೀಡುವಂಥ ಬಂಗಲೆಯನ್ನು ಪಡೆಯಲು ಅರ್ಹತೆ ಇಲ್ಲ ಎಂದು ರಾಜ್ಯಸಭಾ ಸಮಿತಿ ಮುಖ್ಯಸ್ಥರಾದ ಸಿಎಂ ರಮೇಶ್ ಹೇಳಿದ್ದಾರೆ. ಬಿಜೆಪಿ ಪಕ್ಷದ ಸಂಸದರಾದ ರಾಧಾ ಮೋಹನ್ ದಾಸ್ ಅವರನ್ನು ಟೈಪ್ 7 ಬಂಗಲೆ ಇಂದ ಟೈಪ್ 5 ಬಂಗಲೆಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಘವ್ ಅವರು ಅವರು ತಮಗೆ ನೋಟಿಸ್ ಬಂದ ಬಳಿಕ ಕೋರ್ಟ್ ಮೆಟ್ಟಿಲೇರಿದ್ದು, ಈ ನೋಟಿಸ್ ಕಾನೂನಿಗೆ ಬಾಹಿರವಾಗಿದೆ ಎಂದು ಘೋಷಿಸಬೇಕು ಎಂದು ಕೇಳಿದ್ದರು.
ಹಾಗೆಯೇ, ತಮಗೆ ಮಾನಸಿಕವಾಗಿ ಸಂಕಟ ಮತ್ತು ಕಿರುಕುಳ ಕೊಟ್ಟಿದ್ದಕ್ಕೆ ₹5.50 ಲಕ್ಷ ಪರಿಹಾರ ಕೊಡಬೇಕು ಎಂದು ಹೇಳುವುದರ ಜೊತೆಗೆ.. 2022ರ ಜುಲೈ 6ರಂದು ತಮಗೆ ಟೈಪ್ 6 ಬಂಗಲೆ ಮಂಜೂರು ಮಾಡಲಾಗಿತ್ತು, ಆಗಸ್ಟ್ 29ರಂದು ತಮಗೆ ಟೈಪ್ 7 ವಸತಿ ಬೇಕು ಎಂದು ರಾಜ್ಯಸಭಾ ಸೆಕ್ರೆಟರಿಯಟ್ ಗೆ ಪತ್ರ ಬರೆದು ಮನವಿ ಮಾಡಿಕೊಂಡೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 3ರಂದು ರಾಜ್ಯಸಭೆಯಿಂದ ಈ ಬಂಗಲೆಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಎಲ್ಲವನ್ನೂ ನವೀಕರಣಗೊಳಿಸಿದ ಬಳಿಕ ನವೆಂಬರ್ ನಲ್ಲಿ ತಂದೆ ತಾಯಿ ಜೊತೆಗೆ ಶಿಫ್ಟ್ ಆಗಿದ್ದಾಗಿ ಹೇಳಿದ್ದಾರೆ. ಆದರೆ 2023ರ ಮಾರ್ಚ್ 3ರಂದು ಈ ಬಂಗಲೆ ಹಂಚಿಕೆಯನ್ನು ರದ್ದು ಮಾಡಲಾಗಿದೆ. ಇದನ್ನು ಓದಿ..Business Idea: ನಿಮ್ಮ ಬಳಿ ಐದು ಸಾವಿರ ಇದ್ದರೇ, ಪ್ರತಿ ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್. ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರದ ಈ ಅಂಗಡಿ ಆರಂಭಿಸಿ. ಏನು ಗೊತ್ತೇ?
Comments are closed.