Gruha lakshmi: ಗೃಹ ಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್- ಮತ್ತಷ್ಟು ಜನರ ಹೊರಕ್ಕೆ, ಈ ಬಾರಿ ಹೊರಹೋದದ್ದು ಯಾರು ಗೊತ್ತೇ??
Gruha Lakshmi: ಕಾಂಗ್ರೆಸ್ ಸರ್ಕಾರ ತಂದಿರುವ 5 ಗ್ಯಾರಂಟಿ ಯೋಜನೆಗಳು ಇನ್ನು ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಆದರೆ ಈ ಯೋಜನೆಗಳಿಗೆ ದಿನಕ್ಕೊಂದು ಕಂಡೀಷನ್ ಗಳು ಬರುತ್ತಲೇ ಇದ್ದು, ಜನರಲ್ಲಿ ಯೋಜನೆಯ ಸೌಲಭ್ಯ ಪಡೆಯುವ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮನೆಯನ್ನು ನಡೆಸುವ ಯಜಮಾನಿ ಬ್ಯಾಂಕ್ ಖಾತೆಗೆ ತಿಂಗಳಿಗೆ ₹2000 ಬರುತ್ತದೆ ಎನ್ನಲಾಗಿತ್ತು.

ಈ ಯೋಜನೆಗೆ ಜೂನ್ 15ರಿಂದ ಜುಲೈ 15ರವರೆಗು ಅರ್ಜಿ ಸಲ್ಲಿಸಿ ಸಮಯ ಇರಲಿದ್ದು, ಆಗಸ್ಟ್ ಇಂದ ಎಲ್ಲವೂ ಫೈನಲ್ ಆಗುತ್ತದೆ ಎನ್ನಲಾಗಿತ್ತು. ಮನೆಯಲ್ಲಿ ಅತ್ತೆ ಸೊಸೆ ಇಬ್ಬರು ಇದ್ದರೆ ಮನೆಯ ಯಜಮಾನಿ ಯಾರಾಗುತ್ತಾರೆ? ಯಾರಿಗೆ 2000 ಸಿಗುತ್ತದೆ ಎನ್ನುವ ಗೊಂದಲ ಇತ್ತು, ಅದಕ್ಕೆ ಉತ್ತರ ಸಿಕ್ಕಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರು ಯಜಮಾನಿ ಯಾರು ಎನ್ನುವುದನ್ನು ಮನೆಯವರೇ ನಿರ್ಧಾರ ಮಾಡಬೇಕು ಎಂದು ಹೇಳಿದರು. ಇದನ್ನು ಓದಿ..Google Pay: ಗೂಗಲ್ ಪೇ ನಲ್ಲಿ ಮತ್ತೊಂದು ಮಸ್ತ್ ವೈಶಿಷ್ಯತೇ- ಇನ್ನು ಮುಂದೆ ನಿಮಗೆ ಎಟಿಎಂ ಕಾರ್ಡ್ ಬೇಕಾಗೇ ಇಲ್ಲ. ಯಾಕೆ ಗೊತ್ತೇ??
ಹಾಗೆಯೇ ಐಟಿ ರಿಟರ್ನ್ಸ್ ಕಟ್ಟುತ್ತಿರುವವರಿಗೆ 2000 ಸಿಗುತ್ತಾ ಎನ್ನುವ ಗೊಂದಲಕ್ಕೆ ಐಟಿ ರಿಟರ್ನ್ಸ್ ಕಟ್ಟುವವರು ಗ್ಯಾರಂಟಿ ಬೇಕು ಎಂದು ಕೇಳಿಲ್ಲ ಎಂದಿದ್ದರು. ಆದರೆ ಈಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿರುವ ಹಾಗೆ, ಒಂದು ವೇಳೆ ಐಟಿ ರಿಟರ್ನ್ಸ್ ಕಟ್ಟುತ್ತಿದ್ದರೆ ಅವರಿಗೆ ಖಂಡಿತವಾಗಿ 2000 ಪ್ರಯೋಜನ ಸಿಗುವುದಿಲ್ಲ ಎಂದಿದ್ದಾರೆ. ಈಗ ಮತ್ತೊಂದು ಗೊಂದಲ ಶುರುವಾಗಿದೆ. ಒಂದು ವೇಳೆ ಮಕ್ಕಳು ಐಟಿ ರಿಟರ್ನ್ಸ್ ಕಟ್ಟುತ್ತಿದ್ದರೆ ಅವರ ತಂದೆ ತಾಯಿಗೆ 2000 ಸಿಗುತ್ತಾ ಎನ್ನುವ ಪ್ರಶ್ನೆ ಶುರುವಾಗಿದೆ.
ಒಂದು ವೇಳೆ ಮಕ್ಕಳು ತೆರಿಗೆ ಕಟ್ಟುತ್ತಿದ್ದರು ಸಹ ಅವರ ತಂದೆ ತಾಯಿಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ ಎನ್ನುವುದು ಕನ್ಫರ್ಮ್ ಆಗಿದೆ. ಹಾಗೆಯೇ ಒಂದು ವೇಳೆ ಮಕ್ಕಳು ಸಿಟಿಯಲ್ಲಿದ್ದು ಅವರು ಟ್ಯಾಕ್ಸ್ ಕಟ್ಟುತ್ತಿದ್ದರೆ, ತಂದೆ ತಾಯಿ ಹಳ್ಳಿಯಲ್ಲಿದ್ದರೆ ಅವರಿಗು ಗೃಹ ಲಕ್ಷ್ಮಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎನ್ನುವ ಮಾತು ಶುರುವಾಗಿದ್ದು, ಸಿಎಂ ಅವರೇ ಈ ಪ್ರಶ್ನೆಗೆ ಕ್ಲಾರಿಟಿ ಕೊಡಬೇಕಿದೆ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿರುವ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಈ ಬಿಸಿನೆಸ್ ಮಾಡಿ, ಕೈ ತುಂಬಾ ಕಾಸು, ನಿಮಗೆ ನೀವೇ ಬಾಸ್. ಲಕ್ಷ ಲಕ್ಷ ಆದಾಯ ಫಿಕ್ಸ್. ಏನು ಗೊತ್ತೇ?
Comments are closed.