Post Office: ಮತ್ತೆ 12 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೋಸ್ಟ್ ಆಫೀಸ್- ಕಡಿಮೆ ಓದಿದ್ದರೂ ಅರ್ಜಿ ಹಾಕಿ ಕೆಲಸ ಪಡೆಯಿರಿ . ಹೇಗೆ ಗೊತ್ತೇ??

Post Office: ಪೋಸ್ಟ್ ಆಫೀಸ್ ನಲ್ಲಿ ಕೆಲಸ ಸಿಕ್ಕರೆ, ಒಂದು ಮಟ್ಟಿಗೆ ಜೀವನ ಸೆಟ್ಲ್ ಆದ ಹಾಗೆ ಎಂದು ಅರ್ಥ. ಈಗ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕೊಡಲಾಗಿದೆ. ಹಾಗಾಗಿ ಅರ್ಹತೆ ಇರುವವರಿಗೆ ತಪ್ಪದೇ ಕೆಲಸಕ್ಕೆ ಅಪ್ಲೈ ಮಾಡಿ. ಒಟ್ಟಾರೆಯಾಗಿ 12,828 ಗ್ರಾಮೀಣ ಡಾಕ್ ಸೇವಕ್ (GDS-BPM/ABPM) ಹುದ್ದೆಗಳು ಖಾಲಿ ಇದೆ. ಈ ಕೆಲಸಕ್ಕೆ ಅರ್ಜಿ ಹಾಕುವುದಕ್ಕೆ ಇಂದು ಕೊನೆಯ ದಿನಾಂಕ. ಹಾಗಾಗಿ ಇಂದು ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ಮಾಹಿತಿಗಳನ್ನು ನಿಮಗೆ ತಿಳಿಸಿಕೊಡುತ್ತೇವೆ ನೋಡಿ..

post office job openings Post Office:

ಒಟ್ಟು 12,828 ಹುದ್ದೆಗಳು ಖಾಲಿ ಇದೆ, ಹುದ್ದೆಗಳು ಖಾಲಿ ಇರುವುದು ಎಲ್ಲೆಲ್ಲಿ ಎಂದು ನೋಡುವುದಾದರೆ. ಆಂಧ್ರ ಪ್ರದೇಶ- 118, ಅಸ್ಸಾಂ- 151, ಬಿಹಾರ್- 76, ಛತ್ತೀಸ್ಘಡ್- 342, ಗುಜರಾತ್- 110, ಹರಿಯಾಣ-8, ಹಿಮಾಚಲ ಪ್ರದೇಶ- 37, ಜಮ್ಮು & ಕಾಶ್ಮೀರ-89, ಜಾರ್ಖಂಡ್- 1125, ಕರ್ನಾಟಕ- 48, ಮಧ್ಯ ಪ್ರದೇಶ- 2992, ಮಹಾರಾಷ್ಟ್ರ- 620, ನಾರ್ತ್​ ಈಸ್ಟರ್ನ್​- 4384, ಒಡಿಶಾ- 948, ಪಂಜಾಬ್- 13, ರಾಜಸ್ಥಾನ- 1408, ತಮಿಳುನಾಡು- 18, ತೆಲಂಗಾಣ-96, ಉತ್ತರ ಪ್ರದೇಶ- 160, ಉತ್ತರಾಖಂಡ- 40 ಮತ್ತು ಪಶ್ಚಿಮ ಬಂಗಾಳ- 45 ಹುದ್ದೆಗಳು ಖಾಲಿ ಇದೆ. ಇದನ್ನು ಓದಿ..Free Bus Pass: ಖಾಸಗಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಕೊಡುತ್ತಾರೆಯೇ? ರಾಮ ಲಿಂಗ ರೆಡ್ಡಿ ಯವರು ಹೇಳಿದ್ದೇನು ಗೊತ್ತೇ??

ಈ ಕೆಲಸಕ್ಕೆ ಅಗತ್ಯವಿರುವ ವಿದ್ಯಾರ್ಹತೆ, ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿರಲೇಬೇಕು. ಈ ಕೆಲಸದ ವಯೋಮಿತಿ ನೋಡುವುದಾದರೆ, 2023ರ ಜೂನ್ 11ಕ್ಕೆ, ಕನಿಷ್ಠ 18 ವರ್ಷ ಆಗಿರಬೇಕು, 40 ವರ್ಷ ಮೀರಿರಬಾರದು. ಇಲ್ಲಿ ವಯೋಮಿತಿ ಸಡಿಲಿಕೆ ಇದ್ದು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ,
SC/ ST ಅಭ್ಯರ್ಥಿಗಳಿಗೆ 5 ವರ್ಷ, PWD (ಜನರಲ್) ಅಭ್ಯರ್ಥಿಗಳಿಗೆ 10 ವರ್ಷ, PWD (OBC) ಅಭ್ಯರ್ಥಿಗಳಿಗೆ 13 ವರ್ಷ, PWD (SC/ST) ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅಪ್ಲೈ ಮಾಡಲು ಅರ್ಜಿ ಶುಲ್ಕ ಎಷ್ಟು ಎಂದು ನೋಡುವುದಾದರೆ, ಮಹಿಳೆಯರು, SC, ST, PwD ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಬೇರೆ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಕೆಲಸಕ್ಕೆ ಆಯ್ಕೆ ಮಾಡುವುದು, ಮೆರಿಟ್ ಲಿಸ್ಟ್, ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ. ಈ ಕೆಲಸಕ್ಕೆ ನೀಡುವ ತಿಂಗಳ ಸಂಬಳ, ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್) ಹುದ್ದೆಗೆ ತಿಂಗಳಿಗೆ ₹12,000 ಇಂದ ₹29,380 ರೂಪಾಯಿಗಳು. ಗ್ರಾಮೀಣ ಡಾಕ್ ಸೇವಕ್ (ಅಸಿಸ್ಟಂಟ್ ಪೋಸ್ಟ್ ಮಾಸ್ಟರ್) ಹುದ್ದೆಗೆ ತಿಂಗಳಿಗೆ ₹10,000 ಇಂದ ₹24,470 ರೂಪಾಯಿ. ಇಂದೇ ಅರ್ಜಿ ಸಲ್ಲಿಸಿ. ಇದನ್ನು ಓದಿ..Hot Star Disney: ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ಹಾಟ್ ಸ್ಟಾರ್- ಇನ್ನು ಮುಂದೆ ಉಚಿತವಾಗಿ ಏನೆಲ್ಲಾ ಸಿಗಲಿದೆ ಗೊತ್ತೇ??

Comments are closed.