Chamundi Hills: ಭಕ್ತಾದಿಗಳಿಗೆ ಶುಭ ಸುದ್ದಿ- ಸೆಲೆಬ್ರೆಟಿಗಳಿಗೆ ಬಿಗ್ ಶಾಕ್- ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಮುನ್ನ ಈ ವಿಷಯ ತಿಳಿಯಿರಿ.
Chamundi Hills: ಆಷಾಢ ಮಾಸ ಶುರುವಾಗಲು ಉಳಿದಿರುವುದು ಇನ್ನು ಕೆಲವೇ ದಿನಗಳು. ಈ ಮಾಸದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ನಾಲ್ಕು ಆಷಾಢ ಶುಕ್ರವಾರಗಳು ಹಾಗೂ ಜುಲೈ 10ರಂದು ಅಮ್ಮನವರ ವರ್ಧಂತಿ ಮಹೋತ್ಸವದ ಚಾಮುಂಡಿ ಬೆಟ್ಟದಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳು ನಡೆಯಲಿದ್ದು, ಈ ವರ್ಷ ದರ್ಶನದಲ್ಲಿ ಸ್ವಲ್ಪ ಬದಲಾವಣೆ ತರಲಾಗಿದೆ.

ಈ ಬಗ್ಗೆ ಚಾಮುಂಡಿ ಬೆಟ್ಟ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತರು ಮಾಹಿತಿ ನೀಡಿದ್ದಾರೆ. ಅರ್ಚಕರು ಹೇಳಿರುವ ಹಾಗೆ, ಜೂನ್ 23ರಂದು ಮೊದಲ ಆಷಾಢ ಶುಕ್ರವಾರ, ಜುಲೈ 10ರಂದು ಅಮ್ಮನವರ ವರ್ಧಂತಿ ಮಹೋತ್ಸವ, ಈ ಮಾಸದಲ್ಲಿ ಶಕ್ತಿ ದೇವತೆಗೆ ಪೂಜೆ ಮಾಡುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ, ಈ ಪೂಜೆಗಳು ನಡೆಯುವ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಾಯಿಯ ಆಶೀರ್ವಾದ ಪಡೆಯಬೇಕು ಎಂದು ಅರ್ಚಕರು ಮನವಿ ಮಾಡಿದ್ದಾರೆ.. ಇದನ್ನು ಓದಿ..Gruhajyothi: ಇದಪ್ಪ ಕಾಮಿಡಿ ಅಂದ್ರೆ: ಹೊಸದಾಗಿ ಮನೆ ಕಟ್ಟಿದ್ದರೆ ಉಚಿತ ವಿದ್ಯುತ್ ಕತೆ ಏನಾಗಲಿದೆ ಗೊತ್ತೇ?? ಸಚಿವರೇ ನಗು ಬರುವಂತೆ ಹೇಳಿದ್ದೇನು ಗೊತ್ತೇ??
ಅಷ್ಟೇ ಅಲ್ಲದೆ ಇಲ್ಲಿ ಮತ್ತೊಂದು ವಿಚಾರ ಚರ್ಚೆ ಆಗಿದ್ದು, VIP ಪಾಸ್ ಗಳನ್ನು ಪಡೆದು ಕೆಲವರು ಆಷಾಢ ಮಾಸದಲ್ಲಿ ದೇವಿಯ ದರ್ಶನಕ್ಕೆ ಬರುತ್ತಿದ್ದರು. ಒಂದು ಪಾಸ್ ನಲ್ಲಿ ಏಳೆಂಟು ಜನರು ಬರುತ್ತಿದ್ದ ಕಾರಣ, ಬೇರೆ ಭಕ್ತರಿಗೂ ತೊಂದರೆ ಆಗುತ್ತಿತ್ತು, ಇದರಿಂದಾಗಿ ಈ ವರ್ಷ ವಿಐಪಿ ಪಾಸ್ ಗಳನ್ನು ರದ್ದು ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿದ್ದು, ತನ್ವೀರ್ ಸೇಠ್ ಹೇಳಿದ್ದು, ಅರ್ಚಕರು ಕೂಡ ಈ ಮಾತಿಗೆ ಒಪ್ಪಿಗೆ ಕೊಟ್ಟಿದ್ದಾರಂತೆ.
ವಿಐಪಿ ಪಾಸ್ ರದ್ದು ಮಾಡುವುದೇ ಒಳ್ಳೆಯದು ಎನ್ನುವುದು ಅರ್ಚಕರ ಭಾವನೆ ಕೂಡ ಆಗಿದೆ. ಇದರಿಂದ ಸಾಮಾನ್ಯ ಜನರಿಗೆ ಏನೋ ತುಸು ನೆಮ್ಮದಿ ಆಗಿದೆ, ಆದರೆ ಸೆಲೆಬ್ರಿಟಿಗಳಿಗೆ ಇದು ಬಿಗ್ ಶಾಕ್. ಸಾಕಷ್ಟು ಸೆಲೆಬ್ರಿಟಿಗಳು ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಬಂದು ಹೋಗುತ್ತಿದ್ದರು, ಆದರೆ ಈ ವರ್ಷ ಹಾಗೆ ಹೋಗುವುದು ಕಷ್ಟವಾಗಲಿದೆ. ಇದನ್ನು ಓದಿ..Tirupati: ಕಡಿಮೆ ಬೆಳೆಗೆ ಇನ್ನು ಮುಂದೆ ನೀವು ತಿರುಪತಿಗೆ ಹೋಗಬಹುದು- ಅದು ರಾಜಧಾನಿ ಬೆಂಗಳೂರಿನಿಂದ. ಹೇಗೆ ಗೊತ್ತೇ??
Comments are closed.