Property Sharing Law: ಗಂಡನ ಪಿತ್ರಾರ್ಜಿತ ಹಾಗೂ ಗಂಡ ದುಡಿದ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಹಕ್ಕಿದೆ ಗೊತ್ತೇ?? ಭಾರತೀಯ ಕಾನೂನು ಏನು ಹೇಳುತ್ತದೆ ಗೊತ್ತೇ?
Property Sharing Law: ನಮ್ಮ ಭಾರತದ ಸಂವಿಧಾನ ಸಾಮಾಜಿಕ ಮತ್ತು ಆರ್ಥಿಕ ಮಟ್ಟದಲ್ಲಿ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸಲು ಸಾಕಷ್ಟು ಹಕ್ಕುಗಳನ್ನು ನೀಡುತ್ತದೆ. ಕಾಲಕ್ಕೆ ತಕ್ಕ ಹಾಗೆ ಸಂಸತ್ತಿನಲ್ಲಿ ಕಾನೂನು ತರುವ ಮೂಲಕ ಮಹಿಳೆಯರ ಸಬಲೀಕರಣ ಆಗುವ ಹಾಗೆ ಮಾಡುತ್ತಿದೆ. ಹೆಣ್ಣಿಗೆ ಗಂಡಿನಷ್ಟು ಸಮಾನ ಹಕ್ಕು ಸಿಗುತ್ತಿಲ್ಲ, ಈ ಬಗ್ಗೆ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಲು, ಮಹಿಳೆಯರ ಆಸ್ತಿಗೆ ಸಂಬಂಧಿಸಿದ ಹಾಗೆ ಕೆಲವು ಹಕ್ಕುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಗಂಡನ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಹಕ್ಕಿದೆ? ಅತ್ತೆಯ ಆಸ್ತಿಯಲ್ಲಿ ಸೊಸೆಗೆ ಎಷ್ಟು ಹಕ್ಕಿದೆ? ಇದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಒಂದು ವೇಳೆ ಮದುವೆಯಾದ ನಂತರ ಅಥವಾ ಮದುವೆಗಿಂತ ಮೊದಲು ಗಂಡನೆ ಎಲ್ಲಾ ಆಸ್ತಿಯನ್ನು ಸ್ವಂತವಾಗಿ ಸಂಪಾದನೆ ಮಾಡಿದ್ದರೆ, ಆ ಇಡೀ ಆಸ್ತಿಯ ಅಧಿಕಾರ ಆ ವ್ಯಕ್ತಿಯ ಮೇಲೆಯೇ ಇರುತ್ತದೆ. ಇದನ್ನು ಓದಿ..SIP: ನೋಡುಗುರು ಕಡಿಮೆ ಅಂದ್ರೆ 266 ರೂಪಾಯಿಯಂತೆ ಪ್ಲಾನ್ ಮಾಡಿ ನೀವು ಉಳಿಸಿದ, ಕೋಟ್ಯಧಿಪತಿ ಆಗ್ತೀರಾ. ಅದೆಷ್ಟು ಸುಲಭ ಗೊತ್ತೆ? ನೀವೇನು ಮಾಡ್ಬೇಕು ಗೊತ್ತೇ?
ಒಬ್ಬ ವ್ಯಕ್ತಿಯ ಆಸ್ತಿಯಲ್ಲಿ ಮನೆ, ಅಂಗಡಿ ಹಾಗೂ ಇನ್ನಿತರ ಆಸ್ತಿಗಳು ಇದ್ದರೆ, ಅದರ ಸಂಪೂರ್ಣವಾರ ಹಕ್ಕು ಆ ವ್ಯಕ್ತಿಗೆ ಇರುತ್ತದೆ. ಆತ ತನ್ನಿಷ್ಟದ ಹಾಗೆ ಯಾವಾಗ ಬೇಕಾದರು ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಬಹುದು ಅಥವಾ ಆಸ್ತಿ ಬಗ್ಗೆ ವಿಲ್ ಮಾಡಿಸಿ ಇಡಬಹುದು. ಆಸ್ತಿ ಬಗ್ಗೆ ಪೂರ್ತಿ ಹಕ್ಕು ಅವರದ್ದೇ ಆಗಿರುತ್ತದೆ.
ಇನ್ನೊಂದು ವಿಚಾರ, ಗಂಡ ಬದುಕಿದ್ದಾಗ ಹೆಂಡತಿಗೆ ತನ್ನ ಗಂಡನ ಆಸ್ತಿ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಹಕ್ಕು ಪಡೆಯಲು ಸಾಧ್ಯವೂ ಇಲ್ಲ. ಗಂಡನೆ ತನ್ನ ಆಸ್ತಿಯಲ್ಲಿ ಹೆಂಡತಿಗೆ ಪಾಲು ನೀಡಬೇಕೋ ಬೇಡವೋ ಎನ್ನುವುದನ್ನು ನಿರ್ಧಾರ ಮಾಡಬೇಕು. ಇದನ್ನು ಓದಿ..Personal finance: ನಿಮಗೆ ಹಣದ ಸಮಸ್ಯೆನಾ? ತಿಂಗಳ ಕೊನೆಯಲ್ಲಿ ದುಡ್ಡು ಇರುತ್ತಿಲ್ಲವೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು- ದುಡ್ಡು ತಾನಾಗಿಯೇ ಉಳಿಯುತ್ತದೆ.
ಗಂಡ ಸಾಯುವುದಕ್ಕಿಂತ ಮೊದಲು ತನ್ನ ಆಸ್ತಿಯನ್ನು ಹೆಂಡತಿಯ ಬದಲು ಬೇರೆ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಿಬಿಟ್ಟಿದ್ದರೆ, ಆ ಥರದ ಪರಿಸ್ಥಿತಿಯಲ್ಲಿ, ಆಸ್ತಿಯಲ್ಲಿ ಹೆಂಡತಿ ಹಕ್ಕು ಪಡೆಯಲು ಸಾಧ್ಯ ಆಗುವುದಿಲ್ಲ. ಹಾಗಿದ್ದಾಗಸ್ ಆಸ್ತಿ ಮಾಲೀಕತ್ವದ ಮೇಲೆ ಗಂಡನದ್ದು ಪೂರ್ತಿ ಹಕ್ಕು ಇರುತ್ತದೆ.
Comments are closed.