Teacher: ಪುತ್ತೂರು ಕನ್ನಡ ಶಾಲೆಗೇ ಟೀಚರ್ ಆಗಿ ಬಂದವರು ಯಾರು ಗೊತ್ತೇ?? ಕನ್ನಡ ಹೋರಾಟಗಾರರೇ ಎಲ್ಲಿದ್ದೀರಾ??

Teacher: ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾವನ್ನು ಎಲ್ಲರೂ ನೋಡಿದ್ದೀರಿ, ಈ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಲಭಿಸಿತು. ಈ ಸಿನಿಮಾದ ಮುಖ್ಯ ಕಥಾವಸ್ತು ಕನ್ನಡದವರು ಇರುವ ಕಾಸರಗೋಡಿನ ಸರ್ಕಾರಿ ಕನ್ನಡ ಶಾಲೆಯಲ್ಲಿ ಕನ್ನಡ ಗೊತ್ತಿಲ್ಲದ ಮಲಯಾಳಿ ಶಿಕ್ಷಕ ಬಂದಾಗ, ಏನೆಲ್ಲಾ ಆಗುತ್ತದೆ ಎನ್ನುವುದಾಗಿತ್ತು. ಇದೀಗ ಅಂಥದ್ದೇ ಒಂದು ಘಟನೆ ನಿಜ ಜೀವನದಲ್ಲಿ ನಡೆದಿದೆ.

kasargod school Teacher:
Teacher: ಪುತ್ತೂರು ಕನ್ನಡ ಶಾಲೆಗೇ ಟೀಚರ್ ಆಗಿ ಬಂದವರು ಯಾರು ಗೊತ್ತೇ?? ಕನ್ನಡ ಹೋರಾಟಗಾರರೇ ಎಲ್ಲಿದ್ದೀರಾ?? 2

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಆಡೂರು ಎನ್ನುವ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿಗೆ ಸಮಾಜ ವಿಜ್ಞಾನಕ್ಕೆ ಹೊಸ ಶಿಕ್ಷಕಿ ಬಂದಿದ್ದು, ಇವರಿಗೆ ಕನ್ನಡದಲ್ಲಿ ಆ,ಆ,ಇ, ಈ ಸಹ ಬರುವುದಿಲ್ಲ ಎನ್ನಲಾಗಿದೆ. 10ನೇ ತರಗತಿ ಮಕ್ಕಳಿಗೆ ಈ ರೀತಿ ಭಾಷೆ ಬರದ ಶಿಕ್ಷಕಿಯನ್ನು ಕಳಿಸಿದರೆ ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವ ಮಾತುಗಳು ವ್ಯಕ್ತವಾಗುತ್ತಿದೆ. ಇದನ್ನು ಓದಿ..Bank Locker: ನೀವು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ಕಳ್ಳತನ ಆದ್ರೆ- ಏನಾಗುತ್ತದೆ ಗೊತ್ತೆ? ನಿಮಗೆ ಅದು ವಾಪಸ್ಸು ಬರುತ್ತಾ??

ಈ ಟೀಚರ್ ಭಾನುವಾರ ಎನ್ನಲು ಸೋಮವಾರ ಎಂದು ಹೇಳುತ್ತಾರಂತೆ. ಇವರೇ ಕನ್ನಡದಲ್ಲಿ ಪಾಠ ಮಾಡುತ್ತೇನೆ ಎಂದು ಬಂದಿದ್ದು, ಅವರಿಗೆ ಭಾಷೆ ಗೊತ್ತಿಲ್ಲದ ಕಾರಣ, ಮಲಯಾಳಂನಲ್ಲಿ ಅಥವಾ ಕನ್ನಡವೇ ಗೊತ್ತಿಲ್ಲದವರು ಕನ್ನಡದಲ್ಲಿ ಪಾಠ ಮಾಡಿದ್ರೆ ನಮಗೆ 10ನೇ ತರಗತಿ ಓದಲು ಆಗುವುದಿಲ್ಲ, ನಾವು ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ತೊಂದರೆಯನ್ನು ಹೇಳಿಕೊಂಡಿದ್ದಾರೆ.

ಈ ಶಾಲೆಯಲ್ಲಿ ಕನ್ನಡ ಮತ್ತು ಮಲಯಾಳಂ ಮಾಧ್ಯಮ ಜೊತೆಯಾಗಿದ್ದು, ಬಂದಿರುವ ಶಿಕ್ಷಕಿ ಈ ರೀತಿ ಮಾಡಿದ್ದಾರೆ. ಕನ್ನಡ ಪದಗಳ ಉಚ್ಚಾರಣೆ ಬರದ ಶಿಕ್ಷಕಿಯರನ್ನು ಕಳಿಸಬೇಡಿ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಎಲ್ಲರೂ ಸಹ ಆಕ್ರೋಶಗೊಂಡಿದ್ದಾರೆ. ಕನ್ನಡ ಸರ್ಕಾರಿ ಶಾಲೆಯನ್ನು ಮುಚ್ಚಿಸಲು ಕೇರಳ ಸರ್ಕಾರ ಮಾಡಿರುವ ಕಿತಾಪತಿ ಇದು ಎನ್ನಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Car Tips: ನಿಮ್ಮ ಕಾರ್ ಕಳ್ಳತನವಾಗದಂತೆ ಎಚ್ಚರ ವಹಿಸುವುದು ಹೇಗೆ?? ಬೆಸ್ಟ್ ಟಿಪ್ಸ್ ಫಾಲೋ ಮಾಡಿದರೆ, ಕಳ್ಳ ಬಂದ್ರು ಏನು ಮಾಡೋಕೆ ಆಗಲ್ಲ.

Comments are closed.