HD Kumaraswamy: ಇದುವರೆಗೂ ಕಾಂಗ್ರೆಸ್ ಗ್ಯಾರಂಟಿ ಗಳ ಬಗ್ಗೆ ಜೆಡಿಎಸ್ ಪ್ರತಿಭಟನೆ ಮಾಡುತ್ತಿಲ್ಲ ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣ ಏನು ಗೊತ್ತೇ?

HD Kumaraswamy: ಇದುವರೆಗೂ ಕಾಂಗ್ರೆಸ್ ಗ್ಯಾರಂಟಿ ಗಳ ಬಗ್ಗೆ ಜೆಡಿಎಸ್ ಪ್ರತಿಭಟನೆ ಮಾಡುತ್ತಿಲ್ಲ ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣ ಏನು ಗೊತ್ತೇ?

HD Kumaraswamy: ಕಾಂಗ್ರೆಸ್ (Congress) ಸರ್ಕಾರವು ಎಲೆಕ್ಷನ್ ವೇಳೆ 5 ಗ್ಯಾರಂಟಿ ಯೋಜನೆಗಳನ್ನು ಉಚಿತವಾಗಿ ಜನರಿಗೆ ನೀಡುವುದಾಗಿ ಭರವಸೆ ನೀಡಿತ್ತು, ಅದನ್ನು ಈಗ ಒಂದೊಂದಾಗಿ ಜಾರಿಗೆ ತರುತ್ತಿದೆ. ಈ ನಿರ್ಧಾರಗಳು ಗ್ಯಾರಂಟಿಗಳ ಬಗ್ಗೆ ವಿರೋಧ ಪಕ್ಷ ಬಿಜೆಪಿ ಟೀಕೆ ಮಾಡುತ್ತಿದೆ, ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದೆ. ಆದರೆ ಜೆಡಿಎಸ್ (JDS) ಪಕ್ಷ ಮಾತ್ರ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೇ ಪ್ರಶ್ನೆ ಎತ್ತಿಲ್ಲ, ಪ್ರತಿಭಟನೆಯನ್ನು ಸಹ ಮಾಡಿಲ್ಲ. ಇದಕ್ಕೆ ಕಾರಣ ಏನು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

hd kumaraswamy about congres HD Kumaraswamy:
HD Kumaraswamy: ಇದುವರೆಗೂ ಕಾಂಗ್ರೆಸ್ ಗ್ಯಾರಂಟಿ ಗಳ ಬಗ್ಗೆ ಜೆಡಿಎಸ್ ಪ್ರತಿಭಟನೆ ಮಾಡುತ್ತಿಲ್ಲ ಯಾಕೆ ಗೊತ್ತೇ? ಇದರ ಹಿಂದಿರುವ ಕಾರಣ ಏನು ಗೊತ್ತೇ? 2

“ಈಗ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡಿದೆ, ಆದರೆ ಅದರಿಂದ ಜನರ ಮೇಲೆಯೇ ಹೆಚ್ಚು ಹೊರೆ ಆಗುತ್ತಿದೆ. ಎಲ್ಲರಿಗೂ ಫ್ರೀ ಎಂದವರು ಟಾರಿಫ್ ಹಾಕಿದ್ದಾರೆ. ಫ್ರೀ ಪ್ರಯಾಣ ಎಂದು ಹೇಳಿ ಅದಕ್ಕೆ ಮಾರ್ಗಸೂಚಿ ಹಾಕಿದ್ದಾರೆ. ಸಣ್ಣ ಕೈಗಾರಿಕೋದ್ಯಮದ ಉದ್ಯಮಿಗಳು (Small Industries) ಸಿಎಂ ಹತ್ತೂರ ಹೋದರೆ ಅವರ ಮನವಿ ಕೇಳದೆ, ಅವರಿಗೇ ಸಿಎಂ ಅವರು ಪಾಠ ಮಾಡಿದ್ದಾರೆ. ಇದನ್ನು ಓದಿ..Bank Locker: ನೀವು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ಕಳ್ಳತನ ಆದ್ರೆ- ಏನಾಗುತ್ತದೆ ಗೊತ್ತೆ? ನಿಮಗೆ ಅದು ವಾಪಸ್ಸು ಬರುತ್ತಾ??

ಕಾಂಗ್ರೆಸ್ ಪಕ್ಷ ಕೊಟ್ಟಿರುವ ಗ್ಯಾರಂಟಿ ಗಳ ಬಗ್ಗೆ ಮೊದಲು ಜೆಡಿಎಸ್ ಧ್ವನಿ ಎತ್ತಿತ್ತು, ಆದರೆ ಈಗ ನಾನು ದುಡುಕುವುದಿಲ್ಲ. ಹೊಸ ಸರ್ಕಾರದ ಬಜೆಟ್ ಮಂಡನೆ ಜುಲೈ 7ರಂದು ನಡೆಯುತ್ತದೆ. ಆಗ ಯಾವೆಲ್ಲಾ ವಿಚಾರಕ್ಕೆ ತೆರಿಗೆ ಜಾಸ್ತಿ ಮಾಡ್ತಾರೆ ಅಂತ ಗೊತ್ತಾಗುತ್ತೆ..ಅಲ್ಲಿವರೆಗೂ ನಾವು ಕಾಯುತ್ತೇವೆ. ಎಲೆಕ್ಷನ್ ವೇಳೆ ರಾಷ್ಟ್ರ ಮಟ್ಟದ ಪಕ್ಷಗಳು ಪ್ರತಿಭಟನೆ ಎಂದಾಗ ತಲೆಗೆ ಇಷ್ಟು ಎಂದು ಫಿಕ್ಸ್ ಮಾಡಿರೋದ್ರಿಂದ, ಜನರು ಕೂಡ ಪ್ರತಿಭಟನೆ ಎಂದ ತಕ್ಷಣ ಬೀದಿಗೆ ಬರೋದಿಲ್ಲ. ಕಾಂಗ್ರೆಸ್ ಸರ್ಕಾರ ವೈಫಲ್ಯ ಅನುಭವಿಸುತ್ತಿರುವುದು ಜನರಿಗೆ ಗೊತ್ತಾಗಬೇಕು.

ಇದರ ಬಗ್ಗೆ ನಾನು ದುಡುಕುವುದಿಲ್ಲ..” ಎಂದು ಹೇಳಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಸ್ಪಷ್ಟನೆ ಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇದನ್ನೆಲ್ಲ ನಡೆಸುವಾಗ ಬಿಜೆಪಿ ಸರ್ಕಾರವೇನೋ ಟಾಂಗ್ ಕೊಡುತ್ತಿದೆ, ಟೀಕೆ ಮಾಡುತ್ತಿದೆ. ಆದರೆ ಜೆಡಿಎಸ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದು ಕುತೂಹಲ ಹಾಗೂ ಅನುಮಾನ ಎರಡನ್ನು ಮೂಡಿಸಿತ್ತು, ಈಗ ಹೆಚ್.ಡಿ ಕುಮಾರಸ್ವಾಮಿ ಅವರ ಮಾತಿನಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಇದನ್ನು ಓದಿ..Law: ಬೇರೆಯೊಬ್ಬರ ಪತ್ನಿಯ ಜೊತೆ ಡಿಂಗ್ ಡಾಂಗ್ ಆಗುವವರಿಗೆ ಸಿಹಿ ಸುದ್ದಿ ಕೊಟ್ಟ ಹೈ ಕೋರ್ಟ್- ಹೊಸ ತೀರ್ಪು ಏನು ಗೊತ್ತೆ?

Comments are closed.