Chetan Ahimsa: ಇಷ್ಟು ದಿವಸ ಸುಮ್ಮನಿದ್ದು ಈಗ ಸಿದ್ದು ಸರ್ಕಾರಕ್ಕೆ ಠಕ್ಕರ್ ಕೊಟ್ಟ ಚೇತನ್- ಬಹಿರಂಗವಾಗಿ ಇತ್ತ ಡಿಮ್ಯಾಂಡ್ ಏನು ಗೊತ್ತೇ?

Chetan Ahimsa: ಇಷ್ಟು ದಿವಸ ಸುಮ್ಮನಿದ್ದು ಈಗ ಸಿದ್ದು ಸರ್ಕಾರಕ್ಕೆ ಠಕ್ಕರ್ ಕೊಟ್ಟ ಚೇತನ್- ಬಹಿರಂಗವಾಗಿ ಇತ್ತ ಡಿಮ್ಯಾಂಡ್ ಏನು ಗೊತ್ತೇ?

Chetan Ahimsa: ರಾಜ್ಯದಲ್ಲಿ ಈಗ ಅನ್ನಭಾಗ್ಯ (Annabhagya Scheme) ಯೋಜನೆಯ ವಿಚಾರ ಭಾರಿ ಸದ್ದು ಮಾಡುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು ಎಂದು ಕರ್ನಾಟಕ (Karnataka) ರಾಜ್ಯದ ಜನರು ಹಾಗು ವಿರೋಧ ಪಕ್ಷದವರು ಆಗ್ರಹಿಸುತ್ತಿದ್ದಾರೆ. ಚುನಾವಣೆಗಿಂತ ಮೊದಲೇ ಪ್ರಣಾಳಿಕೆಯಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಎಲ್ಲರಿಗೂ 10ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು.

chetan-ahimsa-comments-about-anna-bhagya-scheme
chetan-ahimsa-comments-about-anna-bhagya-scheme

ಅಧಿಕಾರಕ್ಕೆ ಬಂದ ಬಳಿಕ ಜುಲೈ ಇಂದ ಅನ್ನಭಾಗ್ಯ ಯೋಜನೆ ಜಾರಿಗೆ ತರುತ್ತದೆ ಎಂದು ಕೂಡ ಹೇಳಲಾಯಿತು. ಆದರೆ ಅನ್ನಭಾಗ್ಯ ಯೋಜನೆಯ ಬಗ್ಗೆ ಈಗ ಬೇರೆಯದೇ ಮಾತುಗಳು ಕೇಳುಬರುತ್ತಿದೆ. ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಪೂರೈಕೆ ಮಾಡುವುದಕ್ಕೆ ಒಪ್ಪಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಹೇಳಿದರು. ಕೇಂದ್ರ ಸರ್ಕಾರದ ಬಳಿ ಅಕ್ಕಿ ಇದ್ದರು ಅವರು ಕೊಡುತ್ತಿಲ್ಲ,ಹಣ ಕೊಡುತ್ತೇವೆ ಎಂದರು ಕೂಡ ಅಕ್ಕಿ ಕೊಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದನ್ನು ಓದಿ..Narendra Modi: ದಿಡೀರ್ ಎಂದು ತನ್ನ 15 ಎಕರೆ ಭೂಮಿಯನ್ನು ಮೋದಿ ಹೆಸರಿಗೆ ಬರೆಯಲು ಮುಂದಾದ ಅಜ್ಜಿ.

ನಂತರ ಬೇರೆ ರಾಜ್ಯಗಳ ಜೊತೆಗೆ ಮಾತುಕತೆ ನಡೆದಿದೆ ಎಂದು ಹೇಳಿ, ಮತ್ತೆ ಅಕ್ಕಿ ಸಿಗುತ್ತಿಲ್ಲ ಎಂದಿನಂತೆ 5ಕೆಜಿ ಅಕ್ಕಿ ಜೊತೆಗೆ ಇನ್ನು 5 ಕೆಜಿ ಅಕ್ಕಿಯ ಹಣವನ್ನು ಜನರ ಖಾತೆಗೆ ಹಾಕುತ್ತೇವೆ ಎಂದು ಹೇಳಿದರು. ಈ ವಿಚಾರಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ನಟ ಚೇತನ್ (Chetan Ahimsa) ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ನಟ ಚೇತನ್ (Chetan Ahimsa) ಅವರು, “ಸಿದ್ದರಾಮಯ್ಯ ಅವರ ಸರ್ಕಾರ ಕೊಟ್ಟ ಮಾತಿನ ಹಾಗೆ ನಡೆದುಕೊಳ್ಳಬೇಕು.

5ಕೆಜಿ ಅಕ್ಕಿ ಬದಲಾಗಿ ಹಣ ಕೊಡುವುದು ಬೇಡ, ಅದರ ಬದಲಾಗಿ ರಾಗಿ, ಜೋಳ ಕೊಟ್ಟರೆ ಒಳ್ಳೆಯದು. ಅಕ್ಕಿ ವಿಷಯಕ್ಕೆ ಬೇರೆ ರಾಜ್ಯಕ್ಕೆ ಹೋಗುವ ಬದಲಾಗಿ ನಮ್ಮ ರಾಜ್ಯದ ರೈತರನ್ನು ಬೆಂಬಲಿಸಿ ಬೆಳೆಸಬೇಕು, ಆಗ ಕೆಲಸ ಆಗುತ್ತದೆ..” ಎಂದು ಹೇಳಿದ್ದಾರೆ Chetan Ahimsa. “ಬಡವರಿಗೆ ಅಕ್ಕಿಯ ದುಡ್ಡು ಕೊಡೋದು ಬೇಡ ಎಂದು ಕೆಜೆ ಜಾರ್ಜ್ ಅವರು ಹೇಳಿದ್ದಾರೆ. ಜಾರ್ಜ್ ಅವರು ಕೂಡ ಒಬ್ಬ ಸಚಿವರಾಗಿ, ಶ್ರೀಮಂತ ವ್ಯಕ್ತಿಯಾಗಿ ಈ ಥರ ಮಾತಾಡೋದು ಅವರಿಗೆ ಶೋಭೆ ಅಲ್ಲ. ರಾಗಿ ಜೋಳವನ್ನು ಬಡವರಿಗೆ ಕೊಡಬೇಕು. ಇದನ್ನು ಓದಿ..Rules Change: ಇವತ್ತಿನಿಂದ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ- ಏನೆಲ್ಲಾ ಬದಲಾಗಿದೆ ಗೊತ್ತೇ? ಬಡವರು ಬದುಕೋದು ಹೇಗೆ.

ಬಡವರಿಗೆ ಫ್ರೀಯಾಗಿ ರೇಷನ್ ಕೊಡೋದು ಮಾತ್ರವಲ್ಲ, ಫ್ರೀ ಶಿಕ್ಷಣ, ಆರೋಗ್ಯವನ್ನು ಸಹ ಕೊಡಬೇಕು..ಈ ಎರಡು ವಿಷಯಗಳನ್ನು ರಾಷ್ಟೀಕರಣ ಮಾಡಬೇಕು.. ಎಂದು ಹೇಳಿದ್ದಾರೆ ನಟ ಚೇತನ್ (Chetan Ahimsa) . ಇತ್ತ ಬಿಜೆಪಿ ನಾಯಕರು ಸಹ ಈ ವಿಚಾರವಾಗಿ 10ಕೆಜಿ ಅಕ್ಕಿ ಕೊಡಲೇಬೇಕು ಎಂದು ಆಗ್ರಹಿಸುತ್ತಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..RBI New Rules: ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡ RBI- ಇನ್ನು ಮುಂದೆ ಮಾದ್ಯಮವರ್ಗದವರಿಗೆ ಬಿಗ್ ಶಾಕ್.

Comments are closed.