Electric Vehicles: ದಿಡೀರ್ ಎಂದು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಬಾರಿ ಕುಸಿತ- ಕಾರಣಗಳ ಸಮೇತ ವಿವರಣೆ.

Electric Vehicles: ದಿಡೀರ್ ಎಂದು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಬಾರಿ ಕುಸಿತ- ಕಾರಣಗಳ ಸಮೇತ ವಿವರಣೆ.

Electric Vehicles: ಕೆಲ ಸಮಯದ ಹಿಂದೆ ಇದ್ದಿದ್ದಕ್ಕೂ ಈಗ ಇರುವುದಕ್ಕೂ ಹೋಲಿಕೆ ಮಾಡಿದರೆ, ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್ (Ebikes) ಮತ್ತು ಸ್ಕೂಟರ್ ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಗ್ರಾಹಕರಿಗೆ ಇಷ್ಟ ಅಗುವಂಥ, ಅನುಕೂಲ ಆಗುವಂಥ ಹಲವು ವಾಹನಗಳು ಮಾರ್ಕೆಟ್ ಗೆ ಬರುತ್ತಿದೆ. ಚೆನ್ನಾಗಿಯೇ ಸೇಲ್ ಆಗುತ್ತಿದ್ದ ಎಲೆಕ್ಟ್ರಿಕ್ ವಾಹನಗಳ (Electric Vehicles) ಸೇಲ್ಸ್ ನಲ್ಲಿ ಈಗ ಇದ್ದಕ್ಕಿದ್ದ ಹಾಗೆ ಕುಸಿತ ಕಂಡುಬಂದಿದೆ. ಸರ್ಕಾರದ ವೆಬ್ಸೈಟ್ ಒಂದರಲ್ಲಿ ಸಿಕ್ಕ ಮಾಹಿತಿಯ ಅನುಸಾರ, ಜೂನ್ ನಲ್ಲಿ ನಮ್ಮ ಭಾರತ ದೇಶದಲ್ಲಿ, 45,734 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (Electric Vehicles) ಮಾತ್ರ ಮಾರಾಟ ಆಗಿದೆ.

ev vehicles sales down after subsidy period end Electric Vehicles:
Electric Vehicles: ದಿಡೀರ್ ಎಂದು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಬಾರಿ ಕುಸಿತ- ಕಾರಣಗಳ ಸಮೇತ ವಿವರಣೆ. 2

ಮೇ ತಿಂಗಳಿನಲ್ಲಿ 1,05,334 ವಾಹನಗಳು ಮಾರಾಟ ಆಗಿದ್ದವು. ಜೂನ್ ನಲ್ಲಿ 58% ಸೇಲ್ಸ್ ಕಡಿಮೆ ಆಗಿದೆ. ಈ ಇಳಿಕೆಗೆ ಕಾರಣಗಳು ಕೂಡ ಇದೆ. ಮೊದಲಿಗೆ ಎಲೆಕ್ಟ್ರಿಕ್ ಬೈಕ್ ಗಳ ಬೇಡಿಕೆ ಹೆಚ್ಚಿಸಲು ಸರ್ಕಾರವು 40% ಸಬ್ಸಿಡಿ ನೀಡುತ್ತಿತ್ತು. ಆದರೆ ಮೇ ತಿಂಗಳಿನಲ್ಲಿ ಇದನ್ನು ಪರಿಶೀಲಿಸಿತು, ಹಾಗೂ ಸಬ್ಸಿಡಿಯನ್ನು 15% ಗೆ ಇಳಿಕೆ ಮಾಡಿದೆ. ಜೂನ್ 1ರಿಂದ 15% ಸಬ್ಸಿಡಿ ಜಾರಿಗೆ ಬಂದಿದೆ. ಇದರಿಂದಾಗಿ ಎಲೆಕ್ಟ್ರಿಕ್ ವಾಹಗಳ (Electric Vehicles) ದರ ಕೂಡ ದಿಢೀರ್ ಏರಿಕೆ ಆಗಿದೆ. ಹಾಗಾಗಿ ಜೂನ್ ತಿಂಗಳಿನಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಮಾರಾಟ ಕಡಿಮೆ ಆಗಿದೆ. ಇದನ್ನು ಓದಿ..Upcoming Royal Enfield: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಟಾಪ್ 5 ರಾಯಲ್ Enfield ಬೈಕ್ ಗಳು- ಬಿಡುಗಡೆಯಾಗುತ್ತಿವೆ ಟಾಪ್ ಮಾಡೆಲ್ ಗಳು.

2022ರ ಜೂನ್ ನಲ್ಲಿ 44,380 ಎಲೆಕ್ಟ್ರಿಕ್ ಬೈಂ ಮಾರಾಟ ಆಗಿತ್ತು. 2022ರ ಆಗಸ್ಟ್ ನೈ 50,000 ಇಬೈಕ್ಸ್ ಹಾಗೂ ಇಸ್ಕೂಟರ್ ಮಾರಾಟ ಆಗಿತ್ತು. ಆಗ ಓಲಾ ಮತ್ತು ಇನ್ನಿತರ ಖ್ಯಾತ ಬ್ರಾಂಡ್ ಗಳು ದಾಖಲೆ ಬರೆದಿದ್ದವು, 2022ರ ಆಕ್ಟೊಬರ್ ಮಲ್ಲಿ 75,000 ಯೂನಿಟ್ಸ್ ಮಾರಾಟ ಆಗಿತ್ತು. 2023ರ ಮಾರ್ಚ್ ನಲ್ಲಿ 86,263 ಯೂನಿಟ್ಸ್ ಮಾರಾಟ ಆಗುವ ಮೂಲಕ ಈ ರೆಕಾರ್ಡ್ ಬ್ರೇಕ್ ಆಯಿತು. ಆದರೆ ಈಗ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಓಲಾ ಸಂಸ್ಥೆ ಕೂಡ ನಷ್ಟದಲ್ಲಿದೆ. ಮೇ ತಿಂಗಳಿನಲ್ಲಿ ಓಲಾ ಸಂಸ್ಥೆ 28,629 ಯೂನಿಟ್ಸ್ ಸೇಲ್ ಮಾಡಿತ್ತು, ಆದರೆ ಜೂನ್ ನಲ್ಲಿ 17,552 ಯುನಿಟ್ಸ್ ಮಾತ್ರ ಸೇಲ್ ಆಗಿದೆ.

ಎಲೆಕ್ಟ್ರಿಕ್ ವಾಹನಗಳ (Electric Vehicles) ಮೇಲೆ ಸಬ್ಸಿಡಿ ಕಡಿಮೆ ಆಗಿರುವುದು ಹಾಗೂ ಓಲಾ ಸ್ಕೂಟರ್ ನ ಬೆಲೆಯಲ್ಲಿ ಏರಿಕೆ ಆಗಿರುವುದು ಈ ಎರಡು ಇದಕ್ಕೆ ಕಾರಣ ಆಗಿದೆ. ಈಗ ಓಲಾ ಎಸ್1 ಏರ್ ಬೆಲೆ 1.10 ಲಕ್ಷ, ಓಲಾ ಎಸ್1 ಪ್ರೋ ಬೆಲೆ 1.30ಲಕ್ಷ, ಹಾಗೂ ಓಲಾ ಎಸ್1 ಪ್ರೋ ಎಕ್ಸ್ ಶೋರೂಮ್ ಬೆಲೆ 1.40 ಲಕ್ಷ ಆಗಿದೆ..ಎಸ್1 EV 125ಕಿಮೀ ರೇಂಜ್ ನೀಡಲಿದ್ದು, ಎಸ್1 ಪ್ರೋ 181ಕಿಮೀ ರೇಂಜ್ ನೀಡುತ್ತದೆ. TVS ಸಂಸ್ಥೆಯ ಸೇಲ್ ನಲ್ಲಿ ಸಹ ಭಾರಿ ಇಳಿಕೆ ಕಂಡುಬಂದಿದೆ. ಮೇ ತಿಂಗಳಿನಲ್ಲಿ 20,397 ಯುನಿಟ್ಸ್ ಮಾರಾಟ ಆಗಿದೆ. ಇದನ್ನು ಓದಿ..Shakti Yojane: ಬಹಳ ಸುಲಭವಾಗಿ ಶಕ್ತಿ ಉಚಿತ ಪಾಸ್ ಗೆ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಅರ್ಜಿ ಸಲ್ಲಿಸಿ.

ಜೂನ್ ನಲ್ಲಿ 7,791 ಯುನಿಟ್ಸ್ ಮಾತ್ರ ಮಾರಾಟ ಆಗಿದೆ. TVS ಸಂಸ್ಥೆಯ ಸೇಲ್ಸ್ ನಲ್ಲಿ 62% ಇಳಿಕೆ ಆಗಿದೆ. iQube ಈಗ 1,23,184 ರೂಪಾಯಿ ಆಗಿದ್ದು, iQube S ವೇರಿಯಂಟ್ ಬೆಲೆ 1,38,189 ರೂಪಾಯಿ ಆಗಿದೆ. ಬಜಾಜ್ ಸಂಸ್ಥೆಯಲ್ಲಿ ಮೇ ತಿಂಗಳಿನಲ್ಲಿ 9,965 ಯುನಿಟ್ಸ್ ಮಾರಾಟ ಆಗಿತ್ತು, ಆದರೆ ಜೂನ್ ನಲ್ಲಿ 2966 ಯುನಿಟ್ಸ್ ಮಾರಾಟ ಆಗಿದೆ. 54% ಕಡಿಮೆ ಮಾರಾಟ ಆಗಿದೆ. ಎಥರ್ ಎನರ್ಜಿ ಕೂಡ, ಹೀಗೆ ಆಗಿದ್ದು.. ಮೇ ನಲ್ಲಿ 15,000 ಯುನಿಟ್ಸ್ ಮಾರಾಟ ಆಗಿತ್ತು, ಜೂನ್ ನಲ್ಲಿ 4540 ಯುನಿಟ್ಸ್ ಮಾತ್ರ ಮಾರಾಟ ಆಗಿದೆ. ಇದನ್ನು ಓದಿ..Car Tips: ನಿಮ್ಮ ಕಾರು ಸ್ಟಾರ್ಟ್ ಆಗದೆ ಇದ್ದರೇ, ಈ ಮೂರು ವಿಷಯಗಳನ್ನು ನೆನಪಿನಲ್ಲಿ ಇಡಿ ಸಾಕು. ಮೆಕ್ಯಾನಿಕ್ ಪದೇ ಪದೇ ಬರುವ ಅಗತ್ಯ ಇರಲ್ಲ.

Comments are closed.