Shakti Scheme: ಶಕ್ತಿ ಯೋಜನೆಯಲ್ಲಿ ಬಾರಿ ಗೋಲ್ ಮಾಲ್- ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಿರುವ ಕೇಸ್ ಗಳು.

Shakti Scheme: ಶಕ್ತಿ ಯೋಜನೆಯಲ್ಲಿ ಬಾರಿ ಗೋಲ್ ಮಾಲ್- ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಿರುವ ಕೇಸ್ ಗಳು.

Shakti Scheme: ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ತರುವುದಾಗಿ ಜನರಿಗೆ ಭರವಸೆ ನೀಡಿತ್ತು, ಅವುಗಳಲ್ಲಿ ಒಂದೊಂದೇ ಯೋಜನೆಯನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದೆ. ಇದರಲ್ಲಿ ಈಗ ಜಾರಿಗೆ ಬಂದಿರುವುದು ಶಕ್ತಿ ಯೋಜನೆ (Shakti Scheme) ಮಾತ್ರ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕೃತಿ ಕೆಲಸ ಶುರುವಾಗಿದೆ. ಬೇರೆ ಯೋಜನೆಗಳು ಶುರುವಾಗಿಲ್ಲ, ಆದರೆ ಮೊನ್ನೆ ನಡೆದ ಬಜೆಟ್ ಮಂಡನೆಯಲ್ಲಿ ಯಾವ ಯೋಜನೆಗೆ ಎಷ್ಟು ಹಣ ಖರ್ಚಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

shakti scheme scam relived
shakti scheme scam relived

ಇನ್ನು ಶುರುವಾಗಿರುವ ಶಕ್ತಿ ಯೋಜನೆಯಲ್ಲಿ (Shakti Scheme) , ರಾಜ್ಯದ ಎಲ್ಲಾ ಹೆಣ್ಣುಮಕ್ಕಳಿಗೆ ಸರ್ಕಾರದ ಬಸ್ ಗಳಲ್ಲಿ ಉಚಿತವಾಗಿ ರಾಜ್ಯಾದ್ಯಂತ ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡುವ ಸೌಲಭ್ಯ ಕಲ್ಪಿಸಿಕೊಡಲಾಗಿದೆ ಎನ್ನುವುದು ಗೊತ್ತಿರುವ ವಿಚಾರ. ಕಳೆದ ತಿಂಗಳು ಈ ಯೋಜನೆ ಜಾರಿಗೆ ಬಂದಿತು. ರಾಜ್ಯದ ಎಲ್ಲಾ ಮಹಿಳೆಯರು ಸಹ ಶಕ್ತಿ ಯೋಜನೆಯ (Shakti Scheme) ಸೌಲಭ್ಯ ಪಡೆದು ಬಸ್ ಗಳಲ್ಲೇ ಓಡಾಡಲು ಶುರು ಮಾಡಿದ್ದಾರೆ. ಇದನ್ನು ಓದಿ..Business Idea: ವರ್ಷ ಪೂರ್ತಿ ಡಿಮ್ಯಾಂಡ್ ಇರುವ ಈ ಉದ್ಯಮವನ್ನು ಐದು ಸಾವಿರ ಖರ್ಚು ಮಾಡಿ ಆರಂಭ ಮಾಡಿ. ಹಳ್ಳಿ ಹಳ್ಳಿಯು ಡಿಮ್ಯಾಂಡ್, ಯಶಸ್ಸು ಖಚಿತ.

ಬಸ್ ಗಳಲ್ಲಿ ಮಹಿಳೆಯರ ಓಡಾಟ ಈ ಹಿಂದಿನ ದಿನಗಳಿಗಿಂತ ಜಾಸ್ತಿಯೇ ಆಗಿದೆ ಎಂದು ಹೇಳಿದರೆ ತಪ್ಪಲ್ಲ. ಆದರೆ ಈಗ ಶಕ್ತಿ ಯೋಜನೆ ಶುರುವಾದ ಒಂದು ತಿಂಗಳ ಸಮಯದಲ್ಲೇ ಈ ಯೋಜನೆಯ (Shakti Scheme) ದುರುಪಯೋಗ ಆಗುತ್ತಿದೆ ಎನ್ನುವ ವಿಚಾರ ಸುದ್ದಿಯಾಗುತ್ತಿದೆ. ಶಕ್ತಿ ಯೋಜನೆಯ (Shakti Scheme) ಅಡಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆಗೆ ಸೇರಿ ಸಿಬ್ಬಂದಿಗಳು ಕೂಡ ಈ ಯೋಜನೆಯನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಯೋಜನೆ ಶುರುವಾದ ಕೇವೆಲ 18 ದಿನಗಳಲ್ಲಿ, 339 ಕೋಟಿ ಮೊತ್ತದಷ್ಟು ಟಿಕೆಟ್ ಗಳನ್ನು ಮಹಿಳೆಯರಿಗೆ ಕೊಡಲಾಗಿದೆ ಎಂದು ಸಾರಿಗೆ ಇಲಾಖೆ ಅಂಕಿಅಂಶ ನೀಡಿದ್ದು, ಇದನ್ನು ನೋಡಿದರೆ ಹಣದ ಆಸೆಗೆ ಅಧಿಕಾರಿಗಳ ಜೊತೆಗೆ ಸಿಬ್ಬಂದಿಗಳು ಕೂಡ ಸೇರಿರಬಹುದು ಎನ್ನುವ ಅನುಮಾನ ಶುರುವಾಗಿದೆ. ಹಣದ ಆಸೆಗೆ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗಿಂತ ಹೆಚ್ಚಿನ ಮೊತ್ತದ ಟಿಕೆಟ್ಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಈ ವಿಚಾರಕ್ಕೆ ಸಾರಿಗೆ ಇಲಾಖೆಗೆ ಹೊಸ ಮಾರ್ಗಸೂಚಿ ನೀಡಲಾಗಿದ್ದು, ಅದರಲ್ಲಿ ಏನಿದೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Nokia 4G: 4G ಆಯ್ಕೆಯೊಂದಿಗೆ ಕೀ ಪ್ಯಾಡ್ ಮೊಬೈಲ್ ಬಿಡುಗಡೆ ಮಾಡಿದ ನೋಕಿಯಾ- ಹಳ್ಳಿಯ ಜನರಿಗೆ ಇನ್ನು ಮುಂದೆ ಹಬ್ಬ

*ಬಸ್ ನಲ್ಲಿ ಎಷ್ಟು ಮಹಿಳೆಯರು ಪ್ರಯಾಣ ಮಾಡುತ್ತಾರೋ ಅದಕ್ಕಿಂತ ಜಾಸ್ತಿ ಟಿಕೆಟ್ಸ್ ಇರಬಾರದು.
*ಒಂದು ವೇಳೆ ಬಸ್ ನಿರ್ವಾಹಕರು ಜಾಸ್ತಿ ಟಿಕೆಟ್ಸ್ ವಿತರಿಸಿದ್ದಾರೆ ಎಂದು ಗೊತ್ತಾದರೆ, ಅದನ್ನು ಗಂಭೀರ ಅಪರಾಧ ಎಂದು ಪರಿಗಣಿಸಲಾಗುತ್ತದೆ.
*ಪ್ರಯಾಣಿಕರ ಸಂಖ್ಯೆಗಿಂತ ಹೆಚ್ಚು ಟಿಕೆಟ್ಸ್ ನೀಡಿದರೆ, ಕಂಡಕ್ಟರ್ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಇದೆಲ್ಲವನ್ನು ನೋಡಿದರೆ, ಟಿಕೆಟ್ಸ್ ವಿಷಯದಲ್ಲಿ ಗೋಲ್ಮಾಲ್ ಆಗಿರಬಹುದು ಎನ್ನುವ ಅನುಮಾನ ಜಾಸ್ತಿಯಾಗಿದೆ.ಇದನ್ನು ಓದಿ..Oppo Reno 10: ಜನರ ಕೈಗೆ ಎಟಕುವಂತೆ ಕಡಿಮೆ ಬೆಲೆ ರೆನೊ 10 ಫೋನ್ ಅನ್ನು ಬಾರಿ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದ ಒಪ್ಪೋ

Comments are closed.