Hyundai Exter: ಟಾಟಾ ಕಾರುಗಳಿಗೆ ನಡುಕ ಹುಟ್ಟಿಸಿದ ಹೊಸ ಹುಂಡೈ ಕಾರು- ಲಾಂಚ್ ಆಗಲಿರುವ ಹೊಸ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
Hyundai Exter: ಟಾಟಾ ಕಾರುಗಳಿಗೆ ನಡುಕ ಹುಟ್ಟಿಸಿದ ಹೊಸ ಹುಂಡೈ ಕಾರು- ಲಾಂಚ್ ಆಗಲಿರುವ ಹೊಸ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
Hyundai Exter: ಭಾರತದಲ್ಲಿ ಹೆಸರು ಮಾಡಿರುವ ಪ್ರಮುಖ ಕಾರ್ ತಯಾರಿಕಾ ಸಂಸ್ಥೆ ಹುಂಡೈ ಈಗ ನಮ್ಮ ದೇಶದಲ್ಲಿ ಹೊಸ ಕಾರ್ ಲಾಂಚ್ ಮಾಡಲು ಸಿದ್ಧವಾಗಿದೆ. ಇದು Hyundai Exter ಕಾರ್ ಆಗಿದ್ದು, ಜುಲೈ 10ರಂದು ಈ ಕಾರ್ ಲಾಂಚ್ ಆಗಲಿದೆ. ಶ್ರೀಪೆರಂಬದೂರಿನಲ್ಲಿ ಈ ಕಾರ್ ನ ಉತ್ಪಾದನೆ ಶುರುವಾಗಿದೆ. ಈ ಕಾರ್ ಲಾಂಚ್ ಆದಮೇಲೆ, ಟಾಟಾ ಪಂಚ್, ಸಿಟ್ರನ್ ಸಿ3 ಮತ್ತು ಮಾರುತಿ ಇಗ್ನಿಸ್ ಕಾರ್ ಗಳಿಗೆ ಕಾಂಪಿಟೇಶನ್ ನೀಡಲಿದೆ.

Hyundai Exter ಕಾರ್ EX, S, SX, SX (O) ಹಾಗೂ SX (O) ಹೆಸರಿನ 5 ವಿಭಿನ್ನ ಟರ್ಮ್ ಗಳಲ್ಲಿ ಬಿಡುಗಡೆ ಆಗಲಿದೆ. Hyundai Exter ಕಾರ್ ನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಕಾರ್ ನಲ್ಲಿ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, LED ಡಿ.ಆರ್.ಎಲ್ ಗಳು, ಕ್ಲಾಮ್ ಶೆಲ್ ಬಾನೆಟ್ ಹಾಗೂ H ಶೇಪ್ ನ LEDಟೈಲ್ ಲ್ಯಾಂಪ್ ಗಳು ಲಭ್ಯವಿದೆ. ಈ ಕಾರ್ ನ ಒಳಹೋಗಲು, ಹೊರಬರಲು ಡೋರ್ ಗಳು ವಿಶಾಲವಾಗಿ ಮತ್ತು ಸುಲಭವಾಗಿ ತೆರೆದುಕೊಳ್ಳುತ್ತದೆ. ಈ ಕಾರ್ ನಲ್ಲಿ ಎಲೆಕ್ಟ್ರಿಕ್ ಸನ್ ರೂಫ್, ಡ್ಯುಯಲ್ ಟೋನ್ ಅಲಾಯ್ ವೀಲ್ ಸಹ ಇದೆ. ಇದನ್ನು ಓದಿ..Electric Truck V1: ಒಂದು ರುಪಾಯಿಗೆ ಒಂದು ಕಿಲೋ ಮೀಟರ್ ಗಿಂತಲೂ ಹೆಚ್ಚು ಓಡುವ ಟ್ರಕ್- ಟ್ರಕ್ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು. ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.
ಕಾರ್ ನ ಇಂಟೀರಿಯರ್ ಹಾಗೂ ಒಳಗಡೆ ಹೇಗಿದೆ ಎಂದು ಈ ಮೊದಲೇ ಸಂಸ್ಥೆ ರಿವೀಲ್ ಮಾಡಿತ್ತು. ಕಾರ್ ನ ಒಳಗೆ HD ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 4.2 ಇಂಚ್ ಕಲರ್ TFT ಮಲ್ಟಿ ಇನ್ಫರ್ಮೇಷನ್ ಡಿಸ್ಪ್ಲೇ ಜೊತೆಗೆ ಡಿಜಿಟಲ್ ಕ್ಲಸ್ಟರ್ ಕೂಡ ಇದೆ.. ಈ ಕಾರ್ ಬ್ಲೂಲಿಂಕ ಟೆಕ್ನಾಲಜಿ ಸಪೋರ್ಟ್ ಮಾಡುತ್ತದೆ. Hyundai Exter ಕಾರ್ ನಲ್ಲಿ ಕನೆಕ್ಟಿವಿಟಿ ಫೀಚರ್ಸ್ ಇದೆ, 90 ಎಂಬೆಡೆಡ್ ವಾಯ್ಸ್ ಕಮಾಂಡ್ ಮತ್ತು ಓವರ್ ದಿ ಏರ್ (OTA) ಇನ್ಫೋಟೈನ್ಮೆಂಟ್ ಹಾಗೂ ಮ್ಯಾಪ್ ಅಪ್ಡೇಟ್ ಸಪೋರ್ಟ್ ಇದೆ.
ಈ ಕಾರ್ ನ ಇನ್ಫೋಟೈನ್ಮೆಂಟ್ ಸಪೋರ್ಟ್ ಜೊತೆಗೆ ಇನ್ ಬಿಲ್ಟ್ ನ್ಯಾವಿಗೇಶನ್ ಇರುತ್ತದೆ. ಆಂಡ್ರ್ಯಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಸಿಸ್ಟಮ್ ಇದರಲ್ಲಿ ಇರುತ್ತದೆ..ಇದನ್ನು 10 ಪ್ರಾದೇಶಿಕ ಭಾಷೆಗಳು ಮತ್ತು 2 ಗ್ಲೋಬಲ್ ಲ್ಯಾನ್ಗ್ವೇಜ್ ಮೂಲಕ ಕಸ್ಟಮೈಸ್ ಮಾಡಬಹುದು. ಈ Hyundai exter ಕಾರ್ ನಲ್ಲಿ, ಕನೆಕ್ಟಿವಿಟಿ ಫೀಚರ್ಸ್ ಸೇಫ್ಟಿ ಮತ್ತು ಸೆಕ್ಯೂರಿಟಿ, ರಿಮೋಟ್ ಸೇವೆಗಳು, ಜಾಗದ ಆಧಾರಿತ ಫಂಕ್ಷನ್ ಹಾಗೂ ವಾಯ್ಸ್ ಸಹಾಯಕ್ಕೆ ಸಂಬಂಧಿಸಿವೆ. ಇದನ್ನು ಓದಿ..Ligier Micro Car: ಭಾರತದಲ್ಲಿ ಹೊಸ ಪರ್ವ ಆರಂಭ- ಎಲೆಕ್ಟ್ರಿಕ್ ಕಾರು ಯುಗದಲ್ಲಿ ಹೊಸ ಕಾರಿನ ಪರ್ವ ಆರಂಭ. ವಿಶೇಷತೆ ಬೆಲೆಯ ಸಂಪೂರ್ಣ ಡೀಟೇಲ್ಸ್.
ಎಂಬೆಡ್ ವಾಯ್ಸ್ ಕಮ್ಯಾಂಡ್ ಗಳು ಇಂಟರ್ನೆಟ್ ಇಲ್ಲದೆ ಕೂಡ ಕೆಲಸ ಮಾಡುತ್ತದೆ. ಈ ವಾಯ್ಸ್ ಕಮಾಂಡ್ ಗಳನ್ನು ನೀವು ಭಾರತದಲ್ಲಿ ಹಿಂಗ್ಲಿಷ್ ನಲ್ಲಿ ಕೊಡಬಹುದು. ಉದಾಹರಣೆಗೆ, ಸನ್ ರೂಫ್ ಖೋಲೋ, ಟೆಂಪರೇಚರ್ ಕಮ್ ಕರ್ ದೋ ಇಂಥ ಪದಗಳನ್ನು ಬಳಸಬಹುದು. ಈ Hyundai Exter ಮಿನಿ SUV ನಲ್ಲಿ 1.2ಲೀಟರ್ ಕಪ್ಪಾ ಪೆಟ್ರೋಲ್ ಫ್ಯಾಕ್ಟರಿ ಫಿಟ್ ಮಾಡಿದ CNG ಕಿಟ್ ಜೊತೆಗೆ ಬರುತ್ತದೆ. ಇದನ್ನು ಓದಿ..Business Idea: ಮಳೆಗಾಲದಲ್ಲಿ ಬೆಸ್ಟ್ ಬಿಸಿನೆಸ್- ನೋಡಿ, ಒಮ್ಮೆ ಟ್ರೈ ಮಾಡಿ ಲಾಸ್ ಅನ್ನೋದೇ ಇಲ್ಲ. ಬಂಡವಾಳ ಕೂಡ ಕಡಿಮೆ, ಲಾಭ ಮಾತ್ರ ಕಡಿಮೆ
Comments are closed.