Rohit Sharma: ಅಪರೂಪಕ್ಕೆ ಸೆಂಚುರಿ ಹೊಡೆದು ಜೋಶ್ ನಲ್ಲಿ ಇರುವ ರೋಹಿತ್- ಬಹಿರಂಗವಾಗಿಯೇ ಗರಂ- ಸಹ ಆಟಗಾರನ ಜೊತೆ ಹೀಗಾ ನಡೆದುಕೊಳ್ಳೋದು.
Rohit Sharma: ಅಪರೂಪಕ್ಕೆ ಸೆಂಚುರಿ ಹೊಡೆದು ಜೋಶ್ ನಲ್ಲಿ ಇರುವ ರೋಹಿತ್- ಬಹಿರಂಗವಾಗಿಯೇ ಗರಂ- ಸಹ ಆಟಗಾರನ ಜೊತೆ ಹೀಗಾ ನಡೆದುಕೊಳ್ಳೋದು.
Rohit Sharma: ಟೀಮ್ ಇಂಡಿಯಾ (Team India) ಈಗ ವಸ್ಟ್ ಇಂಡೀಸ್ (Ind vs WI)ವಿರುದ್ಧ ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಇಂಡಿಯಾ ವರ್ಸಸ್ ವೆಸ್ಟ್ ಇಂಡೀಸ್ (Ind vs WI) ಮೊದಲ ಟೆಸ್ಟ್ ಪಂದ್ಯವು ಡೊಮಿನಿಕಾದ ವಿಂಡ್ಸರ್ ಪಾರ್ಕ್ ನಲ್ಲಿ ನಡೆದಿದ್ದು, ಇದರಲ್ಲಿ ಟೀಮ್ ಇಂಡಿಯಾ ಗೆದ್ದಿದೆ. 3 ದಿನಗಳಲ್ಲಿ ಟೀಮ್ ಇಂಡಿಯಾ 141 ರನ್ ಗಳ ಜಯ ಸಾಧಿಸಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವು 5 ವಿಕೆಟ್ಸ್ ಕಳೆದುಕೊಂಡು 421ರನ್ಸ್ ಗಳಿಸಿ ಡಿಕ್ಲೇರ್ ಮಾಡಿತು.

50.3 ಓವರ್ ಗಳಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದೆ. ಮ್ಯಾಚ್ ನಲ್ಲಿ ಗೆದ್ದಿದ್ದರು ಸಹ, ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಕೋಪ ಮಾಡಿಕೊಂಡಿರುವ ಕೆಲವು ಘಟನೆಗಳು ಸಹ ನಡೆದಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಆಗಾಗ ಕೋಪ ಮಾಡಿಕೊಳ್ಳುತ್ತಾರೆ. ಈ ಬಾರಿ ಮೈದಾನದಲ್ಲಿ ಅಲ್ಲ, ಡ್ರೆಸ್ಸಿಂಗ್ ರೂಮ್ ನಲ್ಲಿ ಇರುವಾಗಲೇ ಕೋಪ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಟೀಮ್ ಇಂಡಿಯಾ ಆಡಿದ ಮೊದಲ ಇನ್ನಿಂಗ್ಸ್ ನಲ್ಲಿ 153ನೇ ಓವರ್ ನಲ್ಲಿ ಆಗಿದೆ.. ಇದನ್ನು ಓದಿ..Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
ಆ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಾ ಇದ್ದದ್ದು ಇಶಾನ್ ಕಿಶನ್ (Ishan Kishan) ಮತ್ತು ರವೀಂದ್ರ ಜಡೇಜಾ (Ravindra Jadeja). ಇಶಾನ್ ಅವರಿಗೆ ಇದು ಮೊದಲ ಟೆಸ್ಟ್ ಪಂದ್ಯ ಆಗಿತ್ತು, ಆ ಒತ್ತಡವೋ ಏನೋ…ಇಶಾನ್ ಕಿಶನ್ ಅವರು 19 ಎಸೆತಗಳನ್ನು ಎದುರಿಸಿದರು ಸಹ, ಒಂದೇ ಒಂದು ರನ್ ಕೂಡ ಗಳಿಸಿರಲಿಲ್ಲ. ಅದರಿಂದ ಕೋಪಗೊಂಡ ರೋಹಿತ್ ಶರ್ಮಾ (Rohit Sharma) ಅವರು ಡ್ರೆಸಿಂಗ್ ರೂಮ್ ಇಂದಲೇ ಕೋಪ ಮಾಡಿಕೊಂಡು ಸನ್ನೆ ಮಾಡಿದ್ದಾರೆ. ಇಶಾನ್ ಕಿಶನ್ ಅವರು ರನ್ ಗಳಿಸಬೇಕು ಎಂದು ಸೂಚಿಸಿದರು. ಇಶಾನ್ ಕಿಶನ್ ರನ್ ಗಳಿಸಲು ಶುರು ಮಾಡಿದ ನಂತರ ಮ್ಯಾಚ್ ಡಿಕ್ಲೇರ್ ಮಾಡಿದರು.
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಮ್ಯಾಚ್ ಮುಗಿದ ಬಳಿಕ ರೋಹಿತ್ ಶರ್ಮಾ (Rohit Sharma) ಅವರು ಈ ವಿಚಾರದ ಬಗ್ಗೆ ಮಾತನಾಡಿದರು, “ಮ್ಯಾಚ್ ಮುಗುವುದಕ್ಕೆ ಇನ್ನು ಎರಡು ಓವರ್ ಗಳು ಮಾತ್ರ ಉಳಿದಿದೆ ಎಂದು ನಾನು ಅವರಿಗೆ ಹೇಳಿದೆ. ಅಲ್ಲಿ ಇಶಾನ್ ಅಕೌಂಟ್ ಓಪನ್ ಮಾಡಬೇಕು, ಇಷಾನ್ ರನ್ ಗಳಿಸಿದ ನಂತರ ಮ್ಯಾಚ್ ಡಿಕ್ಲೇರ್ ಮಾಡಬೇಕು ಎಂದು ನಾನು ಅಂದುಕೊಂಡಿದ್ದೆ. ಅವರು ಯಾವಾಗಲೂ ಬ್ಯಾಟಿಂಗ್ ಮಾಡುವಾಗ ಉತ್ಸಾಹದಿಂದ ಇರುವುದನ್ನು ನಾನು ನೋಡಿದ್ದೇನೆ, ಇಂದು ಅವರಿಗೆ ನಿರಾಶೆ ಆಗಿರುತ್ತದೆ..” ಎಂದು ಹೇಳಿದ್ದಾರೆ ರೋಹಿತ್ ಶರ್ಮ (Rohit Sharma) . ಇದನ್ನು ಓದಿ..Rupay Card: ಭಾರತದ ರೂಪೇ ಕಾರ್ಡ್ ಬೇರೆ ವಿದೇಶಿ ಕಾರ್ಡ್ ಗಳಿಗಿಂತ ಬೆಸ್ಟ್- ಕಾರಣಗಳೇನು ಗೊತ್ತೇ? ಬ್ಯಾಂಕ್ ನಲ್ಲಿ ರೂಪೇ ಕಾರ್ಡ್ ಕೇಳಿ ಪಡೆಯಿರಿ.
ಇಶಾನ್ ಕಿಶನ್ ಅವರು ಈ ಮೊದಲು ಟೀಮ್ ಇಂಡಿಯಾಗಾಗಿ 14 ಏಕದಿನ ಪಂದ್ಯಗಳನ್ನು ಮತ್ತು 21 ಟಿ20 ಪಂದ್ಯಗಳನ್ನು ಆಡಿದ್ದಾರೆ. ಓಡಿಐ ನಲ್ಲಿ 1 ದ್ವಿಶತಕದ ಜೊತೆಗೆ 510 ರನ್ಸ್ ಗಳಿಸಿದ್ದಾರೆ..ಟಿ20 ಪಂದ್ಯಗಳಲ್ಲಿ 650 ರನ್ಸ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ, 48 ಪ್ರಥಮ ದರ್ಜೆಯ ಪಂದ್ಯಗಳನ್ನು ಸಹ ಆಡಿದ್ದಾರೆ. ಅದರಲ್ಲಿ 2985 ರನ್ಸ್ ಗಳಿಸಿದ್ದಾರೆ. ಆದರೆ ಇದೇ ಇಶಾನ್ ಕಿಶನ್ ಅವರ ಮೊದಲ ಟೆಸ್ಟ್ ಪಂದ್ಯವಾಗಿತ್ತು. ಇದನ್ನು ಓದಿ..Jio Phone: ಇಂಟರ್ನೆಟ್ ಬಳಸುವವರಿಗೆ ಹೊಸ ಫೋನ್ ಬಿಡುಗಡೆ ಮಾಡಿ ಜಿಯೋ- ಕಡಿಮೆ ಬೆಲೆಗೆ ಎಷ್ಟೆಲ್ಲಾ ವೈಶಿಷ್ಟತೆ, ಅದರಲ್ಲೂ ಹಳ್ಳಿಯವರಿಗೆ ಮಸ್ತ್.
— Nihari Korma (@NihariVsKorma) July 15, 2023
Comments are closed.