Second Hand Car: ಸುಮ್ಮನೆ ಸೋಶಿಯಲ್ ಮೀಡಿಯಾ ನೋಡಿ ಖರೀದಿ ಮಾಡುವುದಲ್ಲ- ಸೆಕೆಂಡ್ ಹ್ಯಾಂಡ್ ಅಥವಾ ಹೊಸದು ಯಾವ ಕಾರ್ ಬೆಸ್ಟ್ ಗೊತ್ತೇ?

Second Hand Car: ಈಗ ದೇಶದಲ್ಲಿ ಹಣದುಬ್ಬರ ಇರುವುದರಿಂದ ಕಾರ್ ಗಳ ಬೆಲೆ ಕೂಡ ಹೆಚ್ಚಾಗಿದೆ. ಜನಸಾಮಾನ್ಯರು ತಮ್ಮ ಬಜೆಟ್ ನಲ್ಲಿ ಕಾರ್ ಖರೀದಿ ಮಾಡುವುದು ಈಗ ಕಷ್ಟವೇ ಆಗಿದೆ. ಈ ಕಾರಣಕ್ಕೆ ಸಾಕಷ್ಟು ಜನ ಸೆಕೆಂಡ್ ಹ್ಯಾಂಡ್ ಕಾರ್ (Second Hand Car) ಖರೀದಿ ಮಾಡಲು ನಿರ್ಧಾರ ಮಾಡುತ್ತಾರೆ. ಸೆಕೆಂಡ್ ಹ್ಯಾಂಡ್ ಖಾರ್ ಖರೀದಿ ಮಾಡುವುದು ಲಾಭದಾಯಕ ಕೂಡ ಹೌದು, ಹೊಸ ಕಾರ್ ಗಿಂತ ಇವುಗಳ ಮೇಲೆಯೇ ಒಳ್ಳೆಯ ಡೀಲ್ಸ್ ಸಿಗುತ್ತದೆ. 3, 4 ವರ್ಷ ಬಳಕೆ ಆಗಿರುವ ಕಾರ್ 4 ರಿಂದ 5 ಲಕ್ಷದ ಒಳಗೆ ಸುಲಭವಾಗಿ ಸಿಗುತ್ತದೆ.. ಸೆಕೆಂಡ್ ಹ್ಯಾಂಡ್ ಕಾರ್ (Second Hand Car) ಖರೀದಿ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಇದೆ ಎಂದು ತಿಳಿಸುತ್ತೇವೆ ನೋಡಿ..

1.ಕಡಿಮೆ ಬಜೆಟ್ ಗೆ ಲೋಡ್ ಮಾಡುವ ಕಾರ್ ನ ವೈಶಿಷ್ಟ್ಯತೆ :- ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ (Second Hand Car) ಮಾಡುವುದರ ಮೇಜರ್ ಪ್ರಯೋಜನ ಏನು ಎಂದರೆ, ಕಡಿಮೆ ಬಜೆಟ್ ನಲ್ಲಿ ಲೋಡ್ ಮಾಡಿರುವ ಕಾರ್ ಖರೀದಿ ಮಾಡಬಹುದು. ಸೆಕೆಂಡ್ ಹ್ಯಾಂಡ್ ಕಾರ್ ಆದರೆ, ಕಡಿಮೆ ಬೆಲೆಗೆ ಹೆಚ್ಚು ವೇರಿಯಂಟ್ ಕಾರ್ ಗಳನ್ನು ಪಡೆಯಬಹುದು. ಹಾಗಾಗಿ ಹೊಸ ಕಾರ್ ಗಿಂತ ಸೆಕೆಂಡ್ ಹ್ಯಾಂಡ್ ನಲ್ಲಿ ಕಡಿಮೆ ಬಜೆಟ್ ನಲ್ಲಿ ಟಾಪ್ ಅಥವಾ ಮಿಡ್ ವೇರಿಯಂಟ್ ಕಾರ್ ಖರೀದಿ ಮಾಡಬಹುದು. ಹೆಚ್ಚು ವಿಶೇಷತೆಗಳು ಕೂಡ ಸಿಗುತ್ತದೆ.. ಇದನ್ನು ಓದಿ..Driving License: ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡುವುದು ಹೇಗೆ ಗೊತ್ತೆ? ಅದು ಮೊಬೈಲ್ ನಲ್ಲಿ ಕೂಡ ಮಾಡಬಹುದು.

2.RTO ಖರ್ಚು ಉಳಿತಾಯ ;- ಹೊಸ ಕಾರ್ ಖರೀದಿಗೆ ರೋಡ್ ಟ್ಯಾಕ್ಸ್, ಸೆಸ್ ಹಾಗೂ ಇನ್ನಿತರ ಟ್ಯಾಕ್ಸ್ ಕಟ್ಟಬೇಕು. ಈ ಹೊರೆಯಿಂದ 50 ರಿಂದ 60 ಸಾವಿರ ಖರ್ಚಾಗುತ್ತದೆ. ಆದರೆ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಿದರೆ, ಈ ಖರ್ಚು ಬರುವುದಿಲ್ಲ. ಸೆಕೆಂಡ್ ಹ್ಯಾಂಡ್ ಖಾರ್ (Second Hand Car) ಖರೀದಿ ಮಾಡಿದ ನಂತರ ರಿಜಿಸ್ಟ್ರೇಶನ್ ಮತ್ತು ಟ್ರಾನ್ಸ್ಫರ್ ಶುಲ್ಕ ಮಾತ್ರ ಪಾವತಿ ಮಾಡಬೇಕಾಗುತ್ತದೆ.

3.ಕಾರ್ ಗೆ ಹಾನಿ ಆಗುವ ಭಯ :- ಹೊಸ ಕಾರ್ ಖರೀದಿ ಆದರೆ, ಅದನ್ನು ನಿರ್ವಹಿಸುವ ಬಗ್ಗೆ ಜಾಸ್ತಿ ಚಿಂತೆ ಇರುತ್ತದೆ. ಕಾರ್ ಗೆ ಸ್ಕ್ರಾಚ್ ಆಗಬಹುದು, ಕಾರ್ ಬೀಳುವ ಭಯ ಇರಬಹುದು. ಆದರೆ ಸೆಕೆಂಡ್ ಹ್ಯಾಂಡ್ ಕಾರ್ ನಲ್ಲಿ ಇದಕ್ಕಾಗಿ ಭಯ ಪಡುವ ಅಗತ್ಯವಿಲ್ಲ. ಬಹಳಷ್ಟು ಜನರು ಸೆಕೆಂಡ್ ಹ್ಯಾಂಡ್ ಕಾರ್ (Second Hand Car) ನಲ್ಲಿ ಸ್ಕ್ರಾಚ್ ಆಗುವ ಭಯ ಇಟ್ಟುಕೊಳ್ಳುವುದಿಲ್ಲ. ಇದನ್ನು ಓದಿ..News: ಮುಂದಿನ ತಿಂಗಳಿನಿಂದ ಹಣಕಾಸು ವಿಚಾರದಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಗೊತ್ತೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್.

4.ಡ್ರೈವಿಂಗ್ ಕಲಿಯಲು ಒಳ್ಳೆಯದು :- ನೀವು ಕಾರ್ ಡ್ರೈವಿಂಗ್ ಕಲಿಯಬೇಕು ಎಂದುಕೊಂಡಿದ್ದರೆ, ಸೆಕೆಂಡ್ ಹ್ಯಾಂಡ್ ಕಾರ್ ನಲ್ಲಿ ಕಲಿಯುವುದು ಒಳ್ಳೆಯದು. ಕಾರ್ ಡ್ರೈವಿಂಗ್ ಕಲಿಯುವಾಗ ತಪ್ಪುಗಳು ನಡೆಯುತ್ತದೆ..ಕಾರ್ ಎಡವಿ ಬೀಳುತ್ತದೆ, ಕ್ಲಫ್ಹಜ್ ಗೇರ್ ಬಾಕ್ಸ್ ಸರಿಯಾಗಿ ಕೆಲಸ ಮಾಡದೆ ಹಾನಿಯಾಗಬಹುದು. ಹಾಗಿದ್ದಾಗ ಸೆಕೆಂಡ್ ಹ್ಯಾಂಡ್ ಕಾರ್ (Second Hand Car) ಗಳಿಂದ ಡ್ರೈವಿಂಗ್ ಕಲಿಯುವುದು ಒಳ್ಳೆಯದು.

5.ಮಾರಿದರೆ ಕೈತುಂಬಾ ದುಡ್ಡು :– ನೀವು ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಎಷ್ಟು ಹಣಕ್ಕೆ ಕೊಂಡುಕೊಳ್ಳುತ್ತೀರೋ, ಅಷ್ಟೇ ಬೆಲೆಗೆ ಮಾರಾಟ ಮಾಡಬಹುದು. ಸೆಕೆಂಡ್ ಹ್ಯಾಂಡ್ ಕಾರ್ (Second Hand Car) ನ ಇಂಜಿನ್, ಕ್ಲಚ್, ಗೇರ್ ಬಾಕ್ಸ್ ಇದೆಲ್ಲವೂ ಚೆನ್ನಾಗಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಕಾರ್ ಗೆ ಒಳ್ಳೆಯ ಬೆಲೆ ಸಿಗುತ್ತದೆ. ಇದನ್ನು ಓದಿ..Loan: ನಿಮ್ಮ ಸಂಬಳ ಕಡಿಮೆ ಇದ್ದರೂ 10 ನಿಮಿಷದಲ್ಲಿ 10 ಲಕ್ಷದ ಲೋನ್ ಪಡೆಯಿರಿ- ಅದು ಜಸ್ಟ್ ಹೀಗೆ ಮಾಡಿ ಸಾಕು.

Best News in Kannadacar purchasecar tipscarskannada liveKannada NewsKannada Trending Newslive newslive news kannadalive trending newsNews in Kannadasecond hand cartop news kannada