JDS MLA: ಕುಡುಕರ ಕಷ್ಟವನ್ನು ಅರ್ಥ ಮಾಡಿಕೊಂಡ ಜೆಡಿಎಸ್ MLA ಕೃಷ್ಣಪ್ಪ- ಧ್ವನಿ ಎತ್ತಿ ಸರ್ಕಾರದ ಮುಂದೆ ಹೇಳಿದ್ದೇನು ಗೊತ್ತೇ?

JDS MLA: ಕುಡುಕರ ಕಷ್ಟವನ್ನು ಅರ್ಥ ಮಾಡಿಕೊಂಡ ಜೆಡಿಎಸ್ MLA ಕೃಷ್ಣಪ್ಪ- ಧ್ವನಿ ಎತ್ತಿ ಸರ್ಕಾರದ ಮುಂದೆ ಹೇಳಿದ್ದೇನು ಗೊತ್ತೇ?

JDS MLA: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಆಡಳಿತ ಬಂದ ಮೇಲೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಹಲವು ಬದಲಾವಣೆಗಳನ್ನು ತರುತ್ತಿದೆ. ಇದರಿಂದ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಹೆಚ್ಚಾಗಿದೆ, ವಿದ್ಯುತ್ ಬೆಲೆ ಸಹ ಹೆಚ್ಚಾಗಿದೆ. ಇದರ ನಡುವೆ ರಾಜ್ಯದಲ್ಲಿ ಮದ್ಯದ ಬೆಲೆ ಕೂಡ ಜಾಸ್ತಿಯಾಗಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ.

ವಿಧಾನಸಭೆಯಲ್ಲಿ ಮದ್ಯದ ಬೆಲೆ ಜಾಸ್ತಿ ಆಗಿರುವ ಬಗ್ಗೆ ಜೆಡಿಎಸ್ ಪಕ್ಷದಿಂದ ಎಂ.ಎಲ್.ಎ (JDS MLA) ಆಗಿರುವ ಎಂ.ಟಿ ಕೃಷ್ಣಪ್ಪ (JDS MLA) ಅವರು ಮಾತನಾಡಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. “ಗ್ಯಾರಂಟಿ ಯೋಜನೆಗಳನ್ನು ನಡೆಸಿಕೊಂಡು ಹೋಗುವುದಕ್ಕೆ ಸರ್ಕಾರಕ್ಕೆ ಹಣ ಬೇಕು, ಹಣ ಅರೇಂಜ್ ಮಾಡುವುದಕ್ಕೆ ರಾಜ್ಯ ಸರ್ಕಾರ ಈಗ ಅಬಕಾರಿ ಇಲಾಖೆಯ ಟ್ಯಾಕ್ಸ್ ಜಾಸ್ತಿ ಮಾಡಿದೆ. ಬಡವರು, ರೈತರು, ಕೂಲಿ ಕೆಲಸ ಮಾಡುವವರು ದಿನ ಪೂರ್ತಿ ಕೆಲಸ ಮಾಡಿ ಸಂಜೆ ವೇಳೆ ಮದ್ಯ ಸೇವನೆ ಮಾಡುತ್ತಾರೆ. ಅದಕ್ಕಾಗಿ ಅವರು ಹೆಚ್ಚು ಹಮ ಕೊಡಬೇಕಾದ ಪರಿಸ್ಥಿತಿ ಬಂದಿದೆ. ಇದನ್ನು ಓದಿ..Car Safety Tips: ಕಾರು ಓಡಿಸುವಾಗ ಮಳೆ ಬಂದರೆ, ತಕ್ಷಣ ಈ 5 ಕೆಲಸ ಮಾಡಿ- ನೀವು ಸೇಫ್, ನಿಮ್ಮ ಕಾರು ಕೂಡ ಸೇಫ್. ತೊಂದರೆ ಇರೋದೇ ಇಲ್ಲ.

ಮದ್ಯದ ದರ ಹೆಚ್ಚಿಸಿರುವುದು ಬಡವರು ಮತ್ತು ರೈತರ ಹೊಟ್ಟೆ ಮೇಲೆ ಹೊಡೆದ ಹಾಗೆ, ಈ ರೀತಿ ಅವರಿಗೆ ತೊಂದರೆ ಕೊಟ್ಟು 5 ಗ್ಯಾರಂಟಿ ಯೋಜನೆಗಳನ್ನು ತರುವ ಅವಶ್ಯಕತೆ ಖಂಡಿತವಾಗಿಯೂ ಇರಲಿಲ್ಲ. ಕರ್ನಾಟಕದ ಜನತೆಯ ಪೈಕಿ 46% ಜನ ಕೂಲಿ ಕಾರ್ಮಿಕರು ಮತ್ತು ರೈತರು. ಮದ್ಯದ ದರ ಏರಿಕೆಯಾದರೆ ಅವರಿಗೆಲ್ಲಾ ತೊಂದರೆ ಆಗುತ್ತದೆ ಎಂದರು ಕೃಷ್ಣಪ್ಪ (JDS MLA).. ಆಗ ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಅವರು ಕೂಡ ಮಾತನಾಡಿ, ಮದ್ಯ ಸೇವನೆ ಮಾಡಲೇಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿಲ್ಲ.. ಜನರಿಗೆ ಬೇಕು ಎಂದರೆ ಅವರು ಮದ್ಯಸೇವನೆ ಮಾಡಬಹುದು..

ಬೆಲೆ ಜಾಸ್ತಿಯಾಗಿದೆ, ಖರೀದಿ ಮಾಡಲು ಆಗಲ್ಲ ಎಂದರೆ ಕುಡಿಯುವುದನ್ನು ಬಿಡಬಹುದು ಎಂದು ಹೇಳಿದರು. ಬಳಿಕ ಕಾಂಗ್ರೆಸ್ ಪಕ್ಷದ ಷಡಕ್ಷರಿ ಅವರು ಮಾತನಾಡಿ, ಕೃಷ್ಣಪ್ಪ ಅವರ ಮಾತು ಜನರು ಕುಡಿಯಲಿ ಎಂದು ಪ್ರೋತ್ಸಾಹಿಸುತ್ತಿರುವ ಹಾಗಿದೆ ಎಂದು ಹೇಳಿದರು. ಮುಂದುವರೆದು ಮಾತನಾಡಿ, ಈ ರೀತಿ ಹೇಳಿ ಜನರನ್ನು ಹಾಳು ಮಾಡ್ತಾ ಇದ್ದೀರಿ, ಮದ್ಯಕ್ಕೂ ಸಬ್ಸಿಡಿ ಕೊಡಿಸಿದರಾಯಿತು ಬಿಡಿ.. ಎಂದು ಟೀಕೆಯ ಮಾತನ್ನಾಡಿದರು.. ಆಗ ಕೃಷ್ಣಪ್ಪ (JDS MLA) ಅವರು ಮಾತು ಶುರು ಮಾಡಿದರು. ಇದನ್ನು ಓದಿ..2000 Notes: ಎಲ್ಲಾ 2000 ನೋಟುಗಳು ಬ್ಯಾಂಕ್ ಗೆ ವಾಪಾಸ್ ಬರುತ್ತಿವೆ- ಇದರಿಂದ ಪ್ರತಿಯೊಬ್ಬರಿಗೂ ಲಾಭ. ಅದೇಗೆ ಗೊತ್ತೇ??

“ಈಗಿನ ಸರ್ಕಾರ ವಿದ್ಯುತ್ ಮತ್ತು ಅಗತ್ಯ ಸೌಲಭ್ಯ ಸೌಕರ್ಯಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಕೂಡ ಗಮನ ಹರಿಸಿಲ್ಲ, ಇದರ ಬಗ್ಗೆ ಗಮನ ಕೊಟ್ಟರೆ ರೈತರ ಜೀವನ ಬದಲಾಗುತ್ತದೆ. ಅದರ ಬಗ್ಗೆ ಗಮನ ಕೊಡುವುದನ್ನು ಬಿಟ್ಟು ಅಬಕಾರಿ ಟ್ಯಾಕ್ಸ್ ಜಾಸ್ತಿ ಮಾಡಿದೆ. ಇದೇ ಮುಂದುವರೆದರೆ ಆಕ್ಸಿಜನ್ ಸಿಲಿಂಡರ್ ಜೊತೆಗೆ ಓಡಾಡುವ ಸಮಯ ದೂರವಿಲ್ಲ ಎಂದು ಕಿಡಿಕಾರಿದ್ದಾರೆ ಎಂ ಕೃಷ್ಣಪ್ಪ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

Comments are closed.