Traffic Violation: ಸಿಕ್ಕಿ ಬೀಳುತ್ತಿರುವ ಪ್ರವಾಸಿಗರು- ಮೈಸೂರು ಎಕ್ಸ್ಪ್ರೆಸ್ ವೆ ನಲ್ಲಿ 15 ದಿನದಲ್ಲಿ ದಂಡ ವಿಧಿಸಿದ ಹಣ ಕಂಡು ಅಧಿಕಾರಿಗಳು ದಂಗು.

Traffic Violation: ಸಿಕ್ಕಿ ಬೀಳುತ್ತಿರುವ ಪ್ರವಾಸಿಗರು- ಮೈಸೂರು ಎಕ್ಸ್ಪ್ರೆಸ್ ವೆ ನಲ್ಲಿ 15 ದಿನದಲ್ಲಿ ದಂಡ ವಿಧಿಸಿದ ಹಣ ಕಂಡು ಅಧಿಕಾರಿಗಳು ದಂಗು.

Traffic Violation: ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ (Mysore Bangalore Expressway) ನಲ್ಲಿ ಓವರ್ ಸ್ಪೀಡ್ (Overspeed) ಇಂದಾಗಿ ಬಹಳಷ್ಟು ಅಪಘಾತಗಳು ನಡೆದಿದೆ ಎನ್ನುವ ವಿಷಯ ಗೊತ್ತೇ ಇದೆ. ಈ ರೀತಿ ಆಗುವುದನ್ನು ತಪ್ಪಿಸಲು ಪೊಲೀಸರು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಹೊಸ ತಂತ್ರಜ್ಞಾನ ಬಳಸಿ ವೇಗವಾಗಿ ಚಲಿಸುತ್ತಿರುವ ವಾಹನಗಳನ್ನು ಹಿಡಿದು ದಂಡ ವಿಧಿಸುತ್ತಿದ್ದಾರೆ. ಈಗ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ ನಲ್ಲಿ ಓಡಾಡುವವರಿಗೆ 100kmpl ಸ್ಪೀಡ್ ಲಿಮಿಟ್ ಹಾಕಲಾಗಿದೆ (Traffic Violation).

ಇದನ್ನು ಮೀರಿ ಸ್ಪೀಡ್ ಆಗಿ ವಾಹನ ಚಲನೆ ಮಾಡಿರುವವರಿಂದ, 15 ದಿನಗಳಲ್ಲಿ ಬರೋಬ್ಬರಿ ₹16ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಓವರ್ ಸ್ಪೀಡ್ ರೈಡಿಂಗ್ ಮತ್ತು ಡ್ರೈವಿಂಗ್, ಲೇನ್ ಡಿಸಿಪ್ಲಿನ್ (Lane Discipline), ಸೀಟ್ ಬೆಲ್ಟ್ (Seat Belt), ಹೆಲ್ಮೆಟ್ (Helmet) ಧರಿಸದೆ ರೈಡಿಂಗ್, ಡ್ರೈವಿಂಗ್ ಮಾಡುವುದು. ಈ ಎಲ್ಲಾ ನಿಯಮ ಉಲ್ಲಂಘನೆಗೆ ₹16ಲಕ್ಷಕ್ಕಿಂತ ಹೆಚ್ಚು ದಂಡ ವಸೂಲಿ ಆಗಿದೆ. ರಾಮನಗರ (Ramnagar) ಜಿಲ್ಲೆಯ ಪೊಲೀಸರು ದಂಡ ವಸೂಲಿ ಮಾಡಿದ್ದು, ಈ ಹೈವೇನಲ್ಲಿ ಓಡಾಡುವುದು ಇನ್ನು ಕಷ್ಟಕರವಾಗಿದೆ (Traffic Violation). ಈ ಎಕ್ಸ್ಪ್ರೆಸ್ವೇ ಲಾಂಚ್ ಆದಮೇಲೆ 160ಕ್ಕಿಂತ ಹೆಚ್ಚು ಆಕ್ಸಿಡೆಂಟ್ ನಡೆದಿದ್ದು, 55ಕ್ಕಿಂತ ಹೆಚ್ಚು ಜನ ವಿಧಿವಶರಾಗಿದ್ದಾರೆ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

ಇನ್ನು ಹಿಂದಿನ ನಾಲ್ಕರಿಂದ ಐದು ತಿಂಗಳುಗಳಲ್ಲಿ 20 ಜನ ವಿಧಿವಶರಾಗಿದ್ದಾರೆ. ಈ ಕಾರಣಕ್ಕೆ ಸ್ಪೀಡ್ ಲಿಮಿಟ್ಸ್ ಅನ್ನು 100kmpl ಮಾಡಲಾಗಿದೆ. ಎಕ್ಸ್ಪ್ರೆಸ್ ವೇ ನಲ್ಲಿ ರೋಡ್ ಗ್ರಿಪ್ ಮತ್ತು ಭದ್ರತೆ ಎರಡು ಕೂಡ ಕಡಿಮೆ ಇದೆ ಎಂದು ಆರೋಪ ಮಾಡಲಾಗಿತ್ತು. ರಸ್ತೆ ಸುರಕ್ಷತೆಯ ಎಡಿಜಿಪಿ ಆಗಿರುವ ಅಲೋಕ್ ಕುಮಾರ್ ಅವರು ಇದನ್ನು ಪರಿಶೀಲಿಸಿದ್ದಾರೆ.ಬಳಿಕ 55 ಆಕ್ಸಿಡೆಂಟ್ ಜೋನ್ ಗುರುತಿಸಿ, ಅದರನ್ನು ಸರ್ಕಾರಕ್ಕೆ ತಿಳಿಸಿ, ಈಗ ಅಲ್ಲಿಗೆಲ್ಲಾ ಸ್ಪೀಡ್ ಬ್ರೇಕರ್ ಹಾಕಿದ್ದು, ಸ್ಪೀಡ್ ಲಿಮಿಟ್ ಇಡಲಾಗಿದೆ. ರಸ್ತೆ ಪ್ರಾಧಿಕಾರ (NHIA) ಅಧಿಕಾರಿಗಳು ಕೂಡ ಮೈಸೂರು ಬೆಂಗಳೂರು ಏಕ್ಸ್ಪ್ರೆಸ್ ವೇ ಅನ್ನು ಪರಿಶೀಲಿಸಿ ಸ್ಪೀಡ್ ಲಿಮಿಟ್ ಇಡಲು ಒಪ್ಪಿಗೆ ಸೂಚಿಸಿದರು (Traffic Violation).

ನಂತರ ಸ್ಪೀಡ್ ಲಿಮಿಟ್, ಲೇನ್ ಡಿಸಿಪ್ಲೀನ್, ಸೀಟ್ ಬೆಲ್ಟ್, ಹೆಲ್ಮೆಟ್ ಈ ಎಲ್ಲಾ ತಪ್ಪುಗಳಿಗೆ ಫೈನ್ ಹಾಕಲಾಗುತ್ತಿದೆ. ಫೈನ್ ಹಾಕಲು ಶುರುವಾದ 2 ವಾರದಲ್ಲಿ 2000ಕ್ಕಿಂತ ಪ್ರಕರಣಗಳು ದಾಖಲಾಗಿದೆ. ಓವರ್ ಸ್ಪೀಡ್ ಗೆ 877 ಫೈನ್ ಹಾಕಿದ ಕೇಸ್ ಗಳು, 580 ಲೇನ್ ಡಿಸಿಪ್ಲಿನ್ ಇಲ್ಲದ ಫೈನ್ ಕೇಸ್ ಗಳು, 274 ಹೆಲ್ಮೆಟ್ ಇಲ್ಲದ ಫೈನ್ ಕೇಸ್ ಗಳು, 189 ಸೀಟ್ ಬೆಲ್ಟ್ ಲಿಲ್ಲದೆ ಫೈನ್ ಬಿದ್ದಿರುವ ಕೇಸ್ ಗಳು ದಾಖಲಾಗಿದೆ (Traffic Violation). ಇದರಿಂದ 16ಲಕ್ಷಕ್ಕಿಂತ ಹೆಚ್ಚು ಹಣ ಸಂಗ್ರಹಣೆ ಆಗಿದೆ. ಇದನ್ನು ಓದಿ..Fast Tag: ಗೂಗಲ್ ಪೇ ಅಥವಾ ಫೋನ್ ಪೇ ಗಳನ್ನೂ ಬಳಸಿ, ನಿಮ್ಮ ಫಾಸ್ಟ್ ಟ್ಯಾಗ್ ನಲ್ಲಿರುವ ಹಣವನ್ನು ಚೆಕ್ ಮಾಡಿ.

ಈ ಎಸ್ಕ್ಪೇಸ್ ವೇ ನಲ್ಲಿ 2 ಕಡೆ ಟೋಲ್ ಬೂತ್, ನಿಯಮಗಳು ಎಲ್ಲವು ಇದ್ದರು ಕೂಡ, ಇಲ್ಲಿ ಬೇಸಿಕ್ ಸೌಕರ್ಯಗಳು ಕೂಡ ಇಲ್ಲ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಟೋಲ್ ದರ ಹೆಚ್ಚಿಸಿದೆ ಆದರೆ ಶೌಚಾಲಯ, ಮೊಬೈಲ್ ಆಂಬ್ಯುಲೆನ್ಸ್ ಈ ವ್ಯವಸ್ಥೆಗಳು ಇಲ್ಲ. ಒಂದು ಗಾಡಿ ಕೈಕೊಟ್ಟರೆ, ಮೆಕ್ಯಾನಿಕ್ ಶಾಪ್ ಇಲ್ಲ. ರಾತ್ರಿ ಗಾಡಿ ಓಡಿಸುವವರು, ನಿದ್ದೆ ಮಂಪರಿನಲ್ಲಿ ರಸ್ತೆಯಲ್ಲಿ ಗಾಡಿ ನಿಲ್ಲಿಸಿದರೆ ಸುರಕ್ಷತೆ ಇಲ್ಲ ಎನ್ನಲಾಗಿದೆ. ಇದನ್ನು ಓದಿ..Avoid Tax tricks: ನೀವು ಹತ್ತು ಲಕ್ಷ ದುಡಿಯುತ್ತಿದ್ದರೂ ಕೂಡ ತೆರಿಗೆ ಕಟ್ಟದೆ ಇರಲು ಈ ಟ್ರಿಕ್ಸ್ ಬಳಸಿ- ಒಂದು ರೂಪಾಯಿ ಕಟ್ಟೋ ಅಗತ್ಯ ಇರಲ್ಲ.

Comments are closed.