Gold Investment: ಮನಬಂದಂತೆ ಚಿನ್ನದ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಲಾಭವೇ ಅಥವಾ ನಷ್ಟವೇ?

Is there any risk in joining monthly gold investment schemes

Gold Investment: ನಮಸ್ಕಾರ ಸ್ನೇಹಿತರೇ ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ. ಅದರಲ್ಲೂ ನಮ್ಮ ಭಾರತ ದೇಶದಲ್ಲಿ ಎಲ್ಲಾ ಹೆಣ್ಣುಮಕ್ಕಳಿಗೆ ಬಂಗಾರದ ಮೇಲೆ ಆಸೆ ಜಾಸ್ತಿಯೇ ಇರುತ್ತೆ. ಬಂಗಾರದ ಒಡವೆಗಳು ಧರಿಸುವುದಕ್ಕೆ ಮಾತ್ರವಲ್ಲ, ಕಷ್ಟಕಾಲ ಬಂದಾಗ, ಸಹಾಯಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಕೂಡ ಜನರಿಗೆ ಬಂಗಾರ ಕೊಂಡುಕೊಳ್ಳೋದಕ್ಕೆ ಇಷ್ಟವೇ. ಚಿನ್ನದ ಮೇಲೆ ಆಸೆ ಜೊತೆಗೆ ಮನೆಯಲ್ಲಿದ್ರೆ ಸಹಾಯಕ್ಕೆ ಬರುತ್ತದೆ, ಅದರ ಬೆಲೆ ಕೂಡ ಹೆಚ್ಚಾಗುತ್ತದೆ. ಹಾಗಾಗಿ ಸಾಕಷ್ಟು ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಈಗ ನೋಡಿದರೆ ಚಿನ್ನದ ಬೆಲೆ ವಿಪರೀತ ಹೆಚ್ಚಾಗಿದೆ. 10 ಗ್ರಾಮ್ ಗೆ ಬರೋಬ್ಬರಿ 60 ಸಾವಿರ ತಲುಪಿದೆ.

ಚಿನ್ನದ ಬೆಲೆ ಗಗನಕ್ಕೆ ಏರಿದರು ಕೂಡ ಶ್ರೀಮಂತರು ಖರೀದಿ ಮಾಡುತ್ತಾರ್ಸ್. ಆದರೆ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಇದು ಕಷ್ಟ. 50,000 ಅಥವಾ 60,000 ಆದಾಗ ಒಂದೇ ಸಾರಿಗೆ ಅಷ್ಟು ಹಣ ಬಡವರ ಹತ್ತಿರ ಇರುವುದಿಲ್ಲ. ಪರಿಸ್ಥಿತಿ ಹೀಗಿದ್ದಾಗ ಚಿನ್ನ ಖರೀದಿಗೆ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಮೊಬೈಲ್, ವಾಹನಗಳು ಇದೆಲ್ಲವೂ ಇಎಂಐ ನಲ್ಲಿ ಸಿಗುವಾಗ ಚಿನ್ನವು ಇಎಂಐ ನಲ್ಲಿ ಸಿಕ್ಕರೆ ಹೇಗೆ? ಆಗ ನಮ್ಮ ದೇಶದಲ್ಲಿ ಅತಿಹೆಚ್ಚು ಮಾರಾಟ ಆಗುವ ವಸ್ತು ಚಿನ್ನವೇ ಆಗಿರುತ್ತದೆ. ಆದರೆ ದೊಡ್ಡ ದೊಡ್ಡ ಒಡವೆ ಅಂಗಡಿಗಳಲ್ಲಿ ಈ ರೀತಿ ಕೊಡೋದಿಲ್ಲ, ಇಎಂಐ ನಲ್ಲಿ ಚಿನ್ನ ಪಡೆಯುವುದು ಒಂದು ರೀತಿ ಕಷ್ಟವೇ.. ಇದನ್ನು ಓದಿ: ಚಾಲನೆ ಮಾಡುವಾಗ ತೊಂದರೆ ಉಂಟಾಗಿ ಕಾರು ನಿಲ್ಲಿಸಬೇಕು ಎಂದರೆ, ಈ ಟ್ರಿಕ್ ಬಳಸಿ ನಿಲ್ಲಿಸಿ. ಯಾರಿಗೂ ತೊಂದರೆ ಆಗೋದೇ ಇಲ್ಲ.

ಹಾಗಿದ್ದರೆ ಕಷ್ಟದಲ್ಲಿ ಇರುವವರು ಮತ್ತು ಮಧ್ಯವ ವರ್ಗದವರು ಚಿನ್ನ ಖರೀದಿ ಮಾಡಬೇಕು ಎಂದರೆ ಹೇಗೆ? ಮೊದಲೇ ಚಿನ್ನ ಕೊಟ್ಟು ನಂತರ ಇಎಂಐ ರೀತಿಯಲ್ಲಿ ಹಣ ವಸೂಲಿ ಮಾಡುವುದು ಕಷ್ಟ.. ಆದರೆ ಇದನ್ನು ರಿವರ್ಸ್ ಮಾಡಬಹುದು. ಜನರು ತಿಂಗಳಿಗೆ ಇಷ್ರು ಎಂದು ಹಣ ಪಾವತಿ ಮಾಡಿ, ನಿರ್ದಿಷ್ಟ ತಿಂಗಳು ಮುಗಿದ ನಂತರ ಪಾವತಿ ಮಾಡಿರುವಷ್ಟು ಮೊತ್ತಕ್ಕೆ ಚಿನ್ನ ಪಡೆಯಬಹುದು. ಇದರಿಂದ ಗ್ರಾಹಕರಿಗೆ ಮತ್ತು ಅಂಗಡಿಯವರಿಗೆ ಇಬ್ಬರಿಗೂ ನಷ್ಟ ಆಗುವುದಿಲ್ಲ. ಈ ರೀತಿ ಮಾಡಲು ಚಿನ್ನದ ಅಂಗಡಿಯವರು ಮಾಸಿಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ..

ಜನರಿಗೆ ಈ ಯೋಜನೆ ಇಷ್ಟವಾಗಿದ್ದು, ದೊಡ್ಡ ದೊಡ್ಡ ಆಭರಣ ಅಂಗಡಿಯವರು ಈ ಯೋಜನೆಗಳನ್ನು ತಂದಿದ್ದಾರೆ. ಹಣ ಇದ್ದಾಗ ಖರ್ಚು ಮಾಡುವುದಕ್ಕಿಂತ ಪ್ರತಿ ತಿಂಗಳು ಸ್ವಲ್ಪ ಮೊತ್ತ ಉಳಿಸಿ, ನಂತರ ಚಿನ್ನ ಖರೀದಿ ಮಾಡುವುದು ಒಳ್ಳೆಯ ಕೆಲಸ. ಈ ರೀತಿ ಚಿನ್ನ ಖರೀದಿ ಮಾಡಿದರೆ ವೇಸ್ಟೇಜ್, ಮೇಕಿಂಗ್ ಚಾರ್ಜ್ ಖರ್ಚು ಇರುವುದಿಲ್ಲ. ಒಂದು ವರ್ಷ ಹಣ ಕಟ್ಟಿ ಒಂದು ವರ್ಷದ ನಂತರ ಆ ಮೊತ್ತಕ್ಕೆ ತಕ್ಕಷ್ಟು ಚಿನ್ನ ಖರೀದಿ ಮಾಡಬಹುದು. ಆದರೆ ಈ ಯೋಜನೆಯಲ್ಲಿ ಏನಾದರು ಮೋಸ ಇದೆಯಾ? ಈ ಬಗ್ಗೆ ತಜ್ಞರು ಹೇಳೋದೇನು?

Is there any risk in joining monthly gold investment schemes
Is there any risk in joining monthly gold investment schemes

ತಜ್ಞರು ಹೇಳುವುದು ಏನು ಎಂದರೆ, ಮೊದಲಿಗೆ ಈ ರೀತಿ ಚಿನ್ನದ ಅಂಗಡಿಯವರು ಹಣ ಪಡೆಯುವುದಕ್ಕೆ ಕಾನೂನು ಒಪ್ಪಿಗೆ ಇಲ್ಲ. ಜೊತೆಗೆ 12 ತಿಂಗಳು ನೀವು ದುಡ್ಡು ಕಟ್ಟಿದರೆ ನಿಮಗೆ ಬಡ್ಡಿ ಬರುವುದಿಲ್ಲ, ನೀವು ಚಿನ್ನ ಖರೀದಿ ಮಾಡುವ ದಿನ ಚಿನ್ನದ ಬೆಲೆ ಎಷ್ಟಿರುತ್ತದೆಯೋ, ಅಷ್ಟೇ ಬೆಲೆಗೆ ಚಿನ್ನ ಮಾರಾಟ ಮಾಡುತ್ತಾರೆ. ಇದರಿಂದ ಲಾಭ ಸಿಗುವುದಿಲ್ಲ ಎನ್ನುತ್ತಾರೆ ತಜ್ಞರು. ಇದಕ್ಕಿಂತ ನೀವು ಬ್ಯಾಂಕ್ ನಲ್ಲಿ ಒಂದು ವರ್ಷಕ್ಕೆ ಆರ್.ಡಿ ಮಾಡಿದರೆ ನಿಮಗೆ ಬಡ್ಡಿ ಬರುತ್ತದೆ. ಆ ಹಣದಲ್ಲಿ ಚಿನ್ನ ಕೊಂಡುಕೊಳ್ಳಬಹುದು. ಇದು ಒಳ್ಳೆಯ ಉಪಾಯ ಆಗಿದೆ. ಆದರೆ ನಿರ್ಧಾರ ಮಾಡುವ ಮುನ್ನ ನೂರು ಸಾರಿ ಯೋಚಿಸಿ. ಇದನ್ನು ಓದಿ: ನಿಮಗೆ ನೀವೇ ಬಾಸ್ ಆಗಬೇಕು ಎಂದರೆ, ಈ ಉದ್ಯಮ ಆರಂಭಿಸಿ- ತಿಂಗಳಿಗೆ 60 ಸಾವಿರ ಆದಾಯ ಫಿಕ್ಸ್. ಕಡಿಮೆ ಆಗೋದೇ ಇಲ್ಲ.

Comments are closed.