BPL Card Holders: ಕೊನೆಗೂ ಜನರಿಗೆ ನೆಮ್ಮದಿ ಸುದ್ದಿ ಕೊಟ್ಟ ಆಹಾರ ಇಲಾಖೆ- ಕೊನೆ ಕ್ಷಣದಲ್ಲಿ ಟ್ವಿಸ್ಟ್. ರೇಷನ್ ಕಾರ್ಡ್ ಇರುವವರಿಗೆ ಮಾತ್ರ.

BPL Card Holders: ಕೊನೆಗೂ ಜನರಿಗೆ ನೆಮ್ಮದಿ ಸುದ್ದಿ ಕೊಟ್ಟ ಆಹಾರ ಇಲಾಖೆ- ಕೊನೆ ಕ್ಷಣದಲ್ಲಿ ಟ್ವಿಸ್ಟ್. ರೇಷನ್ ಕಾರ್ಡ್ ಇರುವವರಿಗೆ ಮಾತ್ರ.

BPL Card Holders: ಇತ್ತೀಚಿನ ದಿನಗಳಲ್ಲಿ ಒಂದರ ಮೇಲೆ ಒಂದರ ಮೇಲೊಂದುರಂತೆ ಸರ್ಕಾರಗಳು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದು ಕೂಡ ರೇಷನ್ ಕಾರ್ಡ್ ಸಂಬಂಧಿತ ಯೋಜನೆಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಉದಾಹರಣೆಗೆ ಅನ್ನ ಭಾಗ್ಯ ಯೋಜನೆಯನ್ನು(Anna Bhagya Scheme) ಕೂಡ ನೀವು ತೆಗೆದುಕೊಳ್ಳಬಹುದಾಗಿದೆ. ಹೀಗಾಗಿ ರೇಷನ್ ಕಾರ್ಡಿಗೆ ಹೊಸದಾಗಿ ಅರ್ಜಿ ಹಾಕುವುದು ಹಾಗೂ ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿಯನ್ನು ಮಾಡುವಂತಹ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯುತ್ತಿವೆ.

ಈಗ ಆಹಾರ ಇಲಾಖೆಯ ಪ್ರಕಾರ ತಿಳಿದು ಬಂದಿರುವ ಮಾಹಿತಿಯಲ್ಲಿ ಸೆಪ್ಟೆಂಬರ್ 1 ರಿಂದ 10 ನೇ ತಾರೀಖಿನವರೆಗೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ಬಿಪಿಎಲ್ ಕಾರ್ಡ್ದಾರರಿಗೆ(BPL Card Holders) ತಿದ್ದುಪಡಿಯನ್ನು ಮಾಡುವಂತಹ ಅವಕಾಶವನ್ನು ಅವರ ಹತ್ತಿರದ ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ನೀಡಲಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

(BPL Card Holders) ಕೆಲವು ಸಮಯಗಳಿಂದಲೂ ಕೂಡ ಸರ್ವರ್ ಡೌನ್ ಕಾರಣದಿಂದಾಗಿ ಈ ಬದಲಾವಣೆಗಳನ್ನು ಮಾಡಲು ಸ್ವಲ್ಪಮಟ್ಟಿಗೆ ಕಷ್ಟ ಆಗುತ್ತಿತ್ತು ಹೀಗಾಗಿ 12 ಗಂಟೆಯಿಂದ ಸಂಜೆ 5ರವರೆಗೆ ಮಾಡುವಂತಹ ಸಮಯಾವಕಾಶವನ್ನು ನೀಡಲಾಗುತ್ತಿತ್ತು. ಯಾವೆಲ್ಲ ತಿದ್ದುಪಡಿಗಳನ್ನು ರೇಷನ್ ಕಾರ್ಡ್ ನಲ್ಲಿ ಮಾಡಿಸಬಹುದು ಎನ್ನುವುದನ್ನು ನೋಡುವುದಾದರೆ ರೇಷನ್ ಕಾರ್ಡ್ ನಲ್ಲಿ ಇರುವಂತಹ ಫಲಾನುಭವಿಗಳ ಹೆಸರು ಬದಲಾವಣೆ(Name Change In Ration Card), ಪಡಿತರ ಸಿಗುವಂತಹ ನ್ಯಾಯಬೆಲೆ ಅಂಗಡಿಯ ಪಡಿತರ ಕೇಂದ್ರ ಬದಲಾವಣೆಯನ್ನು ಮಾಡಬಹುದು ಹಾಗೂ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಸದಸ್ಯರ ಹೆಸರನ್ನು ಹಾಕಿಸುವುದು ಹಾಗೂ ತೆಗೆಯುವ ಕೆಲಸವನ್ನು ಕೂಡ ಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ನಲ್ಲಿ ಯಜಮಾನರ ಹೆಸರನ್ನು ಬದಲು ಮಾಡಿ ಮಹಿಳಾ ಯಜಮಾನರ ಹೆಸರನ್ನು ಸೇರಿಸುವುದು.

ಇದರ ಕುರಿತಂತೆ ಸಚಿವರಾಗಿರುವಂತಹ ಕೆಎಚ್ ಮುನಿಯಪ್ಪ(KH Muniyappa) ಕೂಡ ಸಾಮಾನ್ಯ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ (BPL Card Holders). ಸರ್ವರ್ ಸಮಸ್ಯೆಯಿಂದಾಗಿ ಕಾರ್ಡುಗಳ ತಿದ್ದುಪಡಿ ವಿಳಂಬವಾಗುತ್ತಿತ್ತು ಎನ್ನುವ ಕಾರಣಕ್ಕಾಗಿ ಈಗ ಸಂಬಂಧಪಟ್ಟಂತಹ ಇಲಾಖೆಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದ್ದು ಪ್ರತಿಯೊಬ್ಬರು ಕೂಡ ನಿಗದಿತ ದಿನಾಂಕದಿಂದ ಪ್ರಾರಂಭಿಸಿ ಕೊನೆಯ ದಿನಾಂಕದೊಳಗೆ ನಾಗರಿಕರಿಗೆ ಸುಲಭ ರೀತಿಯಲ್ಲಿ ಯಾವುದೇ ಕಷ್ಟ ಬರದಂತೆ ನಡೆಸಿಕೊಡಲಾಗುವುದು ಎನ್ನುವುದಾಗಿ ಸಚಿವಾಲಯದಿಂದ ಸುದ್ದಿ ಹೊರಬಿದ್ದಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಹೊಸದಾಗಿ ಅರ್ಜಿ ಸಲ್ಲಿಸಿರುವಂತಹ ಜನರಿಗೆ ಕೂಡ ಆದಷ್ಟು ಶೀಘ್ರದಲ್ಲಿ ಇರುವಂತಹ ಸಮಸ್ಯೆಗಳನ್ನು ಪರಿಹಾರ ಮಾಡಿ ರೇಷನ್ ಕಾರ್ಡ್(Ration Card) ಅವರ ಕೈಗೆ ತಲುಪುವ ಹಾಗೆ ಮಾಡಬೇಕು ಎನ್ನುವಂತಹ ಗುರಿಯನ್ನು ಕೂಡ ನಾವು ಇಟ್ಟುಕೊಂಡಿದ್ದೇವೆ ಆದರೆ ಅದಕ್ಕೆ ಕೆಲವೊಂದು ತೊಡಕುಗಳು ಉಂಟಾಗಿದ್ದು ಅವುಗಳನ್ನು ಬಗೆಹರಿಸಿಕೊಂಡು ಹಂತ ಹಂತವಾಗಿ ಹೊಸ ರೇಷನ್ ಕಾರ್ಡ್ಗಳನ್ನು ಕೂಡ ಬಿಡುಗಡೆ ಮಾಡುತ್ತೇವೆ ಎಂಬುದಾಗಿ ಕೂಡ ಸಚಿವರು ಭರವಸೆಯನ್ನು ನೀಡಿದ್ದಾರೆ.

ಸದ್ಯಕ್ಕೆ ರೇಷನ್ ಕಾರ್ಡ್ ಗಳ ತಿದ್ದುಪಡಿಯನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತಿದ್ದು ಸರ್ವರ್ ಸಮಸ್ಯೆ ನಡುವೆ ಕೂಡ ಸಂಬಂಧಪಟ್ಟಂತಹ ಅಧಿಕಾರಿಗಳು ಜನರ ರೇಷನ್ ಕಾರ್ಡ್ ಗಳಲ್ಲಿ ಇರುವಂತಹ ಕೆಲವೊಂದು ಪ್ರಮುಖ ತಿದ್ದುಪಡಿಗಳನ್ನು ಮಾಡಲು ಈಗಾಗಲೇ ಸೆಪ್ಟೆಂಬರ್ 1ರಿಂದ 10ರವರೆಗೆ ಸಮಯದ ಅವಧಿಯನ್ನು ಕೂಡ ನಿಗದಿಪಡಿಸಿದ್ದಾರೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವಂತಹ ಕರ್ನಾಟಕದ ನಾಗರಿಕರು ಅರ್ಹವಾಗಿರುವ ಉಚಿತ ಅಕ್ಕಿ ಹಾಗೂ ಉಳಿದ ಅಕ್ಕಿಗೆ ಹಣವನ್ನು ಪಡೆಯುವುದಕ್ಕೆ ಮೊದಲಿಗೆ ತಮ್ಮ ಬ್ಯಾಂಕ್ ಅಕೌಂಟ್ಗಳನ್ನು ರೇಷನ್ ಕಾರ್ಡಿಗೆ ಹಾಗೂ ರೇಷನ್ ಕಾರ್ಡ್ (BPL Card Holders) ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿಕೊಳ್ಳಬೇಕು ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ. ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಸಂಪೂರ್ಣವಾದ ಸೌಲಭ್ಯವನ್ನು ಪಡೆದುಕೊಳ್ಳಲು ಇವೆರಡು ಕೆಲಸವನ್ನು ಮಾಡಲೇಬೇಕು ಮಾಡದೆ ಹೋದಲ್ಲಿ ಅನ್ನಭಾಗ್ಯ ಯೋಜನೆಗೆ ಫಲಾನುಭವಿ ಗಳಾಗಲು ಸಾಧ್ಯವಿಲ್ಲ ಎಂಬುದನ್ನು ಕೂಡ ಆಹಾರ ಇಲಾಖೆ(Food Department) ಖಡಾ ಖಂಡಿತವಾಗಿ ಸ್ಪಷ್ಟಪಡಿಸಿದೆ.
ಇವುಗಳನ್ನು ಓದಿ; Business Idea: ನಿಮಗೆ ನೀವೇ ಬಾಸ್ ಆಗಬೇಕು ಎಂದರೆ, ಈ ಉದ್ಯಮ ಆರಂಭಿಸಿ- ತಿಂಗಳಿಗೆ 60 ಸಾವಿರ ಆದಾಯ ಫಿಕ್ಸ್. ಕಡಿಮೆ ಆಗೋದೇ ಇಲ್ಲ.
Plastic Rice:ಮಾರುಕಟ್ಟೆಯಲ್ಲಿ ಸಿಗುತ್ತಿರುವ ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಹೇಗೆ ಗೊತ್ತೇ? ಸಂಪೂರ್ಣ ಡೀಟೇಲ್ಸ್

Comments are closed.