Hero Glamour 125CC: ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ನೀಡಿದ ಹೀರೋ ಸಂಸ್ಥೆಯ 125 ಸಿಸಿ ಸಾಮರ್ಥ್ಯದ ಹೊಸ ಬೈಕ್. ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Hero Glamour 125CC released and here is the full details of Hero Glamour 125CC bike- Explained in Kannada

Hero Glamour 125CC– ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರುಕಟ್ಟೆ ಸಾಕಷ್ಟು ವೇಗವಾಗಿ ಬೆಳೆಯುತ್ತಿದ್ದು ಪ್ರತಿಯೊಂದು ಕಂಪನಿಗಳು ಕೂಡ ಹೊಸ ಹೊಸ ಬೈಕುಗಳನ್ನು ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವಂತಹ ಕೆಲಸವನ್ನು ಮಾಡುತ್ತಿದ್ದು ಅದರಲ್ಲೂ ವಿಶೇಷವಾಗಿ ಹಬ್ಬಗಳ ಸಂದರ್ಭದಲ್ಲಿ ಈ ಪ್ರಕ್ರಿಯೆ ಹೆಚ್ಚಾಗುತ್ತದೆ. ವಿಶೇಷವಾಗಿ ಈ ಬಾರಿ ಹೀರೋ ಮೋಟೋ ಕಾರ್ಪ್(Hero Motocorp) ಸಂಸ್ಥೆ ಹೊಸ ಡಿಸೈನ್ ಜೊತೆಗೆ Hero Glamour 125CC ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿ ನಿಂತಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Features of Hero Glamour 125CC bike explained in Kannada Language.

Hero Glamour 125CC ಬೈಕ್ ನಿಮಗೆ ಡ್ರಮ್ ಹಾಗೂ ಡಿಸ್ಕ್ ಬ್ರೇಕ್ ಎರಡು ವೇರಿಯಂಟ್ ಗಳಲ್ಲಿ ಕೂಡ ಸಿಗಲಿದೆ. ಬೈಕಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ Air Cooled ಇಂಜಿನ್ ಅನ್ನು ಅಳವಡಿಸಲಾಗಿದೆ. 10.6hp ಪವರ್ ಹಾಗೂ 10.6nm ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ. ಈಗಾಗಲೇ ಹೀರೋ ಕಂಪನಿ ಹೇಳಿರುವ ಪ್ರಕಾರ ಈ ಬೈಕ್ ನಿಮಗೆ ಬರೋಬ್ಬರಿ 63 ಕಿಲೋ ಮೀಟರ್ ಮೈಲೇಜ್ ಅನ್ನು ಪ್ರತಿ ಲೀಟರ್ ಪೆಟ್ರೋಲ್ ಗೆ ನೀಡುತ್ತದೆ. ಇನ್ನು ಸಾಕಷ್ಟು ಅತ್ಯಾಧುನಿಕ ಫೀಚರ್ಸ್ ಗಳನ್ನು ಕೂಡ ಹೊಸದಾಗಿ ಪರಿಚಯಿಸಲಾಗುತ್ತಿರುವಂತಹ Hero Glamour 125CC ಬೈಕಿನಲ್ಲಿ ಅಳವಡಿಸಿರುವುದು ತಿಳಿದುಬಂದಿದೆ.

Hero Glamour 125CC released and here is the full details of Hero Glamour 125CC bike- Explained in Kannada
Hero Glamour 125CC released and here is the full details of Hero Glamour 125CC bike- Explained in Kannada

Hero Glamour 125CC ಬೈಕ್ ಡಿಸೈನ್ ವಿಚಾರಕ್ಕೆ ಬಂದ್ರೆ ತನ್ನ ಹಳೆಯ ಡಿಸೈನ್ ಇಲ್ಲಿ ಮುಂದುವರೆಸಿಕೊಂಡು ಬಂದಿದೆ. ಫ್ಯೂಲ್ ಟ್ಯಾಂಕ್ ತುಂಬಾನೇ ದೊಡ್ಡದಾಗಿದೆ. ಮಿಕ್ಸ್ಡ್ ಮೆಟಲ್ ಚಕ್ರವನ್ನು(Mixed Metal Wheel For Hero Glamour 125CC) ಹೊಂದಿದೆ. ಮುಂದಿನ ಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಸಸ್ಪೆನ್ಷನ್ ಹಾಗೂ ಹಿಂದಿನ ಭಾಗದಲ್ಲಿ ಸ್ಪ್ರಿಂಗ್ ಸಸ್ಪೆನ್ಷನ್ ಅನ್ನು ಇದು ಹೊಂದಿದೆ. ಮುಂದಿನ ಭಾಗದಲ್ಲಿ ಡಿಸ್ಕ್ ಹಾಗೂ ಹಿಂದಿನ ಭಾಗದಲ್ಲಿ ಡ್ರಮ್ ಬ್ರೇಕ್ಗಳ ಕಾಂಬಿನೇಷನ್ ಅನ್ನು ಈ ಬೈಕ್ ಹೊಂದಿರುವುದನ್ನು ಕೂಡ ನೀವು ಇಲ್ಲಿ ತಿಳಿದುಕೊಳ್ಳಬಹುದು.

ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ.  ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope

ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits


ಇದಪ್ಪ ಅದೃಷ್ಟ ಅಂದ್ರೆ- ರೇಷನ್ ಕಾರ್ಡ್ ವಿಚಾರದಲ್ಲಿ ಮತ್ತೊಂದು ಸಿಹಿ ಸುದ್ದಿ. ಬಡವರಿಗೆ ನೆಮ್ಮದಿ ಸುದ್ದಿ. ಕೂಡಲೇ ಈ ಕೆಲಸ ಮಾಡಿ

Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.

ಹೀರೋ ಸಂಸ್ಥೆ ಹೇಳಿರುವ ಪ್ರಕಾರ ಈ ಬೈಕಿನ ಹಿಂದಿನ ಭಾಗದ ಸೀಟಿನಲ್ಲಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಎತ್ತರವನ್ನು ಕಡಿಮೆ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. 170 ಮಿಲಿಮೀಟರ್ ಗಳ ಗ್ರೌಂಡ್ ಕ್ಲಿಯರೆನ್ಸ್ ಅನ್ನು Hero Glamour 125CC ಬೈಕ್ ಹೊಂದಿದೆ. ರಿಯಲ್ ಟೈಮ್ ಮೈಲೇಜ್ ಜೊತೆಗೆ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಅನ್ನು ಕೂಡ ಹೊಂದಿದೆ. ಯಾವಾಗ ಬೇಕಾದರೂ ಕೂಡ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವ USB ಪೋರ್ಟ್ ಅನ್ನು ಕೂಡ ಇಲ್ಲಿ ಅಳವಡಿಸಲಾಗಿರುವುದನ್ನು ನೀವು ಕಾಣಬಹುದಾಗಿದೆ. ಹಾಗಿದ್ರೆ ಬನ್ನಿ ಈ ಬೈಕಿನ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.

Hero Glamour 125cc ಬೈಕಿನ ಡಿಸ್ಕ್ ಬ್ರೇಕ್ ವೇರಿಯಂಟ್ ಬೆಲೆ 86,348 ರೂಪಾಯಿ ಆಗಿದೆ. ಇದೇ ಬೈಕಿನ ಡ್ರಮ್ ಬ್ರೇಕ್ ರೂಪಾಂತರವನ್ನು ಗಮನಿಸುವುದಾದರೆ ಅದರ ಬೆಲೆ 82,348 ರೂಪಾಯಿ ಆಗಿದೆ. ಮೂರು ಬಣ್ಣಗಳ ಆಯ್ಕೆಯಲ್ಲಿ ದೊರಕುವಂತಹ ಈ ಬೈಕ್ ಅನ್ನು ನೀವು ನಿಮ್ಮ ಹತ್ತಿರದ ಹೀರೋ ಡೀಲರ್ಶಿಪ್ ಬಳಿ ಕೇಳಿ ಪಡೆದುಕೊಳ್ಳಬಹುದು ಖಂಡಿತವಾಗಿ ರೋಡಿನ ಮೇಲೆ ನಿಮಗೆ ಉತ್ತಮ ಬೈಕ್ ರೈಡಿಂಗ್ ಎಕ್ಸ್ಪೀರಿಯನ್ಸ್ ಅನ್ನು ಇದು ನೀಡುತ್ತದೆ.

Comments are closed.