
PM scholarship: ನಿಮ್ಮ ಮನೆಯಲ್ಲಿ ಓದುತ್ತಿರುವ ಮಗು ಇದೆಯೇ? ಹಾಗಿದ್ದರೆ ಅರ್ಜಿ ಹಾಕಿ 36000 ವಿದ್ಯಾರ್ಥಿ ವೇತನ ಪಡೆಯಿರಿ.
PM scholarship scheme apply details and Eligibility- Below is the complete details of pm scholarship scheme.
PM scholarship: ನಮಸ್ಕಾರ ಸ್ನೇಹಿತರೆ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿ(Narendra Modi) ಅವರು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಮಕ್ಕಳಿಗಾಗಿ ಹೊಸ ಸ್ಕಾಲರ್ಶಿಪ್ ಯೋಜನೆಯನ್ನು ಜಾರಿಗೆ ತಂದಿದ್ದು, ಅದರ ಪ್ರಕಾರ ವಿದ್ಯಾರ್ಥಿಗಳಿಗೆ ರೂ.30,000 ಹಾಗೂ ವಿದ್ಯಾರ್ಥಿನಿಯರಿಗೆ 36,000 ರೂಪಾಯಿಗಳ ಸ್ಕಾಲರ್ಶಿಪ್ ಸಿಗಲಿದೆ. ಹಾಗಿದ್ರೆ ಬನ್ನಿ ಇದು ಯಾರಿಗೆ ಸಿಗುತ್ತೆ? ಯಾವ ರೀತಿಯಲ್ಲಿ ಸಿಗುತ್ತೆ ಏನು ಅಂತ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಸ್ನೇಹಿತರೆ ಈ ಸುದ್ದಿ ಓದುವಾಗ ನಿಮಗಿದೆ ಇನ್ನೊಂದು ಸಿಹಿ ಸುದ್ದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. Loan
PM scholarship scheme apply details and Eligibility- Below is the complete details of pm scholarship scheme.
ಮಾಜಿ ಸೈನಿಕರು ಹಾಗೂ ಕರಾವಳಿ ಪಡೆಯ ಕಾವಲುಗಾರರು ಸೇರಿದಂತೆ ಈ ರೀತಿಯ ಸೈನಿಕ ಕುಟುಂಬಕ್ಕೆ ಸಂಬಂಧಪಟ್ಟಂತಹ ಮಕ್ಕಳಿಗೆ ತಮ್ಮ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಸ್ಕಾಲರ್ಶಿಪ್ (PM scholarship) ಮೂಲಕ ಆರ್ಥಿಕ ಸಹಾಯ ದೊರಕುತ್ತಿದೆ. ಮುಂದಿನ ವಿದ್ಯಾರ್ಥಿ ಜೀವನದ ಭವಿಷ್ಯವನ್ನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡಲು ಪ್ರಧಾನಿಗಳ ಸ್ಕಾಲರ್ಶಿಪ್ ಯೋಜನೆಯಿಂದ 36,000 ವರೆಗೂ ಕೂಡ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕ ಎಂಬುದಾಗಿ ಕೂಡ ನಿಗದಿಪಡಿಸಲಾಗಿದೆ.
ಕೇಂದ್ರ ಸೈನಿಕ ಮಂಡಳಿಯಿಂದ(KSB) ಹೊರ ಬಂದಿರುವ ಮಾಹಿತಿಯ ಪ್ರಕಾರ ಮಾಜಿ ಸೈನಿಕರ ಮಕ್ಕಳ ಮಾನ್ಯತೆ ಪಡೆದಿರುವಂತಹ ಉನ್ನತ ಕೋರ್ಸ್ ನಲ್ಲಿ ಓದುತ್ತಿರುವ ಮಕ್ಕಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದೆ. ಇದು 2023 ಹಾಗೂ 24ರ ಸಾಲಿನಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ಸೇರಿರುವಂತಹ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. BE, B.tech, BDS , MBBS , B.ed , BBA, BCA B.Farma ಮತ್ತು
MBA,MCA ಈ ಕೋರ್ಸ್ ಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಕೂಡ ಈ ಯೋಜನೆ ಅಡಿಯಲ್ಲಿ ಸ್ಕಾಲರ್ಶಿಪ್ ಸಿಗೋದಿಲ್ಲ. ಈ ಯೋಜನೆ ಅಡಿಯಲ್ಲಿ ಒಂದರಿಂದ ಐದು ವರ್ಷಗಳ ಕಾಲ ಅರ್ಹ ವಿದ್ಯಾರ್ಥಿಗಳಿಗೆ ಅಂದರೆ 5500 ವಿದ್ಯಾರ್ಥಿಗಳಿಗೆ. ಇದರಲ್ಲಿ ಪುರುಷರು 2750 ಅಭ್ಯರ್ಥಿಗಳು ಹಾಗೂ ಮಹಿಳೆಯರು 2750 ಅಭ್ಯರ್ಥಿಗಳು ಒಳಗೊಂಡಿರುತ್ತಾರೆ.
ಹುಡುಗರಿಗೆ ಪ್ರತಿ ತಿಂಗಳು 2500 ಗಳ ರೀತಿಯಲ್ಲಿ ವರ್ಷಕ್ಕೆ ರೂ.30,000 ಹಾಗೂ ಹುಡುಗಿಯರಿಗೆ ಪ್ರತಿ ತಿಂಗಳು 3000 ರೀತಿಯಲ್ಲಿ ವರ್ಷಕ್ಕೆ 36,000 ರೂಪಾಯಿಗಳನ್ನು ನೀಡುತ್ತಾರೆ. ಹಾಗಿದ್ರೆ ಬನ್ನಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಣವನ್ನು ಪಡೆದುಕೊಳ್ಳುವುದು ಹೇಗೆ ಎನ್ನುವಂತಹ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.
www.ksb.gov.in ಇದು ಕೆ ಎಸ ಬಿ ಆನ್ಲೈನ್ ಅರ್ಜಿ ಸಲ್ಲಿಸುವಂತಹ ಸೈಟ್ ಆಗಿದ್ದು ಇದಕ್ಕೆ ಹೋಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತಹ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅದಾದ ನಂತರ ಅಲ್ಲಿ ಕಾಣಿಸಿಕೊಳ್ಳುವಂತಹ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆಯ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಅರ್ಜಿ ಸಲ್ಲಿಸಿದ ನಂತರ ಒಂದು ಕಾಪಿ ನಿಮ್ಮ ಬಳಿ ಕೂಡ ಇರಲಿ. ಈ ಮೂಲಕ ನೀವು ಐದು ವರ್ಷಗಳವರೆಗೂ ಕೂಡ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬಹುದಾಗಿದ್ದು ಪ್ರಮುಖವಾಗಿ ನೀವು ಆರ್ಮಿ ಹಿನ್ನೆಲೆಯಿಂದ ಬಂದಿರುವವರಾಗಿರಬೇಕು ಎಂಬುದನ್ನು ನೆನಪು ಬಿಡಬೇಡಿ.
Comments are closed.