Get Loans Easily: ಹಬ್ಬಗಳ ಸಮಯದಲ್ಲಿ ಸಾಲ ಕೊಡಲು ಮುಂದಾದ ಮೂರು ದೊಡ್ಡ ಬ್ಯಾಂಕ್ ಗಳು. ಅರ್ಜಿ ಹಾಕಿ ಲೋನ್ ಪಡೆಯಿರಿ.
Get Loans Easily From the top banks during this diwali season.
Get Loans Easily: ನಮಸ್ಕಾರ ಸ್ನೇಹಿತರೇ ಇನ್ನೇನು ದೀಪಾವಳಿ ಹಬ್ಬ ಕೆಲವೇ ದಿನಗಳಲ್ಲಿ ಆಗಮಿಸಲಿದೆ. ಇದಕ್ಕೂ ಮುಂಚೆ ಪ್ರತಿಯೊಂದು ಕಂಪನಿಗಳು ಪ್ರತಿಯೊಂದು ಸಂಸ್ಥೆಗಳು ಕೂಡ ತಮ್ಮ ಪ್ರಾಡಕ್ಟ್ಗಳ ಮೇಲೆ ಗ್ರಾಹಕರಿಗೆ ರಿಯಾಯಿತಿ ಅಥವಾ ವಿಶೇಷವಾದ ಗಿಫ್ಟ್ಗಳನ್ನು ನೀಡುವಂತಹ ಕೆಲಸವನ್ನು ಮಾಡುತ್ತವೆ ಹಾಗೂ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ಭಾರತದ ಪ್ರಮುಖ ಮೂರು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀಡಲು ಹೊರಟಿರುವಂತಹ ಉಡುಗೊರೆಯ ಬಗ್ಗೆ. ಹಾಗಿದ್ರೆ ಬನ್ನಿ ಈ ಪ್ರಮುಖ ಬ್ಯಾಂಕುಗಳು ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಗ್ರಾಹಕರಿಗೆ ಏನೆಲ್ಲಾ ಉಡುಗೊರೆಗಳನ್ನು ನೀಡುತ್ತಿವೆ ಎಂಬುದನ್ನು ತಿಳಿಯೋಣ.
ಸ್ನೇಹಿತರೆ, ನಾವು ಈ ಲೇಖನದಲ್ಲಿ ಪ್ರೈವೇಟ್ ಬ್ಯಾಂಕ್ ಗಳು ನೀಡುವ ಲೋನ್ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ, ಒಂದು ವೇಳೆ ನಿಮಗೆ ಬಡ್ಡಿ ಇಲ್ಲದೆ, ಸರ್ಕಾರದಿಂದ ಲೋನ್ ಪಡೆಯಬೇಕು ಎನ್ನುವ ಆಲೋಚನೆ ಇದ್ದರೇ, ನಮ್ಮ ಕರ್ನಾಟಕ ರಾಜ್ಯ ಸರ್ಕಾರ ನಿಮಗೆ ಲೋನ್ ನೀಡುತ್ತದೆ. ಈ ಕುರಿತು ನಿಮಗೆ ಮಾಹಿತಿ ಬೇಕಿದ್ದರೆ, ದಯವಿಟ್ಟು ಈ ಲೇಖನದ ಕೊನೆಯಲ್ಲಿ ಲಿಂಕ್ ನೀಡಲಾಗಿದ್ದು, ಅದರಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಇಲ್ಲವಾದಲ್ಲಿ ನೀವು ನಮ್ಮ ಫೇಸ್ಬುಕ್ ಪುಟಕ್ಕೆ ಮೆಸೇಜ್ ಮಾಡಿದರೆ, ನಾವು ಮಾಹಿತಿ ನೀಡುತ್ತೇವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್(Punjab National Bank) ನ ದೀಪಾವಳಿ ಕೊಡುಗೆ – Punjab National Bank Loans: (Get Loans Easily)
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ಕಾರ್ ಅನ್ನು ಖರೀದಿಸುವುದಾದರೆ ಕಾರ್ ಲೋನ್ ಮೇಲೆ ಕೇವಲ 8.7% ಬಡ್ಡಿ ದರವನ್ನು ವಿಧಿಸಲಾಗುತ್ತಿದೆ. ಇನ್ನು ದೀಪಾವಳಿ ಹಬ್ಬದ ವಿಶೇಷವಾಗಿ ಪ್ರೊಸೆಸಿಂಗ್ ಫೀಸ್ ಹಾಗೂ ರಿಜಿಸ್ಟ್ರೇಷನ್ ಫೀಸ್ ನಲ್ಲಿ ಕೂಡ ವಿನಾಯಿತಿಯನ್ನು ನೀಡಲಾಗುತ್ತಿದೆ. ಹೋಂ ಲೋನ್ ಪಡೆಯುವವರಿಗೂ ಕೂಡ ಬಡ್ಡಿದರ ಕೇವಲ 8.4 ಪ್ರತಿಶತದಿಂದ ಪ್ರಾರಂಭವಾಗುತ್ತಿದೆ. ಹೋಂ ಲೋನ್ ನಲ್ಲಿ ಕೂಡ ಸಾಕಷ್ಟು ರೀತಿಯ ಶುಲ್ಕಗಳ ಮೇಲೆ ರಿಯಾಯಿತಿಯನ್ನು ದೀಪಾವಳಿ ಹಬ್ಬದ ಕಾರಣಕ್ಕಾಗಿ ನೀಡಲಾಗುತ್ತಿದೆ. ಹೀಗಾಗಿ ಒಂದು ವೇಳೆ ನೀವು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಇಷ್ಟೊಂದು ಲಾಭವನ್ನು ಪಡೆದುಕೊಳ್ಳಬಹುದು. Get Loans Easily Here from PNB
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದೀಪಾವಳಿ ಕೊಡುಗೆ- State Bank of India Loans
ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಬ್ಬದ ಕೊಡುಗೆಗಳನ್ನು ನೀಡಲು ಸೆಪ್ಟೆಂಬರ್ 1 ದಿನ ಪ್ರಾರಂಭಿಸಿ ಡಿಸೆಂಬರ್ 31ರವರೆಗೆ ಅಂದರೆ ಈ ವರ್ಷದ ಕೊನೆಯವರೆಗೂ ಕೂಡ ಅಭಿಯಾನವನ್ನು ಮುಂದುವರಿಸುತ್ತಿದೆ. ಮೊದಲನೇದಾಗಿ SBI ಗ್ರಾಹಕರು ಟರ್ಮ್ ಲೋನ್ ಗಳಲ್ಲಿ ಸಾಕಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ ಕ್ರೆಡಿಟ್ ಸ್ಕೋರ್(Credit Score) ಚೆನ್ನಾಗಿದ್ರೆ ಲೋನ್ ಮೇಲೆ ಸಿಗುವಂತಹ ಬಡ್ಡಿ ದರಗಳಲ್ಲಿ ಕೂಡ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.
ಅಂದರೆ 0.65% ವರೆಗೂ ಕೂಡ ಬಡ್ಡಿ ದರದ ಮೇಲೆ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ. ಸಿಬಿಲ್ ಸ್ಕೋರ್ ಆಧಾರದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಸಿಗುವಂತಹ ಲೋನ್ ಮೇಲಿನ ಬಡ್ಡಿ ದರದ ರಿಯಾಯಿತಿ ನೋಡುವುದಾದರೆ 700 ರಿಂದ 749 ರವರೆಗೆ ಇರುವಂತಹ ಸಿಬಿಲ್ ಸ್ಕೋರ್ ಮೇಲೆ 8.7% ಬಡಿದರವನ್ನು ವಿಧಿಸಲಾಗುತ್ತದೆ. 750 ರಿಂದ 799 ರವರೆಗೆ ಇರುವಂತಹ ಸಿಬಿಲ್ ಸ್ಕೋರ್ ಮೇಲೆ ಟರ್ಮ್ ಲೋನ್ ಬಡ್ಡಿದರ 8.6 ಪ್ರತಿಶತ ಆಗಿರುತ್ತದೆ. ಸಿಬಿಲ್ ಸ್ಕೋರ್ 800 ಅಥವಾ ಅದಕ್ಕಿಂತ ಮೇಲೆ ಇದ್ದರೂ ಕೂಡ 8.6 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ. ಮೊದಲಿಗೆ ಈ ಬಡ್ಡಿದರ 9.15 ಪ್ರತಿಶತದಷ್ಟು ಇತ್ತು ಹಾಗೂ ಈಗ ಅದರ ಮೇಲೆ ಎಷ್ಟು ರಿಯಾಯಿತಿ ಸಿಕ್ತಾ ಇದೆ ಅನ್ನೋದನ್ನ ಕೂಡ ನೀವು ಇಲ್ಲಿ ತಿಳ್ಕೊಬಹುದಾಗಿದೆ. Get Loans Easily Here from State bank of India
ಬ್ಯಾಂಕ್ ಆಫ್ ಬರೋಡ ದೀಪಾವಳಿ ರಿಯಾಯಿತಿ- Bank of Baroda Loans
Bank of Baroda ದಲ್ಲಿ ಕೂಡ ಈ ಬಾರಿಯ ದೀಪಾವಳಿ ಹಬ್ಬದ ರಿಯಾಯಿತಿ ಭಾರಿ ಜೋರಾಗಿದೆ. ಇನ್ನು ಬ್ಯಾಂಗ್ ಆಫ್ ಬರೋಡದ ರಿಯಾಯಿತಿ ಅಭಿಯಾನ ಡಿಸೆಂಬರ್ 31ರವರೆಗೆ ಕೂಡ ಇರಲಿದೆ. ಹೋಂ ಲೋನ್ ಬಡ್ಡಿದರ ಇಲ್ಲಿ 8.4 ರಿಂದ ಪ್ರಾರಂಭವಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಗ್ರಾಹಕರು ಯಾವುದೇ ರೀತಿಯಲ್ಲಿ ಸಂಸ್ಕರಣಾ ಶುಲ್ಕವನ್ನು ನೀಡಬೇಕಾದ ಅಗತ್ಯವಿಲ್ಲ ಎಂಬುದನ್ನು ಕೂಡ ಬ್ಯಾಂಕ್ ಸ್ಪಷ್ಟಪಡಿಸಿದೆ.
ಒಂದು ವೇಳೆ ನೀವು ಈ ಮೂರು ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿದ್ದರೆ ಈ ಮೇಲೆ ಹೇಳಿರುವಂತಹ ರಿಯಾಯಿತಿ ಲಾಭಗಳನ್ನು ನೀವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಳಸಿಕೊಳ್ಳುವ ಮೂಲಕ ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ ಎಂಬುದನ್ನು ಕೂಡ ಈ ಮೂಲಕ ನೀವು ಕಂಡುಕೊಳ್ಳಬಹುದಾಗಿದೆ. Get Loans Easily Here from Bank of Baroda
Comments are closed.