Loan: ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇಲ್ಲದೆ ಇದ್ದರೂ ಈ ರೀತಿ ಮಾಡಿದರೆ ಲೋನ್ ನೀಡುತ್ತಾರೆ.

Here is Complete details of Loan on Fixed Deposit.

Loan: ನಮಸ್ಕಾರ ಸ್ನೇಹಿತರೇ ಸಾಕಷ್ಟು ಪರಿಸ್ಥಿತಿಗಳಲ್ಲಿ ನಮಗೆ ಆರ್ಥಿಕ ಸಹಾಯ ಬೇಕಾಗಿರುತ್ತದೆ. ಕೆಲವೊಂದು ಸಂದರ್ಭದಲ್ಲಿ ನೀವು ಗಮನಿಸಬಹುದು ಆರ್ಥಿಕ ಸಮಸ್ಯೆಗಳ ಕಾರಣದಿಂದಾಗಿ ಲೋನ್ ಪಡೆದುಕೊಳ್ಳುವುದು ನಮಗೆ ಕೊನೆಯ ಆಯ್ಕೆಯಾಗಿ ಉಳಿದುಕೊಳ್ಳುತ್ತದೆ. ಲೋನ್ ಪಡೆದುಕೊಳ್ಳಲು ಕೂಡ ನಮ್ಮ ಕ್ರೆಡಿಟ್ ಸ್ಕೋರ್(credit score) ಚೆನ್ನಾಗಿರಬೇಕು. ಇಲ್ಲವಾದಲ್ಲಿ ಬ್ಯಾಂಕಿನಿಂದಲೂ ಕೂಡ ಲೋನ್ ಸಿಗುವುದು ಕಷ್ಟ ಸಾಧ್ಯ ಎಂದು ಹೇಳಬಹುದಾಗಿದೆ. ಇವತ್ತಿನ ಲೇಖನಿಯಲ್ಲಿ ಈ ಸಮಸ್ಯೆಗೆ ನಿಮಗೆ ಪರಿಹಾರವನ್ನು ನೀಡುವ ಕೆಲಸವನ್ನು ಮಾಡಲು ಹೊರಟಿದ್ದೇವೆ ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಹೊಸ ಸುದ್ದಿ: Loan: ಯಾವ ಬ್ಯಾಂಕ್ ಮುದ್ರಾ ಲೋನ್ ಕೊಟ್ಟಿಲ್ವಾ?? ಆಗಿದ್ರೆ ಬ್ಯಾಂಕ್ ಆ ಬರೋಡ ದಲ್ಲಿ ಈ ರೀತಿ ಮಾಡಿ, ಪಕ್ಕ 10 ಲಕ್ಷದ ವರೆಗೂ ಲೋನ್ ಕೊಡ್ತಾರೆ.

Below is the Complete details of FD loan

ಈ ಸಂದರ್ಭದಲ್ಲಿ ಇರುವಂತಹ ಒಂದು ಪ್ರಮುಖ ಉಪಾಯ ಏನೆಂದರೆ ಪ್ರತಿಯೊಬ್ರು ಕೂಡ ತಮ್ಮ ಮುಂದಿನ ಭವಿಷ್ಯಕ್ಕಾಗಿ ಫಿಕ್ಸೆಡ್ ಡೆಪಾಸಿಟ್(fixed deposit) ನಲ್ಲಿ ಹೂಡಿಕೆ ಮಾಡಿರುತ್ತಾರೆ. ಫಿಕ್ಸೆಡ್ ಡೆಪಾಸಿಟ್ ಮೂಲಕ ಕೂಡ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಫಿಕ್ಸೆಡ್ ಡೆಪಾಸಿಟ್ ಮೇಲೆ ಲೋನ್ ಪಡೆದುಕೊಳ್ಳುವುದು ನಿಮಗೆ ಫಿಕ್ಸೆಡ್ ಡೆಪಾಸಿಟ್ ನಿಂದ ಸಿಗುತ್ತಿರುವಂತಹ ಬಡ್ಡಿಗಿಂತ ಒಂದು ಅಥವಾ ಎರಡು ಪ್ರತಿಶತ ಬಡ್ಡಿದರ ಹೆಚ್ಚಾಗಿರುತ್ತದೆ. ಇನ್ನು ಸಾಲವನ್ನು ವಾಪಸ್ ಕಟ್ಟುವುದಕ್ಕೆ 60 ತಿಂಗಳುಗಳ ಸಮಯಾವಕಾಶವನ್ನು ಕೂಡ ನೀಡಲಾಗುತ್ತದೆ. ಇದನ್ನು ಓವರ್ ಡ್ರಾಫ್ಟ್(overdraft) ಅಥವಾ ಡಿಮ್ಯಾಂಡ್ ಲೋನ್ ರೂಪದಲ್ಲಿ ನೀಡಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಿಕ್ಸೆಡ್ ಡೆಪಾಸಿಟ್ ಮೇಲಿನ ಸಾಲ – Loan on Fixed deposit SBI bank

ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India) ಫಿಕ್ಸೆಡ್ ಡೆಪಾಸಿಟ್ ಮೇಲೆ ಪಡೆದುಕೊಳ್ಳುವಂತಹ ಸಾಲದ ಮೇಲೆ ಅದಕ್ಕೆ ಸಿಗುವಂತಹ ಬಡ್ಡಿದರಕ್ಕಿಂತ ಒಂದು ಪ್ರತಿಶತ ಹೆಚ್ಚು ಬಡ್ಡಿದರವನ್ನು ವಿಧಿಸುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ ಅಥವಾ Yono ಅಪ್ಲಿಕೇಶನ್ ಮೂಲಕ ಇವುಗಳನ್ನು ಪಡೆದುಕೊಳ್ಳಬಹುದಾಗಿದ್ದು ಒಟ್ಟಾರೆ ಫಿಕ್ಸೆಡ್ ಡೆಪಾಸಿಟ್ ಹಣದ 95 ಪ್ರತಿಶತ ಹಣವನ್ನು ಮಾತ್ರ ನೀವು ಸಾಲ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಸಾಲದ ಮಿತಿ 5000 ಪ್ರಾರಂಭಿಸಿ ಐದು ಕೋಟಿ ರೂಪಾಯಿವರೆಗೆ ಮ್ಯಾಕ್ಸಿಮಮ್ ಆಗಿದೆ.

ಬ್ಯಾಂಕ್ ಆಫ್ ಬರೋಡ, HDFC, AXIS BANK ಫಿಕ್ಸೆಡ್ ಡೆಪಾಸಿಟ್ ಮೇಲಿನ ಸಾಲBank of Baroda, HDFC, Axis Bank loan

ಬ್ಯಾಂಕ್ ಆಫ್ ಬರೋಡದಲ್ಲಿ(Bank of Baroda) ಕೂಡ ಫಿಕ್ಸೆಡ್ ಡೆಪಾಸಿಟ್ ಸಾಲದ ಮೇಲೆ ಒಂದು ಪ್ರತಿಶತ ಹೆಚ್ಚುವರಿ ಬಡಿದಿರವನ್ನು ವಿಧಿಸಲಾಗುತ್ತದೆ. ಹೆಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ಕೂಡ ನೀವು ಪಡೆದುಕೊಳ್ಳುವ ಫಿಕ್ಸೆಡ್ ಡೆಪಾಸಿಟ್ ಸಾಲದ ಮೇಲೆ ಎರಡು ಪ್ರತಿಶತ ಹೆಚ್ಚುವರಿ ಬಡ್ಡಿ ದರವನ್ನು ವಿಧಿಸುತ್ತದೆ. ಓವರ್ ಡ್ರಾಫ್ಟ್ ಪ್ರಕ್ರಿಯೆಗಾಗಿ ಹೆಚ್ಚಿನ ಬಡ್ಡಿ ದರವನ್ನು ವಿಧಿಸಲಾಗುತ್ತದೆ. Axis Bank ನಲ್ಲಿ ಕೂಡ ಫಿಕ್ಸೆಡ್ ಡೆಪಾಸಿಟ್ ಮೇಲೆ ಸಿಗುವಂತಹ ಲೋನ್ ಮೇಲೆ ಹೆಚ್ಚಿನ ಎರಡು ಪ್ರತಿಶತ ಬಡಿದಾರವನ್ನು ವಿಧಿಸಲಾಗುತ್ತದೆ.

ಪಂಜಾಬ್ ನ್ಯಾಷನಲ್(Punjab National Bank) ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಮೇಲೆ ಸಾಲPunjab national Bank loan

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಕೂಡ ನಿಮ್ಮ FD ಯ ವಿರುದ್ಧ ಸಿಗುವಂತಹ ಆನ್ಲೈನ್ ಓವರ್ ಡ್ರಾಫ್ಟ್ ಗಾಗಿ ಪಡೆದುಕೊಳ್ಳುವ ಸಾಲದ ಮೇಲೆ ಸಾಮಾನ್ಯವಾಗಿ ಸಿಗುವಂತಹ ಬಡ್ಡಿದರಕ್ಕಿಂತ ಸಾಲದ ಮೇಲೆ ಸಾಮಾನ್ಯ ನಾಗರಿಕರಿಗೆ 0.75% ಹೆಚ್ಚುವರಿ ಬಡ್ಡಿದರವನ್ನು ವಿಧಿಸುತ್ತದೆ. ಓವರ್ ಡ್ರಾಫ್ಟ್ ಸೌಲಭ್ಯಕ್ಕಾಗಿ ಬಡ್ಡಿದರವನ್ನು ಕೂಡ ವಿಧಿಸಲಾಗುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಸ್ಟಾಪ್ ಅಥವಾ ಈ ಹಿಂದೆ ಕೆಲಸ ಮಾಡಿದಂತಹ ವ್ಯಕ್ತಿಗಳಿಗೆ 10 ಲಕ್ಷ ರೂಪಾಯಿಗಳ ಫಿಕ್ಸಡ್ ಡೆಪಾಸಿಟ್ ಮೇಲಿನ ಆನ್ಲೈನ್ ಓವರ್ ಡ್ರಾಪ್ಗಾಗಿ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸುವುದಿಲ್ಲ. ಇನ್ನು ತನ್ನ ಸ್ಟಾಫ್ ಗಳಿಗಾಗಿ 10 ಲಕ್ಷ ರೂಪಾಯಿಗಳ ಮೇಲಿನ ಫಿಕ್ಸೆಡ್ ಡೆಪಾಸಿಟ್ ಮೇಲಿನ ಸಾಲದ ಓವರ್ ಡ್ರಾಫ್ಟ್ ಗಾಗಿ ಬಡ್ಡಿ ದರವನ್ನು ಚಾರ್ಜ್ ಮಾಡುತ್ತದೆ ಎಂಬುದಾಗಿ ತಿಳಿದುಬಂದಿದೆ.

ಫಿಕ್ಸಿಡ್ ಡೆಪಾಸಿಟ್ ಮೇಲೆ ಲೋನ್ ಪಡೆದುಕೊಳ್ಳುವುದರ ಮೇಲಿನ ಲಾಭ ಏನು? Advantages of getting loan on Fixed deposits.

ನಿಮ್ಮ ಕ್ರೆಡಿಟ್ ಸ್ಕೋರ್(Credit Score) ಹಾಗೂ ಹಿಸ್ಟರಿ ಕೆಟ್ಟದಾಗಿದ್ದರೂ ಕೂಡ ನಿಮಗೆ ಇದರ ಮೇಲೆ ಸಾಲ ಸಿಗುತ್ತದೆ. ಪರ್ಸನಲ್ ಲೋನ್ ಬಡ್ಡಿದರಕ್ಕೆ ಹೋಲಿಸಿದರೆ ಮಿಕ್ಸೆಡ್ ಡೆಪಾಸಿಟ್ ಮೇಲಿನ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗಿದೆ. ಈ ರೀತಿಯ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಬ್ಯಾಂಕುಗಳು ನೀವು ಹೂಡಿಕೆ ಮಾಡಿರುವಂತಹ ಒಟ್ಟಾರೆ ಹಣದ 95% ಹಣವನ್ನು ಸಾಲ ರೂಪದಲ್ಲಿ ನೀಡುತ್ತವೆ.

Comments are closed.