Instant Loan: ದಿಡೀರ್ ಎಂದು ಹಣದ ಅವಶ್ಯಕತೆ ಬಂದಾಗ 2000 ರೂಪಾಯಿಯನ್ನು ಮೂರು ನಿಮಿಷದಲ್ಲಿ ಪಡೆಯೋದು ಹೇಗೆ??

How to get a instant loan when you need money urgently

Instant Loan: ನಮಸ್ಕಾರ ಸ್ನೇಹಿತರೆ, ಸಾಕಷ್ಟು ಸಂದರ್ಭದಲ್ಲಿ ನಮಗೆ ಹಣದ ಅವಶ್ಯಕತೆ ತಟ್ಟನೆ ಬರುತ್ತದೆ ಆದರೆ ಆ ಸಂದರ್ಭದಲ್ಲಿ ನಮ್ಮ ಬಳಿ ಹಣ ಇರುವುದಿಲ್ಲ. ಸ್ಪೆಸಿಫಿಕ್ ಆಗಿ ಹೇಳುವುದಾದರೆ 2 ಸಾವಿರ ರೂಪಾಯಿಗಳ ಅವಶ್ಯಕತೆ ಇದ್ದಾಗ ನಾವು ಯಾವ ರೀತಿಯಲ್ಲಿ ಹಣವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಹೇಳೋದಕ್ಕೆ ಹೊರಟಿದ್ದೇವೆ. ತಪ್ಪದೆ ಇದಕ್ಕಾಗಿದೆ ಕೈಯನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.

ಈ ರೀತಿಯ ಅರ್ಜೆನ್ಸಿ ಕಾಣ ಸಿಗುವುದು ಕೇವಲ ಮೆಡಿಕಲ್ ಅಥವಾ ಶಾಲೆಗೆ ಸಂಬಂಧಿತ ಫೀಸ್ ವಿಚಾರದಲ್ಲಿ ಅಥವಾ ಪರ್ಸನಲ್ ಖರ್ಚಿಗಾಗಿ ಬೇಕಾಗುತ್ತದೆ. ಇದಕ್ಕೆ ಇರುವಂತಹ ಜನರಲ್ ಪರಿಹಾರ ಎಂದರೆ ನಿಮ್ಮ ಸ್ನೇಹಿತರು ಇಲ್ಲವೇ ಸಂಬಂಧಿಕರ ಬಳಿ ಸಾಲವನ್ನು ಕೇಳುವುದು, ಇಲ್ಲದ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಪಡೆದುಕೊಳ್ಳುವುದು, ಕೊನೆಯ ಆಯ್ಕೆಯಾಗಿ ನಾವು ನಿಮಗೆ ಪ್ರಮುಖವಾಗಿ ಹೇಳಲು ಹೊರಟಿರೋದು, ಲೋನ್ ನೀಡುವ ಅಪ್ಲಿಕೇಶನ್ಗಳು ಮೂಲಕ ಹಣವನ್ನು ಪಡೆದುಕೊಳ್ಳುವುದು.

ಇದನ್ನು ಕೂಡ ಓದಿ: ಬಹಳ ಡಿಮ್ಯಾಂಡ್ ಇರುವ ಡಿಜಿಟಲ್ ಮಾರ್ಕೆಟಿಂಗ್ ಕಲಿತು, ಲಕ್ಷ ಲಕ್ಷ ಸಂಬಳ ನೀಡುವ ಜಾಬ್ ಪಡೆಯಿರಿ.

2000 ರೂಪಾಯಿ ಲೋನ್ ಪಡೆದುಕೊಳ್ಳಲು ನಿಮಗಿರಬೇಕಾಗಿರುವ ಅರ್ಹತೆಗಳು – Eligibility to get a Instant Loan

ನಿಮಗೆ 2000 ಲೋನ್ ಬೇಕಂತ ಇದ್ರೆ ಅದನ್ನು ನೀಡುವುದಕ್ಕೆ ನಿಮಗೆ ಸಾಕಷ್ಟು ಲೋನ್ ಅಪ್ಲಿಕೇಶನ್ ಗಳು ಕೂಡ ಕಾಣಸಿಗುತ್ತವೆ. ಆದರೆ ನೀವು ಕೂಡ ಕೆಲವೊಂದು ಅರ್ಹತೆಗಳನ್ನು ಹೊಂದಿದ್ದರೆ ಮಾತ್ರ ಅವುಗಳು ನಿಮಗೆ ಪರ್ಸನಲ್ ಅಥವಾ ಇನ್ಸ್ಟಂಟ್ ಲೋನ್ ಅನ್ನು ನೀಡುತ್ತವೆ.

ಉದಾಹರಣೆಗೆ ನಿಮ್ಮ ವಯಸ್ಸು 21ರಿಂದ 58 ವರ್ಷಗಳ ನಡುವೆ ಇರಬೇಕಾಗಿರುವುದು ಕೂಡ ಪ್ರಮುಖವಾಗಿರುತ್ತದೆ. ಪ್ರಮುಖವಾಗಿ ಭಾರತದ ಪೌರತ್ವವನ್ನು ಹೊಂದಿರಬೇಕು. ಕೆಲಸ ಮಾಡುವವರಿಗೆ ಮಾತ್ರ ಈ ಲೋನ್ ಗಳು ಸಿಗುತ್ತವೆ ಹೀಗಾಗಿ ಕಡಿಮೆ ಎಂದರು ಹದಿನೈದು ಸಾವಿರ ರೂಪಾಯಿಗಳ ಸಂಬಳವನ್ನು ಪ್ರತಿ ತಿಂಗಳು ಹೊಂದಿರಬೇಕು. ಕ್ರೆಡಿಟ್ ಸ್ಕೋರ್ 720 ಅಂಕಗಳನ್ನು ಮೀರಿರಬೇಕು ಅದನ್ನು ಮಾತ್ರ ಪರಿಗಣಿಸಿ ಲೋನ್ ಅನ್ನು ಕಂಪನಿಗಳು ನೀಡುತ್ತವೆ.

ಉದ್ಯೋಗಿ ಕಂಪನಿಯಲ್ಲಿ ಎರಡರಿಂದ ಮೂರು ವರ್ಷಗಳ ಕೆಲಸವನ್ನು ಮಾಡಿರುವಂತಹ ಅನುಭವವನ್ನು ಹೊಂದಿರಬೇಕು ಎಂಬ ನಿಯಮಗಳನ್ನು ಕೂಡ ಇದರಲ್ಲಿ ಅಳವಡಿಸಲಾಗುತ್ತದೆ. ಸ್ವಂತ ಉದ್ಯಮವನ್ನು ಹೊಂದಿರುವಂತಹ ವ್ಯಕ್ತಿಗಳು ಕೂಡ ಇಲ್ಲಿ ತಮ್ಮ ಅರ್ಹತೆಗೆ ತಕ್ಕಂತೆ ದೊಡ್ಡ ಪ್ರಮಾಣದಲ್ಲಿ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಈ ಡಾಕ್ಯುಮೆಂಟುಗಳನ್ನು ಕೊಟ್ಟರೆ ಮಾತ್ರ ಲೋನ್ ಅಪ್ಲಿಕೇಶನ್ ನಲ್ಲಿ ಲೋನ್ ಪಡೆಯೋದಕ್ಕೆ ಸಾಧ್ಯ- Documents required to get a Instant Loan

ಲೋನ್ಗಾಗಿ ಅಪ್ಲಿಕೇಶನ್ ಹಾಕುವವರ ಕೆಲವೊಂದು ಪ್ರಮುಖ ಡಾಕ್ಯುಮೆಂಟ್ ಗಳನ್ನು ಕೂಡ ಲೋನ್ ನೀಡುವಂತಹ ಕಂಪನಿಗಳು ಪರಿಶೀಲಿಸುತ್ತವೆ. ನಿಮ್ಮ ಐಡೆಂಟಿಟಿಯನ್ನು ಪರೀಕ್ಷಿಸುವುದಕ್ಕಾಗಿ ಆಧಾರ್ ಕಾರ್ಡ್ ಪಾನ್ ಕಾರ್ಡ್(PAN Card) ಹಾಗೂ ಪಾಸ್ಪೋರ್ಟ್ ಮತ್ತು ವೋಟರ್ ಐಡಿಗಳಂತಹ ದಾಖಲೆಗಳನ್ನು ಕೂಡ ಕೇಳುತ್ತವೆ. ಇದರ ಜೊತೆಗೆ ಒಂದು ಸೆಲ್ಫಿ ಅಂದರೆ ಅದನ್ನು ನೀವೇ ಎಂಬುದನ್ನು ದೃಢೀಕರಿಸುವುದಕ್ಕಾಗಿ ಕೇಳಲಾಗುತ್ತದೆ.

ಇದರ ಜೊತೆಗೆ ನೀವು ಸ್ವಂತ ಉದ್ಯಮವನ್ನು ಹೊಂದಿದ್ದರೆ ನಿಮ್ಮ ಇನ್ಕಮ್ ಟ್ಯಾಕ್ಸ್ ರಿಪೋರ್ಟ್ ಅಥವಾ ನೀವು ಸಂಬಳವನ್ನು ಪಡೆದುಕೊಳ್ಳುವಂತಹ ಉದ್ಯೋಗಿ ಆಗಿದ್ರೆ ನಿಮ್ಮ ಸ್ಯಾಲರಿ ಸ್ಲಿಪ್ ಅಥವಾ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಕೇಳಲಾಗುತ್ತದೆ. ಸರಿಯಾದ ರೀತಿಯಲ್ಲಿ ನಿಮ್ಮ ದಾಖಲೆಗಳನ್ನು ಪರಿಶೀಲಿಸಿದ ನಂತರ ಹಾಗೂ ಬೇಕಾಗಿರುವಂತಹ ಪ್ರಕ್ರಿಯೆಗಳನ್ನು ಪೂರೈಸಿದ ನಂತರ ನೇರವಾಗಿ ನಿಮ್ಮ ಲಿಂಕ್ ಆಗಿರುವಂತಹ ಬ್ಯಾಂಕ್ ಅಕೌಂಟ್ ಗೆ ನಿಮ್ಮ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನೀವು ಪ್ರತಿ ತಿಂಗಳ ಕಂತನ್ನು ಎಷ್ಟರ ಮಠದಲ್ಲಿ ಕಟ್ಟಲು ರೆಡಿಯಾಗಿದ್ದೀರೋ ಅದನ್ನು ಪರಿಗಣಿಸಿ ಪ್ರತಿ ತಿಂಗಳು ನಿಮ್ಮ ಖಾತೆಯಿಂದ ನೇರವಾಗಿ ಹಣವನ್ನು ಕಡಿತಗೊಳಿಸಲಾಗುತ್ತದೆ.

Comments are closed.