Get Loan: ಪರ್ಸನಲ್ ಲೋನ್ ತೆಗೆದುಕೊಳ್ಳುವ ಬದಲು, ಈ ರೀತಿ ಹಣ ಪಡೆಯಿರಿ. ಸುಲಭ ಮತ್ತು ಬಡ್ಡಿ ಕಡಿಮೆ
Get Loan: ಪರ್ಸನಲ್ ಲೋನ್ ತೆಗೆದುಕೊಳ್ಳುವ ಬದಲು, ಈ ರೀತಿ ಹಣ ಪಡೆಯಿರಿ. ಸುಲಭ ಮತ್ತು ಬಡ್ಡಿ ಕಡಿಮೆ
Get Loan: ನಮಸ್ಕಾರ ಸ್ನೇಹಿತರೆ ಸಾಕಷ್ಟು ಸಂದರ್ಭದಲ್ಲಿ ನಮಗೆ ಹಣದ ಅವಶ್ಯಕತೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಇರುತ್ತದೆ. ಆ ಸಮಯದಲ್ಲಿ ಹಣವನ್ನು ಎಲ್ಲಿಂದ ಪಡೆಯುವುದು ಅನ್ನೋದರ ಬಗ್ಗೆ ನಮ್ಮಲ್ಲಿ ಚಿಂತೆಗಳು ಉದ್ಭವವಾಗುತ್ತವೆ. ಸಾಲವನ್ನು ಪಡೆಯುವುದರಲ್ಲಿ ಕೂಡ ಸಾಕಷ್ಟು ವಿಧಗಳನ್ನು ನಾವು ಕಾಣಬಹುದಾಗಿದ್ದು ಜೆಬಿಗೆ ಹೊರೆಯಾಗದಂತಹ ಸಾಲಗಳನ್ನು ನಾವು ಪಡೆದುಕೊಳ್ಳುವುದು ಅತ್ಯಂತ ಪ್ರಮುಖವಾಗುತ್ತದೆ.
ಇಂದಿನ ಬೇರೆ ಸುದ್ದಿಗಳು – ಖಡಕ್ ಆದೇಶ ಪಾಲಿಸಲು ಮುಂದಾದ SBI- 5 ನಿಮಿಷದಲ್ಲಿ 50,000 ರಿಂದ 1,00,000 ದ ವರೆಗೆ ಲೋನ್.
ಇದೇ ಕಾರಣಕ್ಕಾಗಿ ಒಬ್ಬ ಬುದ್ಧಿವಂತರಾಗಿ ಹಣದ ಅವಶ್ಯಕತೆ ಇದ್ದಾಗ ಯಾವ ರೀತಿಯ ಸಾಲವನ್ನು ಆಯ್ಕೆ ಮಾಡಬೇಕಾಗಿರುತ್ತದೆ ಎನ್ನುವುದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ಹೇಳುವುದಕ್ಕೆ ಹೊರಟಿದ್ದೇವೆ. ಹಾಗಿದ್ದರೆ ಯಾವೆಲ್ಲ ಸಾಲಗಳು ಬೆಸ್ಟ್ ಆಪ್ಷನ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
Get Loan – ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯ ಮೇಲೆ ಸಾಲ(public provident fund)
ಒಂದು ವೇಳೆ ನೀವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹಣವನ್ನು ಹೂಡಿಕೆ ಮಾಡಿದ್ರೆ ಅಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದಾದ ಅವಕಾಶವನ್ನು ಹೊಂದಿರುತ್ತೀರಿ. ಇಲ್ಲಿ ಇರಬೇಕಾಗಿರುವ ಮತ್ತೊಂದು ನಿಯಮ ಏನೆಂದರೆ ನಿಮ್ಮ ಪಿಪಿಎಫ್ ಖಾತೆ ಕನಿಷ್ಠ ಪಕ್ಷ ಒಂದು ವರ್ಷದ ಅವಧಿಯನ್ನು ಪೂರೈಸಿರಬೇಕು. ನೀವು ಪಿಪಿಎಫ್ ಖಾತೆಯಲ್ಲಿ ಎಷ್ಟು ಹಣವನ್ನು ಠೇವಣಿ ಮಾಡಿದ್ದೀರೋ ನಿಮಗೆ ಸಿಗುವಂತಹ ಸಾಲ ಆ ಮೊತ್ತದ ಮೇಲೆ ನಿರ್ಧರಿತವಾಗುತ್ತದೆ. ಉದಾಹರಣೆಗೆ ನಿಮ್ಮ ಪಿಪಿಎಫ್ ಖಾತೆ ಮೇಲೆ ನಿಮಗೆ ಸಿಗುವಂತಹ ಬಡ್ಡಿದರ 7.1% ವಾಗಿದ್ದರೆ, ಅದರ ಮೇಲೆ ನೀವು ಪಡೆದುಕೊಳ್ಳುವಂತಹ ಸಾಲದ ಮೇಲೆ ನೀವು 8.1 ಪ್ರತಿಶತ ಬಡ್ಡಿದರವನ್ನು ಕಟ್ಟಬೇಕಾಗಿರುತ್ತದೆ. ಆದರೆ ಸಾಮಾನ್ಯ ಪರ್ಸನಲ್ ಲೋನ್ ಹೋಲಿಕೆಯಲ್ಲಿ ಖಂಡಿತವಾಗಿ ಇದೊಂದು ಉತ್ತಮ ಆಯ್ಕೆಯಾಗಿದೆ.
Gold loan- Get Loan on Your Gold
ಪರ್ಸನಲ್ ಲೋನ್ ಬದಲಿಗೆ ಚಿನ್ನದ ಮೇಲಿನ ಸಾಲವನ್ನು ಪಡೆದುಕೊಳ್ಳುವುದು ನಿಮಗೆ ಸಾಕಷ್ಟು ಉಳಿತಾಯವನ್ನು ಮಾಡಿಕೊಡುತ್ತದೆ. 3 ಲಕ್ಷ ರೂಪಾಯಿಗಳವರೆಗಿನ ಗೋಲ್ಡ್ ಲೋನ್ ಮೇಲೆ ಯಾವುದೇ ರೀತಿಯ processing fees ಕಟ್ಟಬೇಕಾದ ಅಗತ್ಯವಿಲ್ಲ. ನೀವು ನಿಮ್ಮ ಚಿನ್ನದ ಮೇಲಿನ ಮೌಲ್ಯದ ಆಧಾರದಲ್ಲಿ ಪಡೆದುಕೊಳ್ಳುವಂತಹ ಈ ಚಿನ್ನದ ಲೋನ್ ಪರ್ಸನಲ್ ಲೋನ್ ಗಿಂತ ಸಾಕಷ್ಟು ಸುರಕ್ಷಿತವಾಗಿರುತ್ತದೆ. ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗಮನಿಸುವುದಾದರೆ ಚಿನ್ನದ ಲೋನ್ ಮೇಲೆ ಬಡ್ಡಿದರವನ್ನು 8.70%ಕ್ಕೆ ನಿಗದಿಪಡಿಸಲಾಗಿದೆ.
FD Loan- Get Loan on Your Fixed Deposits
ಒಂದು ವೇಳೆ ನೀವು ನಿಮ್ಮ ಭವಿಷ್ಯದ ಸುರಕ್ಷತೆಗಾಗಿ ಫಿಕ್ಸೆಡ್ ಡೆಪಾಸಿಟ್ ಅನ್ನು ಯಾವುದಾದರೂ ಬ್ಯಾಂಕ್ ನಲ್ಲಿ ಮಾಡಿದ್ರೆ ಆ ಸಂದರ್ಭದಲ್ಲಿ ನೀವು ಮಾಡಿರುವಂತಹ ಒಟ್ಟಾರೆ ಫಿಕ್ಸೆಡ್ ಡೆಪಾಸಿಟ್ ಹಣದ 90 ರಿಂದ 95 ಪ್ರತಿಶತ ಭಾಗದ ಮೇಲೆ ನೀವು ಫಿಕ್ಸೆಡ್ ಡೆಪಾಸಿಟ್ ಲೋನ್ ಪಡೆದುಕೊಳ್ಳಬಹುದು. ಇನ್ನು ಇದರ ಮೇಲೆ ವಿಧಿಸಲಾಗುವಂತಹ ಬಡ್ಡಿದರ ಕೇವಲ ನೀವು ಫಿಕ್ಸೆಡ್ ಡೆಪಾಸಿಟ್ ನಿಂದ ಪಡೆದುಕೊಳ್ಳುವಂತಹ ಬಡ್ಡಿದರಕ್ಕಿಂತ ಒಂದರಿಂದ ಎರಡು ಪ್ರತಿಶತ ಮಾತ್ರ ಹೆಚ್ಚಾಗಿರುತ್ತದೆ.
ಇವಿಷ್ಟು ವಿಧಗಳ ಮೂಲಕ ಪರ್ಸನಲ್ ಲೋನ್(Personal Loan) ಗಿಂತ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಕಡಿಮೆ ರಿಸ್ಕ್ ನಲ್ಲಿ ನೀವು ಸುಲಭ ರೂಪದಲ್ಲಿ ಹಣವನ್ನು ಸಾಲ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.
Comments are closed.