ದಕ್ಷಿಣ ಭಾರತದಲ್ಲಿ ಆರಂಭವಾದ ಮೊದಲ ಕತ್ತೆ ಫಾರ್ಮ್. ಇಲ್ಲಿ ಒಂದು ಲೀಟರ್ ಹಾಲಿನ ಬೆಲೆ ಎಷ್ಟು ಗೊತ್ತೇ?? ಬೆಲೆ ಕೇಳಿದರೆ ಒಂದು ಕ್ಷಣ ದಂಗಾಗ್ತೀರಾ.

ನಮಸ್ಕಾರ ಸ್ನೇಹಿತರೇ ಹಾಲನ್ನು ಆಹಾರಗಳ ಪೈಕಿ ಯಲ್ಲಿ ಪರಿಪೂರ್ಣ ಪೋಷಕಾಂಶ ಎಂಬುದಾಗಿ ಹೇಳಲಾಗುತ್ತದೆ. ಹಾಲಿನಲ್ಲಿ ದೇಹಕ್ಕೆ ಬೇಕಾಗುವಂತಹ ಎಲ್ಲಾ ಅಂಶಗಳು ಕೂಡ ಅಡಕವಾಗಿರುತ್ತದೆ ಎಂಬುದಾಗಿ ಸಾಬೀತಾಗಿದೆ. ಇದಕ್ಕಾಗಿ ಸ್ವಾಸ್ಥ್ಯ ಆರೋಗ್ಯಕ್ಕಾಗಿ ಪ್ರತಿದಿನ ಹಾಲಿನ ಸೇವನೆಯನ್ನು ಮಾಡಬೇಕು ಎಂಬುದಾಗಿ ಎಲ್ಲರೂ ಹೇಳುತ್ತಾರೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆಕಳ ಹಾಲನ್ನು ಎಲ್ಲರೂ ಸೇವಿಸುತ್ತಾರೆ. ಆದರೆ ನಾವು ಹಿಂದಿನ ವಿಚಾರದಲ್ಲಿ ಮಾತನಾಡಲು ಹೊರಟಿರುವುದು ಬೇರೆ ಪ್ರಾಣಿಯ ಹಾಲಿನ ವಿಚಾರದ ಕುರಿತಂತೆ.

ಹೌದು ಗೆಳೆಯರೇ ಓದುವುದನ್ನು ಬಿಟ್ಟ ಯುವಕನೊಬ್ಬ ಈಗ ಕತ್ತೆಯನ್ನು ಸಾಕುವ ಮೂಲಕ ಆದಾಯವನ್ನು ದೊಡ್ಡಮಟ್ಟದಲ್ಲಿ ಗಳಿಸುತ್ತಿದ್ದಾನೆ. ಇದು ನಡೆಯುತ್ತಿರುವುದು ತಮಿಳುನಾಡಿನ ತಿರುನೆಲ್ವೇಲಿಯಲ್ಲಿ. ಹೌದು ಗೆಳೆಯರೇ ಬಾಬು ಎನ್ನುವಾತ ಮೊದಲಿಗೆ ಒಂದೆರಡು ಕತ್ತೆಗಳನ್ನು ಮೇಯಿಸಿಕೊಂಡು ಇದ್ದ. ಇದಾದ ನಂತರ ಈಗ ಕಥೆಗಳ ಫಾರ್ಮ್ ಅನ್ನೇ ಹೊಂದಿದ್ದು ಈತನ ಬಳಿ ಈಗಾಗಲೇ ಎರಡು ಸಾವಿರಕ್ಕೂ ಅಧಿಕ ಕತ್ತೆಗಳಿವೆ.

ಕೇವಲ ಭಾರಹೊರುವುದಕ್ಕೆ ಮಾತ್ರವಲ್ಲದೆ ಕತ್ತೆಗಳಿಂದ ಹಾಲನ್ನು ಪಡೆದು ಅದನ್ನು ಮಾರಾಟ ಮಾಡುವುದರಿಂದ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆದಾಯವನ್ನು ಸಂಪಾದಿಸಬಹುದು ಎನ್ನುವುದನ್ನು ಬಾಬುರವರು ಸಾಬೀತುಪಡಿಸಿದ್ದಾರೆ. ಇದು ದಕ್ಷಿಣ ಭಾರತದಲ್ಲಿರುವ ಮೊದಲ ಕತ್ತೆ ಫಾರ್ಮ್ ಎಂಬುದಾಗಿ ತಿಳಿದುಬಂದಿದೆ. ಇನ್ನು ಈ ಕತ್ತೆಯ ಹಾಲನ್ನು ಸೌಂದರ್ಯವರ್ಧಕ ಕಾಸ್ಮೆಟಿಕ್ಸ್ ಗಳಲ್ಲಿ ಬಳಸಲಾಗುತ್ತದೆ ಹೀಗಾಗಿಯೇ ಈ ಹಾಲಿಗೆ ಬೆಲೆ ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಹೌದು ಗೆಳೆಯರೇ ಕತ್ತೆಯ ಹಾಲನ್ನು ಲೀಟರಿಗೆ ಏಳು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ ಎಂಬುದಾಗಿ ಬಾಬುರವರು ಹೇಳಿದ್ದಾರೆ. ಇಲ್ಲಿ ಪ್ರತಿ ಕತ್ತೆಯಿಂದ ದಿನಕ್ಕೆ 350ml ನಂತೆ ತಿಂಗಳಿಗೆ 2000 ಕತ್ತೆಗಳಿಂದ ಸಾವಿರಾರು ಲೀಟರ್ ಹಾಲನ್ನು ಉತ್ಪಾದನೆ ಮಾಡಲಾಗುತ್ತದೆ. ಖಂಡಿತವಾಗಿ ಇದೊಂದು ಅತ್ಯಂತ ಲಾಭದಾಯಕ ಹೈನುಗಾರಿಕೆ ಎಂದರೆ ತಪ್ಪಾಗಲಾರದು.