ಬಿಗ್ ನ್ಯೂಸ್: ಪಾಕ್ ನ ರಿಜ್ವಾನ್ ಸ್ಥಾನವನ್ನು ಕಿತ್ತುಕೊಂಡು ಐಸಿಸಿ ರಾಂಕಿಂಗ್ ನಲ್ಲಿ ನಂಬರ್ 1 ದೊರೆಯಾದ ಸೂರ್ಯ. ಎಷ್ಟು ಅಂಕದೊಂದಿಗೆ ಗೊತ್ತೇ??

ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವರ್ಲ್ಡ್ ಕಪ್ ನಲ್ಲಿ ನಮ್ಮ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ನಮ್ಮ ತಂಡದ ಆಟಗಾರರಾಈ ವಿರಾಟ್ ಕೋಹ್ಲಿ ಅವರು ಮತ್ತು ಸೂರ್ಯಕುಮಾರ್ ಯಾದವ್ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಹೆಚ್ಚುಗೆ ಹೇಳುವುದೇ ಬೇಡ, ಸಿಗುವ ಪ್ರತಿ ಅವಕಾಶದ ಸದುಪಯೋಗ ಮಾಡಿಕೊಂಡು ರನ್ಸ್ ಗಳ ಮಳೆ ಹರಿಸುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ ನಲಿ ಉತ್ತಮ ಪ್ರದರ್ಶನ ನೀಡಿ ಎರಡು ಕ್ಯಾಚ್ ಹಿಡಿದರು.

ಕಳೆದ ವರ್ಷ ಮಾರ್ಚ್ ನಲ್ಲಿ ನ್ಯಾಷನಲ್ ಟೀಮ್ ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ಆಗಿನಿಂದಲು ಅತ್ಯುತ್ತಮವಾದ ಸ್ಥಿರ ಪ್ರದರ್ಶನವನ್ನೇ ನೀಡುತ್ತಾ ಬಂದಿದ್ದಾರೆ. ಈ ವಿಶ್ವಕಪ್ ನಲ್ಲಿ ಎರಡು ಅರ್ಧಶತಕ ಸಿಡಿಸಿದ್ದಾರೆ ಸೂರ್ಯ. ಅತ್ಯದ್ಭುತ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿ, ದಾಖಲೆಗಳನ್ನು ಮುರಿಯುತ್ತಿದ್ದಾರೆ. ಇದೀಗ ಟಾಪ್ ಕ್ರಿಕೆಟಿಗರ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದ್ದು, ಇದರಲ್ಲಿ ಸೂರ್ಯಕುಮಾರ್ ಯಾದವ್ ಅವರು ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಹಿಂದಿನ ಲಿಸ್ಟ್ ನಲ್ಲಿ 3ನೇ ಸ್ಥಾನದಲ್ಲಿದ್ದ ಸೂರ್ಯಕುಮಾರ್ ಯಾದವ್ ಈಗ ಮೊದಲ ಸ್ಥಾನಕ್ಕೆ ಬಂದಿದ್ದಾರೆ. ಬರೋಬ್ಬರಿ 863 ಸ್ಥಾನ ಗಳಿಸಿ, ಅಗ್ರಸ್ಥಾನದಲ್ಲಿದ್ದ ಪಾಕಿಸ್ತಾನ್ ಓಪನರ್ ಮೊಹಮ್ಮದ್ ರಿಜ್ವಾನ್ ಅವರನ್ನು ಬೀಟ್ ಮಾಡಿ ಮೊದಲ ಸ್ಥಾನಕ್ಕೆ ಬಂದಿದ್ದಾರೆ ಸೂರ್ಯಕುಮಾರ್ ಯಾದವ್..

surya rizwan

ಈ ಲಿಸ್ಟ್ ನಲ್ಲಿರುವ ಭಾರತ ತಂಡದ ಮತ್ತೊಬ್ಬ ಆಟಗಾರ ವಿರಾಟ್ ಕೋಹ್ಲಿ ಅವರು. ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕೋಹ್ಲಿ ಅವರು, ನಾಲ್ಕು ಪಂದ್ಯಗಳಲ್ಲಿ 3 ಅರ್ಧಶತಕ ಸಿಡಿಸಿದರು. ಅತ್ಯುತ್ತಮ ಫಾರ್ಮ್ ಗೆ ಮರಳಿರುವ ಕೋಹ್ಲಿ ಅವರು 638 ಅಂಕ ಪಡೆದು, 10ನೇ ಸ್ತಾನದಲ್ಲಿದ್ದಾರೆ. ಪಾಕಿಸ್ತಾನ್ ಆಟಗಾರ ಮೋಹಮ್ಮದ್ ರಿಜ್ವಾನ್ 842 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ, 792 ಅಂಕ ಪಡೆದ ಡಿವೋನ್ ಕಾನ್ವೆ 3ನೇ ಸ್ತಾನದಲ್ಲಿದ್ದಾರೆ. ಪಾಕಿಸ್ತಾನ್ ತಂಡದ ಕ್ಯಾಪ್ಟನ್ ಬಾಬರ್ ಅಜಂ 780 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ, ಎಡನ್ ಮಾರ್ಕ್ರಮ್ 767 ಅಂಕ ಪಡೆದು ಐದನೇ ಸ್ಥಾನದಲ್ಲಿದ್ದಾರೆ. ಒಟ್ಟಿನಲ್ಲಿ ಸೂರ್ಯಕುಮಾರ್ ಯಾದವ್ ಅವರು ಮೊದಲ ಸ್ಥಾನಕ್ಕೆ ಬಂದಿರುವುದು ಭಾರತ ತಂಡದ ಅಭಿಮಾನಿಗಳಿಗೆ ಸಂತೋಷ ತಂದಿದೆ.

Comments are closed.