ಬಿಡುಗಡೆಯಾಯಿತು TRP ಲಿಸ್ಟ್: ಈ ವಾರ ಟಾಪ್ ಸ್ಥಾನ ಪಡೆದುಕೊಂಡ ಧಾರಾವಾಹಿಗಳು ಯಾವ್ಯಾವು ಗೊತ್ತೇ?? ನಿಮ್ಮ ನೆಚ್ಚಿನದು ಯಾವುದು??

ಕನ್ನಡದ ಎಲ್ಲಾ ವಾಹಿನಿಗಳಲ್ಲೂ ಹಲವು ಧಾರಾವಾಹಿಗಳು ಪ್ರಸಾರವಾಗುತ್ತದೆ. ಧಾರಾವಾಹಿಗಳ ಸಕ್ಸಸ್ ಗೊತ್ತಾಗುವುದು ಪ್ರತಿ ಗುರುವಾರ ಬರುವ ಟಿ.ಆರ್.ಪಿ ರೇಟಿಂಗ್ ಇಂದ. ಜೀಕನ್ನಡ ವಾಹಿನಿ ಪ್ರತಿವಾರವು ಟಿಆರ್ಪಿ ರೇಟಿಂಗ್ ನಲ್ಲಿ ಟಾಪ್ ನಲ್ಲಿರುತ್ತದೆ. ಬಳಿಕ ಕಲರ್ಸ್ ಕನ್ನಡ, ಉದಯ ಟಿವಿ, ಸುವರ್ಣ ವಾಹಿನಿ ಎಲ್ಲವೂ ಇದೆ. ಪ್ರತಿವಾರ ಈ ಟಿಆರ್ಪಿ ರೇಟಿಂಗ್ ನಲ್ಲಿ ಸ್ಥಾನ ಬದಲಾವಣೆ ಆಗುತ್ತಿರುತ್ತದೆ. ಹಾಗಿದ್ದರೆ, ಈ ವಾರ ಟಾಪ್ ನಲ್ಲಿರುವ ಧಾರವಾಹಿ ಯಾವುದು ಎಂದು ನೋಡೋಣ ಬನ್ನಿ..

ಪ್ರತಿವಾರ ಟಾಪ್ ನಲ್ಲಿರುತ್ತಾ 9.7 ಟಿಆರ್ಪಿ ಪಡೆದು ಮೊದಲ ಸ್ಥಾನದಲ್ಲಿ ಇರುತ್ತಿದ್ದ ಪುಟ್ಟಕ್ಕನ ಮಕ್ಕಳು ಧಾರವಾಹಿ, ಕೆಲ ಸಮಯದಿಂದ 9 ಟಿಆರ್ಪಿ ಪಡೆದು ಕುಸಿದಿತ್ತು, ಆದರೆ ಈ ವಾರ ಮತ್ತೆ 9.7 ಟಿಆರ್ಪಿ ಪಡೆದು, ತನ್ನ ಸ್ಥಾನಕ್ಕೆ ಮರಳಿಬಂದಿದೆ.
2ನೇ ಸ್ಥಾನ ಪಡೆಯುತ್ತಿದ್ದ ಗಟ್ಟಿಮೇಳ ಧಾರವಾಹಿ ಕಳೆದ ವಾರ 3ನೇ ಸ್ಥಾನಕ್ಕೆ ಇಳಿದಿತ್ತು, ಆದರೆ ಈ ವಾರ 8.7 ಟಿಆರ್ಪಿ ಪಡೆದು ಮತ್ತೆ 2ನೇ ಸ್ಥಾನಕ್ಕೆ ಬಂದಿದೆ. ಅಮ್ಮನನ್ನು ಪತ್ತೆ ಹಚ್ಚುತ್ತಿರುವ ಈ ಎಪಿಸೋಡ್ ಗಳು ಜನರಿಗೆ ಇಷ್ಟವಾಗುತ್ತಿದೆ. 3ನೇ ಸ್ಥಾನದಲ್ಲಿರುವ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ಎಜೆಯ ಹೊಸ ಲವ್ವರ್ ಬಾಯ್ ಲುಕ್ ಜನರಿಗೆ ಬಹಳ ಇಷ್ಟವಾಗಿದೆ.

trp

ಜೀಕನ್ನಡ ಮಾತ್ರವಲ್ಲದೆ, ಸ್ಟಾರ್ ಸುವರ್ಣ ವಾಹಿನಿಯ ಧಾರವಾಹಿಗಳು ಕೂಡ ಜನರಿಗೆ ಇಷ್ಟವಾಗುತ್ತಿದೆ, ಭಕ್ತಿಪ್ರಧಾನ ವಾದ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಧಾರವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಜೇನುಗೂಡು ಮತ್ತು ಬೆಟ್ಟದ ಹೂ ಧಾರವಾಹಿ ಜನರಿಗೆ ಇಷ್ಟವಾಗಿದೆ. ಉದಯ ಟಿವಿಯ ರಾಧಿಕಾ ಧಾರವಾಹಿ ಕೂಡ ಜನರ ಮನಸ್ಸು ಗೆದ್ದಿದೆ, ಇದೊಂದು ಮಹಿಳಾ ಪ್ರಧಾನ ಧಾರವಾಹಿ ಆಗಿದ್ದು, ತಂಗಿಯ ಮದುವೆ ಮಾಡಲು ರಾಧಿಕಾ ಪರದಾಡುತ್ತಿದ್ದಾಳೆ. ಇನ್ನು ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿಗಳು ಎಂದಿನ ಹಾಗೆ ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ.

Comments are closed.