ದಿಢೀರ್ ಎಂದು ಮಗನನ್ನು ಶಾಲೆ ಬಿಡಿಸಲು ಮುಂದಾದ ಡಿ ಬಾಸ್ ದರ್ಶನ್, ಯಾಕೆ ಗೊತ್ತೇ?? ಶಾಕ್ ನಲ್ಲಿ ಅಭಿಮಾನಿಗಳು.

ಕ್ರಾಂತಿ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸಿರುವ 55ನೇ ಸಿನಿಮಾ, ಈ ಸಿನಿಮಾದಲ್ಲಿ ಅಕ್ಷರಕ್ರಾಂತಿಯ ಕಾನ್ಸೆಪ್ಟ್ ಆಯ್ಕೆ ಮಾಡಿಕೊಂಡಿದ್ದಾರೆ ನಟ ದರ್ಶನ್. ಇದರಲ್ಲಿ ಕನ್ನಡ ಶಾಲೆಗಳ ಅಳಿವು ಉಳಿವು, ಎಜುಕೇಶನ್ ಸಿಸ್ಟಮ್, ವಿದ್ಯಾಭ್ಯಾಸದಲ್ಲಿ ಖಾಸಗೀಕರಣ ಇವುಗಳ ಬಗ್ಗೆ ಸಂದೇಶ ನೀಡಲಾಗಿದೆ ಎಂದು ಗೊತ್ತಾಗಿದೆ. ಕ್ರಾಂತಿ ಸಿನಿಮಾ ಮುಂದಿನವರ್ಷ ಜನವರಿ 23ಕ್ಕೆ ತೆರೆಕಾಣಲಿದೆ ಎಂದು ನಿನ್ನೆಯ ಪ್ರೆಸ್ ಮೀಟ್ ಮೂಲಕ ತಿಳಿದುಬಂದಿದೆ. ಕ್ರಾಂತಿ ವಿಶೇಷವಾಗಿ ಕನ್ನಡದ ಬಗ್ಗೆ ಇರುವ ಸಿನಿಮಾ ಆಗಿರುವುದರಿಂದ, ಒಂದೊಂದು ಅಪ್ಡೇಟ್, ಒಂದೊಂದು ಘೋಷಣೆಯನ್ನು ಬಹಳ ವಿಶೇಷವಾಗಿ ಮಾಡಲಾಗುತ್ತಿದೆ.

ಈಗಾಗಲೇ ನಮಗೆ ಗೊತ್ತಾಗಿರುವ ಹಾಗೆ, ನಟ ದರ್ಶನ್ ಅವರ ಕ್ರಾಂತಿ ಸಿನಿಮಾದಲ್ಲಿ ರಚಿತಾ ರಾಮ್ ಅವರು ನಾಯಕಿ, ಮುಖ್ಯಪಾತ್ರದಲ್ಲಿ ಸುಮಲತಾ ಅಂಬರೀಶ್ ಅವರು ಮತ್ತು ರವಿಚಂದ್ರನ್ ಅವರು ಹಾಗೂ ಇನ್ನಿತರರು ನಟಿಸಿದ್ದಾರೆ. ಕ್ರಾಂತಿ ಸಿನಿಮಾ ಹೊಸ ಅಪ್ಡೇಟ್ ಬಗ್ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ ನಡೆದಿರುವ ಪ್ರೆಸ್ ಮೀಟ್ ಮೂಲಕ, ಹಲವು ವಿಚಾರಗಳು ತಿಳಿದುಬಂದಿವೆ, ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಕುಟುಂಬದ ಜೊತೆಗೆ ಸಮಯ ಕಳೆಯುವ ದರ್ಶನ್ ಅವರು, ಸಿನಿಮಾ ಕುರಿತ ಕಾರ್ಯಕ್ರಮಗಳಲ್ಲಿ ಕುಟುಂಬದ ಬಗ್ಗೆ ಮಾತನಾಡುವುದಿಲ್ಲ. ಆದರೆ ಕ್ರಾಂತಿ ಸಿನಿಮಾ ಪ್ರೆಸ್ ಮೀಟ್ ನಲ್ಲಿ ತಮ್ಮ ಮಗನ ಸ್ಕೂಲ್ ಫೀಸ್ ಬಗ್ಗೆ ಮಾತನಾಡಿದರು.

darshan son school

ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಅವರು ಅಕ್ಷರಕ್ರಾಂತಿ ಬಗ್ಗೆ ತಿಳಿಸುತ್ತಿರುವುದರಿಂದ, ನಮ್ಮ ಕಾಲದಲ್ಲಿ 40 , 50 ರೂಪಾಯಿಯಲ್ಲಿ ಸ್ಕೊಲ್ ಫೀಸ್ ಮುಗಿದು ಹೋಗುತ್ತಿತ್ತು ಎಂದಿರುವ ದರ್ಶನ್ ಅವರು, ತಮ್ಮ ಮಗನಿಗೆ ವರ್ಷಕ್ಕೆ 9 ಲಕ್ಷ ಸ್ಕೂಲ್ ಫೀಸ್ ಕಟ್ಟುವುದಾಗಿ ತಿಳಿಸಿದ್ದಾರೆ. ವಿದ್ಯಾಭ್ಯಾಸ ಈಗ ಬ್ಯುಸಿನೆಸ್ ರೀತಿ ಆಗಿದೆ ಎನ್ನುವುದನ್ನು ತಿಳಿಸಿರುವ ದರ್ಶನ್ ಅವರು, ತಮ್ಮ ಮಗನನ್ನು ಶಾಲೆಯಿಂದ ಬಿಡಿಸುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿಡಿಬಂದಿದೆ. ಅಷ್ಟಕ್ಕೂ ದರ್ಶನ್ ಅವರು ಈ ರೀತಿ ನಿರ್ಧಾರ ಮಾಡಿದ್ದು ಯಾಕೆ ಎನ್ನುವ ವಿಷಯಕ್ಕೆ ಮಾತ್ರ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ.

Comments are closed.