Business: ಏನನ್ನು ಒತ್ತೆ ಇಡದೆ, ಬಿಸಿನೆಸ್ ಮಾಡಬೇಕು ಎಂದು ಕೊಂಡಿದ್ದಾರೆ, ಇಲ್ಲಿದೆ ನಿಮಗೆ ಸುವರ್ಣಾವಕಾಶ. ಏನು ಮಾಡಬೇಕು ಗೊತ್ತೇ?

Business: ಇತ್ತೀಚಿನ ದಿಂಗಳಲ್ಲಿ ಹಲವರು ಬ್ಯುಸಿನೆಸ್ ಪ್ಲಾನ್ಸ್ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವರಿಗೆ ಹಣದ ಕೊರತೆ ಇನ್ನು ಕೆಲವರಿಗೆ, ಯಾವ ಬ್ಯುಸಿನೆಸ್ ಮಾಡಿ ಲಾಭ ಪಡೆಯಬೇಕು ಎಂದು ಗೊತ್ತಿರುವುದಿಲ್ಲ. ಅಂಥವರಿಗೆ ಇಂದು ನಾವು ಕೆಲವು ಒಳ್ಳೆಯ ಬ್ಯುಸಿನೆಸ್ ಐಡಿಯಾ ತಿಳಿಸಿಕೊಡುತ್ತೇವೆ. ಈ ಬ್ಯುಸಿನೆಸ್ ಪ್ಲಾನ್ಸ್ ಗಳನ್ನು ಶುರು ಮಾಡುವ ಮೂಲಕ ನೀವು ಒಳ್ಳೆಯ ಲಾಭ ಕೂಡ ಪಡೆಯಬಹುದು. ಈ ಬ್ಯುಸಿನೆಸ್ ಗಳು ಯಾವುವು ಎಂದು ತಿಳಿಸಿಕೊಡುತ್ತೇವೆ ನೋಡಿ..

ಬೇಬಿ ಸಿಟಿಂಗ್ ಮತ್ತು ಅಡುಗೆ ಸೇವೆ :- ಈಗ ಕೆಲಸ ಮಾಡುವ ಮಹಿಳೆಯರೇ ಹೆಚ್ಚು, ಪುಟ್ಟ ಮಕ್ಕಳು ಇರುವವರಿಗೆ ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರುವುದಿಲ್ಲ, ಹೀಗಿದ್ದಾಗ, ಮಕ್ಕಳನ್ನು ನೋಡಿಕೊಳ್ಳಲು ಬೇಬಿ ಸಿಟಿಂಗ್, ಹಾಗೆಯೇ ಕೆಲಸಕ್ಕೆ ಹೋಗುವುದರಿಂದ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದವರಿಗೆ ಅಡುಗೆ ಮಾಡಿ ಕೊಡಬಹುದು. ಇದು ಈಗ ಒಳ್ಳೆಯ ಬ್ಯುಸಿನೆಸ್ ಆಗಿದೆ.
ಚಾಕೊಲೇಟ್ ಮೇಕಿಂಗ್ :- ಚಾಕೊಲೇಟ್ ಅನ್ನು ಇಷ್ಟಪಡದೆ ಇರುವವರು ಕಡಿಮೆ, ಈಗ ವಿವಿಧ ರೀತಿಗಳಲ್ಲಿ ಚಾಕೊಲೇಟ್ ತಯಾರಿಸಿ, ಅದನ್ನು ಬ್ಯುಸಿನೆಸ್ ಆಗಿ ಮಾಡಬಹುದು.
ಟಿಫನ್ ಬ್ಯುಸಿನೆಸ್ :- ಅಡುಗೆ ಚೆನ್ನಾಗಿ ಬರುವವರು, ರುಚಿಕರವಾದ ಆಹಾರ ಪದಾರ್ಥಗಳನ್ನು ತಯಾರಿಸಿ, ಅವುಗಳನ್ನು ಬ್ಯುಸಿನೆಸ್ ರೀತಿಯಲ್ಲಿ, ಟಿಫನ್ ಸೇವೆ ಶುರು ಮಾಡಬಹುದು.ಇದನ್ನು ಓದಿ..Technology: ಹಳೆ ಮೊಬೈಲ್ ಬಿಸಾಕಿ, ಈಗಲೇ ಹೋಗಿ ಕ್ಸಿಯೋಮಿ ಕೊಡುತ್ತಿರುವ ಡಿಸ್ಕೌಂಟ್ ನಿಂದ ಹೊಸ ಮೊಬೈಲ್ ಖರೀದಿಸಿ. ಎಷ್ಟು ಬೆಲೆ ಗೊತ್ತೇ??

Businesses 1 Business:

ಇವೆಂಟ್ ಮ್ಯಾನೇಜ್ಮೆಂಟ್ :- ಈ ಬ್ಯುಸಿನೆಸ್ ಈಗ ಭಾರಿ ಬೇಡಿಕೆ ಇದೆ. ಹಲವು ಕಾರ್ಯಕ್ರಮಗಳನ್ನು ನಿರ್ವಹಿಸಿ, ಒಳ್ಳೆಯ ಹೆಸರು ಪಡೆದು, ಈ ಕ್ಷೇತ್ರದಲ್ಲಿ ಬೆಳೆಯಬಹುದು. ಕಾರ್ಯಕ್ರಮಗಳನ್ನು, ಕಂಪೆನಿಗಳ ಇವೆಂಟ್ ಗಳನ್ನು ನಡೆಸಬಹುದು.
ಐಟಿ ಕಂಪನಿಗೆ ಸೇವೆಗಳು :- ಇತ್ತೀಚಿನ ದಿನಗಳಲ್ಲಿ ಐಟಿ ಕ್ಷೇತ್ರ ದೊಡ್ಡದಾಗಿ ಬೆಳೆದು ಬಂದಿದೆ. ಐಟಿ ಕಂಪನಿಗಳಿಗೆ ಒಳ್ಳೆಯ ಸೇವೆ ನೀಡುವ ಬ್ಯುಸಿನೆಸ್ ಅನ್ನು ನೀವು ಶುರು ಮಾಡಬಹುದು.
ಪಾಲಿಸಿ ಸಲಹೆಗಾರರು :- ಇತ್ತೀಚಿನ ದಿನಗಳಲ್ಲಿ ಅನೇಕ ಜನರು ವಿಮೆಗಳನ್ನು ಮಾಡಿಸಲು ಸಲಹೆಯನ್ನು ಪಡೆಯುತ್ತಾರೆ. ನೀವು ಇದಕ್ಕೆ ಸಲಹೆಗಾರರಾಗಿ ಅಥವಾ ಸೈಡ್ ಬ್ಯುಸಿನೆಸ್ ರೀತಿಯಲ್ಲಿ ಶುರು ಮಾಡಬಹುದು.
Consultancy :- ಇದರಲ್ಲಿ ನೀವು ವೈಯಕ್ತಿಕವಾಗಿ ಹಣಕಾಸು, ಬ್ರ್ಯಾಂಡಿಂಗ್, ನಿರ್ವಹಣೆ, ಮಾರ್ಕೆಟಿಂಗ್ ಅಥವಾ ಆಡ್ ಕ್ಷೇತ್ರದಲ್ಲಿ ಅನುಭವ ಹೊಂದಿದ್ದರೆ, ವೃತ್ತಿಪರರಾಗಿದ್ದರೆ consultancy business ಶುರು ಮಾಡಬಹುದು.

ಕಂಟೆಂಟ್ ರೈಟರ್ :- ನೀವು ಬರವಣಿಗೆಯಲ್ಲಿ ಉತ್ತಮವಾಗಿದ್ದರೆ, ಇದನ್ನು ಕರಗತ ಮಾಡಿಕೊಂಡು, ಕಂಟೆಂಟ್ ರೈಟರ್ ಆಗಿ ಕೆಲಸ ಮಾಡಬಹುದು.
ಸೆಕ್ಯುರಿಟಿ ಏಜೆನ್ಸಿ ಅಥವಾ ಡಿಟೆಕ್ಟಿವ್ ಏಜೆನ್ಸಿ :- ಭದ್ರತೆ, ಸುರಕ್ಷತೆ ಈ ಎರಡು ಈಗ ಎಲ್ಲರಿಗು ಬಹಳ ಮುಖ್ಯವಾದ ವಿಷಯ. ಇದನ್ನು ಒದಗಿಸುವವರಿಗೆ ಜನರು ಹಣ ನೀಡುವುದಕ್ಕೆ ಸಿದ್ಧವಾಗಿದ್ದಾರೆ. ಹಾಗಾಗಿ ಸೆಕ್ಯೂರಿಟಿ ಏಜೆನ್ಸಿ ಮತ್ತು ಡಿಟೆಕ್ಟಿವ್ ಏಜೆನ್ಸಿ ಶುರುಮಾಡುವುದು ಒಳ್ಳೆಯ ಬ್ಯುಸಿನೆಸ್ ಐಡಿಯಾ ಆಗಿದೆ.
ಡ್ಯಾನ್ಸ್, ಮ್ಯೂಸಿಕ್ ಡ್ರಾಯಿಂಗ್ ಸ್ಕೂಲ್ :- ನೀವು ಡ್ಯಾನ್ಸ್ ಡ್ರಾಯಿಂಗ್ ಮತ್ತು ಸಂಗೀತದಲ್ಲಿ ಉತ್ತಮವಾಗಿದ್ದರೆ, ನಿಮ್ಮದೇ ಆದ ಸ್ವಂತ ಡ್ಯಾನ್ಸ್, ಮ್ಯೂಸಿಕ್ ಕ್ಲಾಸ್ ಶುರು ಮಾಡಬಹುದು.
ಕೆರಿಯರ್ ಕೌನ್ಸೆಲಿಂಗ್ :- ಈಗ ಲಕ್ಷಾಂತರ ಯೂತ್ಸ್ ಗಳು ಮತ್ತು
ಅವರ ತಂದೆ ತಾಯಿ ವಿವಿಧ ವೃತ್ತಿ ಆಯ್ಕೆಗಳ ಬಗ್ಗೆ ಯೋಚಿಸುತ್ತಿದ್ದಾರೆ. ನಿಮಗೆ ತಿಳಿದಿರುವ ವಿವಿಧ ವೃತ್ತಿ ಆಯ್ಕೆಗಳ ಬಗ್ಗೆ ನೀವು ರೀಸರ್ಚ್ ಮಾಡಿ, ಅವರಿಗಾಗಿ ಕೆರಿಯರ್ ಕೌನ್ಸಿಲಿಂಗ್ ಗೈಡೆನ್ಸ್ ಶುರು ಮಾಡಬಹುದು. ಇದನ್ನು ಓದಿ.. Recharge Plan Kannada: ನೀವು ಬದುಕಿರುವ ವರೆಗೂ ವ್ಯಾಲಿಡಿಟಿ ಕೊಡಲು ಮುಂದಾದ ಟೆಲೆಕಾಂ ಸಿಮ್; ಅದು ಕೇವಲ 225 ರೂ ಗೆ. ಏನು ಲಾಭ ಗೊತ್ತೇ ಈ ಪ್ಯಾಕ್ ನಿಂದ??

Comments are closed.