Business Idea: ನೀವು ಹತ್ತನೇ ತರಗತಿ ವರೆಗೂ ಓದಿದ್ದರೂ ಸಾಕು, ನಿಮ್ಮ ಹಳ್ಳಿಯಲ್ಲಿಯೇ ಈ ಉದ್ಯಮ ಆರಂಭಿಸಿ, ಪೇಟೆಯವರಿಗಿಂತ ಹೆಚ್ಚು ದುಡಿಯಿರಿ.

Business Idea: ಬ್ಯುಸಿನೆಸ್ ಮಾಡುವುದಕ್ಕೆ ಹಳ್ಳಿಗಳಲ್ಲಿ ಹೆಚ್ಚು ಆಯ್ಕೆ ಇಲ್ಲ ಎಂದು ಹಲವರು ಸಿಟಿಗೆ ಬರುತ್ತಾರೆ, ಆದರೆ ಇದು ಪೂರ್ತಿಯಾಗಿ ನಿಜವಲ್ಲ. ಹಳ್ಳಿಗಳಲ್ಲಿ ಆಯ್ಕೆಗಳು ಕಡಿಮೆ ಇರಬಹುದು. ಆದರೆ ಬ್ಯುಸಿನೆಸ್ ಒಳ್ಳೆಯ ಅವಕಾಶಗಳು ಹಳ್ಳಿಗಳಲ್ಲಿ ಕೂಡ ಇದೆ. ಇಂದು ನಾವು ನಿಮಗೆ ಹಳ್ಳಿಗಳಲ್ಲಿ ಮಾಡಬಹುದಾದ ಕೆಲವು ಬ್ಯುಸಿನೆಸ್ ಐಡಿಯಾಗಳನ್ನು ನೀಡಲಿದ್ದೇವೆ, ನೀವು ಹಳ್ಳಿಯಲ್ಲಿರುವ ವ್ಯಕ್ತಿಯಾದರೆ, ಈ ಬ್ಯುಸಿನೆಸ್ ಶುರು ಮಾಡಿ, ಉತ್ತಮವಾಗಿ ಹಣ ಗಳಿಸಬಹುದು.

ರಸಗೊಬ್ಬರ ಅಂಗಡಿ :- ಹಳ್ಳಿಗಳಲ್ಲಿ ಕೃಶಿ ಹೆಚ್ಚಾಗಿ ನಡೆಯುವುದರಿಂದ,ಈ ಬ್ಯುಸಿನೆಸ್ ಗೆ ಬಹಳ ಬೇಡಿಕೆ ಇದೆ. ನೀವು ರಸಗೊಬ್ಬರ ತಯಾರಿಕೆ ಅಥವಾ ಮಾರಾಟದ ಬ್ಯುಸಿನೆಸ್ ಶುರು ಮಾಡಬಹುದು. ಈ ಬ್ಯುಸಿನೆಸ್ ಗೆ ನೀವು ಪರವಾನಗಿ ತೆಗೆದುಕೊಳ್ಳಬೇಕು. ಇದಕ್ಕಾಗಿ ನೀವು 5 ರಿಂದ 10 ಲಕ್ಷ ರೂಪಾಯಿಯವರೆಗು ಗೊಬ್ಬರವನ್ನು ಸ್ಟಾಕ್ ಇಡಬೇಕಾಗುತ್ತದೆ. ಜ್ ಬ್ಯುಸಿನೆಸ್ ನಲ್ಲಿ ಉತ್ತಮ ಲಾಭ ಪಡೆಯಬಹುದು.
ಬೀಜಗಳ ವ್ಯಾಪಾರ :- ಕೃಷಿ ಮಾಡಲು ಮುಖ್ಯವಾಗಿ ಬೀಜಗಳು ಅಗತ್ಯವಿದೆ. ಹಾಗಾಗಿ ನೀವು ಈ ವ್ಯವಹಾರ ಶುರು ಮಾಡಬಹುದು. ಈ ಬ್ಯುಸಿನೆಸ್ ಗು ಕೂಡ ನೀವು ಪರವಾನಗಿ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ನೀವು 50 ಸಾವಿರ ಹೂಡಿಕೆ ಮಾಡಿದರೆ ಸಾಕು, ಒಳ್ಳೆಯ ಲಾಭ ಗಳಿಸಬಹುದು.
CSC ಕೇಂದ್ರ :- 10ನೇ ತರಗತಿ ಪಾಸ್ ಆಗಿ, 18 ವರ್ಷ ಆಗಿರುವ ಯಾರು ಬೇಕಾದರೂ ಸಿಎಸ್ಸಿ ಕೇಂದ್ರ ಶುರು ಮಾಡಬಹುದು, ಕೇಂದ್ರ ಸರ್ಕಾರ ಹೊರತರುವ ಎಲ್ಲಾ ನಿಯಮವನ್ನು ಜನರಿಗೆ ತಿಳಿಸುವುದು ಈ ಕೇಂದ್ರದ ಉದ್ದೇಶ, ಇದನ್ನು ಶುರುಮಾಡಲು ನೀವು ಪರವಾನಗಿ ಪಡೆಯಬೇಕು, ತಿಂಗಳಿಗೆ 3 ರಿಂದ 4 ಸಾವಿರ ರೂಪಾಯಿಯನ್ನು ಸುಲಭವಾಗಿ ಸಂಪಾದನೆ ಮಾಡಬಹುದು. ಇದನ್ನು ಓದಿ..Business Idea: ನೀವು ಕೂಡ ಅಮುಲ್ ಅಂಗಡಿ ತೆರೆದು, 5 ಲಕ್ಷ ಲಾಭ ಮಾಡಿಕೊಳ್ಳಬೇಕು ಎಂದು ಕೊಂಡರೆ, ಹೇಗೆ ಆರಂಭಿಸುವುದು ಗೊತ್ತೇ? ಕಡಿಮೆ ಬಂಡವಾಳ

business idea in village Business Idea:

Soil Test Centre: ಇದು ಕೃಷಿ ನಡೆಯುವ ಹಳ್ಳಿಯಲ್ಲಿ ಬಹಳ ಮುಖ್ಯವಾಗಿ ಇರಬೇಕು. ಈ ಸೆಂಟರ್ ನಲ್ಲಿ 11ಜನ ಕೆಲಸ ಮಾಡಬೇಕು. ಎಲ್ಲಾ ರೈತರು ತಾವು ಕೃಷಿ ಮಾಡುವ ಸ್ಥಳದ ಮಣ್ಣು ತೆಗೆದುಕೊಂಡು ಬಂದು, ಟೆಸ್ಟ್ ಮಾಡಿಸಬೇಕು.
ನರ್ಸರಿ :- ಹಳ್ಳಿಗಳಲ್ಲಿ ನರ್ಸರಿ ಕೂಡ ಒಂದು ಒಳ್ಳೆಯ ಬ್ಯುಸಿನೆಸ್ ಆಗಿದೆ. ಇಲ್ಲಿ ನೀವು ಗಿಡಗಳನ್ನು ಬೆಳೆಸಿ, ಅವುಗಳನ್ನು ಮಾರಾಟ ಮಾಡಬಹುದು. 10 ರಿಂದ 50 ಸಾವಿರ ಹೂಡಿಕೆಯಲ್ಲಿ ಈ ಬ್ಯುಸಿನೆಸ್ ಶುರು ಮಾಡಬಹುದು. ಈ ಬ್ಯುಸಿನೆಸ್ ಕೂಡ ಲಾಭದಾಯಕ ಬ್ಯುಸಿನೆಸ್ ಆಗಿದೆ.
ಢಾಬಾ :- ಅಡುಗೆಯಲ್ಲಿ ಆಸಕ್ತಿ ಇರುವವರು, ಢಾಬಾ ಶುರು ಮಾಡಬಹುದು. ನೀವೇ ತರಕಾರಿ ಬೆಳೆದರೆ ಅಡುಗೆಗೆ ಅದನ್ನೇ ಬಳಸಬಹುದು. ಈ ಬ್ಯುಸಿನೆಸ್ ಗಾಗಿ ನೀವು, ಪರವಾನಗಿ ಪಡೆಯಬೇಕು, ಮತ್ತು ಜಿಎಸ್ಟಿನ್ ಪಡೆಯಬೇಕು.
Poultry Farming: ಇದು ಹಳ್ಳಿಗೆ ಉತ್ತಮ ಬ್ಯುಸಿನೆಸ್ ಆಗಿದೆ. 50 ಸಾವಿರದಿಂದ 1 ಲಕ್ಷದವರೆಗೂ ಇದರಲ್ಲಿ ನೀವು ಹಣದ ಹೂಡಿಕೆ ಮಾಡಿ, ಕೋಳಿ ಸಾಕಣೆ ಶುರು ಮಾಡಬಹುದು. ಇವುಗಳನ್ನು ಸಿಟಿಯಲ್ಲಿ ಮಾರಾಟ ಮಾಡಿ, ಹೆಚ್ಚು ಲಾಭ ಗಳಿಸಬಹುದು. ಇದನ್ನು ಓದಿ.. Kannada News: ಕಾದು ಕಾದು ಸಾಕಾಯ್ತು; ಮದುವೆಯಾದರೂ ಮೊದಲನೇ ರಾತ್ರಿಗೆ ಒಪ್ಪದ ಗಂಡ. ಕೊನೆಗೆ ಸಾಕಾಗಿ ಹೆಂಡತಿ ಮುನ್ನುಗ್ಗಿದ್ದಾಗ ಬಯಲಾಯ್ತು ರಹಸ್ಯ

Comments are closed.