Kannada News: ಅನಿರುದ್ ರವರಿಗಾಗಿ ತೆಲುಗಿನಿಂದ ಬಂದ ಚೆಲುವೆ: ಹೊಸ ಧಾರಾವಾಹಿಗೆ ಹೀರೊಯಿನ್ ಯಾರು ಗೊತ್ತೇ??

Kannada News: ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರ ಅಳಿಯ, ನಟ ಅನಿರುದ್ಧ್ (Anirudh) ಅವರು ಜೊತೆ ಜೊತೆಯಲಿ (Jothe Jotheyali) ಧಾರವಾಹಿಯ ಆರ್ಯವರ್ಧನ್ ಪಾತ್ರದ ಮೂಲಕ ಕಿರುತೆರೆ ಲೋಕದ ಸ್ಟಾರ್ ಆಗಿದ್ದರು. ಆದರೆ ತಂಡದ ನಡುವೆ ನಡೆದ ಕೆಲವು ಮುನಿಸುಗಳ ಕಾರಣದಿಂದ ಅನಿರುದ್ಧ ಅವರು ಜೊತೆ ಜೊತೆಯಲಿ ತಂಡದಿಂದ ಹೊರಬಂದ ಅನಿರುದ್ಧ್ ಅವರು ಕೆಲ ಸಮಯದ ನಂತರ ಸೂರ್ಯವಂಶ (Suryavamsha) ಧಾರವಾಹಿಯಲ್ಲಿ ಕಾಣಿಸಿಕೊಳ್ಳುವುದಾಗಿ ಮಾಹಿತಿ ನೀಡಿದ್ದರು. ಸೂರ್ಯವಂಶ ಧಾರವಾಹಿ ಉದಯ ಟಿವಿಯಲ್ಲಿ (Udaya TV) ಪ್ರಸಾರವಾಗಲಿದೆ.

ಈ ಧಾರವಾಹಿಯನ್ನು ಚಂದನವನದ ಖ್ಯಾತ ನಿರ್ದೇಶಕ ಕಲಾಸಾಮ್ರಾಟ್ ಎಸ್.ನಾರಾಯಣ್ (S Narayan) ಅವರು ನಿರ್ದೇಶನ ಮಾಡಲಿದ್ದಾರೆ. ಅನಿರುದ್ಧ್ ಅವರು ಮತ್ತು ಎಸ್.ನಾರಾಯಣ್ ಅವರ ಕಾಂಬಿನೇಷನ್ ಎಂದಮೇಲೆ ಧಾರಾವಾಹಿಯ ಕಥೆ ಅದ್ಭುತವಾಗಿ ಇರುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಧಾರವಾಹಿಯಲ್ಲಿ ಅನಿರುದ್ಧ್ ಅವರಿಗೆ ನಾಯಕಿಯಾಗಿ ಯಾರು ನಟಿಸುತ್ತಾರೆ ಎನ್ನುವ ಪ್ರಶ್ನೆಯೊಂದು ಎಲ್ಲರಲ್ಲೂ ಇತ್ತು, ಅದಕ್ಕೀಗ ಉತ್ತರ ಸಿಕ್ಕಿದ್ದು, ತೆಲುಗು ಕಿರುತೆರೆಯಿಂದ ಅನಿರುದ್ಧ್ ಅವರ ಜೊತೆ ನಟಿಸಲು ಬಂದಿರುವ ನಾಯಕಿ ಮತ್ಯಾರು ಅಲ್ಲ, ಕನ್ನಡತಿಯೇ ಆಗಿರುವ ನಟಿ ಪಲ್ಲವಿ ಗೌಡ (Pallavi Gowda) ಅವರು. ಇದನ್ನು ಓದಿ..Kannada News: ಟಾಪ್ ನಟಿಯರನ್ನು ಮೀರಿಸುವ ಸೌಂದರ್ಯವಿದ್ದರೂ ವರಲಕ್ಷ್ಮಿ ರವರ ವಿಲ್ಲನ್ ಆಗಿದ್ದು ಯಾಕೆ ಗೊತ್ತೇ? ಅದಕ್ಕೆ ಒಪ್ಪದೇ ಈ ನಿರ್ಧಾರಕ್ಕೆ …

kannada news anirud news Kannada News:

ಪಲ್ಲವಿ ಅವರು ಕನ್ನಡದಲ್ಲಿ ಜೋಡಿ ಹಕ್ಕಿ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ, ಹಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆದರೆ ಹೆಚ್ಚಾಗಿ ಜನರಿಗೆ ಇವರ ಪರಿಚಯವಿಲ್ಲ, ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದಾರೆ ಪಲ್ಲವಿ ಗೌಡ. ತೆಲುಗಿನಲ್ಲಿ ಒಂದರ ನಂತರ ಒಂದು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಸೂರ್ಯವಂಶ ಧಾರವಾಹಿ ಮೂಲಕ ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ಇರುವುದರಿಂದ, ಅನಿರುದ್ಧ್ ಅವರು ಮತ್ತು ಪಲ್ಲವಿ ಗೌಡ ಅವರನ್ನು ಜೊತೆಯಾಗಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನು ಓದಿ.. Kannada News: ಜೂನಿಯರ್ ಎನ್ಟಿಆರ್ ಕಟ್ಟಿರುವ ವಾಚ್ ಬೆಲೆ ಕೇಳಿದರೆ, ಒಂದು ಕ್ಷಣ ಮೈ ಮರೆತು ನೀರು ಕುಡಿತೀರಾ. ಎಷ್ಟು ಕೋಟಿ ಗೊತ್ತೇ??

Comments are closed.