Kannada News: ನಿಜಕ್ಕೂ ಹರಿಪ್ರಿಯಾ ರವರು ವಸಿಷ್ಠ ರವರನ್ನು ಮದುವೆಯಾದ ಬಳಿಕ ಸಿನಿಮಾದಲ್ಲಿ ನಟನೆ ಮಾಡುತ್ತಾರೆ?? ಹೇಳಿದ್ದೇನು ಗೊತ್ತೇ??

Kannada News: ಚಂದನವನದಲ್ಲಿ ಈಗ ಮದುವೆಗಳು ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗೆ ನಟಿ ಅದಿತಿ ಪ್ರಭುದೇವ ಅವರ ಮದುವೆ ಅದ್ಧೂರಿಯಾಗಿ ನಡೆಯಿತು, ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರಲು ಸಜ್ಜಾಗಿದೆ. ಆ ಜೋಡಿ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ. ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಇದೀಗ ಮದುವೆಯಾಗಲು ತಯಾರಾಗಿದ್ದಾರೆ. ಇದೇ ತಿಂಗಳು 26ರಂದು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿಯ ಮದುವೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ..

ಜನವರಿ 28ರಂದು ಈ ಜೋಡಿಯ ಆರತಕ್ಷತೆ ಅದ್ಧೂರಿಯಾಗಿ ನಡೆಯುತ್ತದೆ ಎಂದು ಹೇಳಲಾಗುತ್ತುದೆ. ವಸಿಷ್ಠ ಸಿಂಹ ಅವರು ಮೈಸೂರಿನವರಾಗಿರುವ ಕಾರಣ, ಮದುವೆಯನ್ನು ಮೈಸೂರಿನಲ್ಲೇ ಮಾಡಲಾಗುತ್ತಿದೆ. 2016ರಲ್ಲಿ ಸಿನಿಮಾ ಒಂದರ ಪ್ರೀಮಿಯರ್ ಶೋನಲ್ಲಿ ಈ ಜೋಡಿಗೆ ಪರಿಚಯವಾಯಿತು. ಆ ಪರಿಚಯ ಸ್ನೇಹವಾಗಿ, ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಈ ಜೋಡಿ, ಇದೀಗ ಹಸೆಮಣೆ ಏರಲಿದ್ದಾರೆ. ಸಾಮಾನ್ಯವಾಗಿ ನಟಿಯರು ಮದುವೆ ಆದಮೇಲೆ ನಾಯಕಿಯರು ಸಿನಿಮಾ ಇಂದ ಬ್ರೇಕ್ ತೆಗೆದುಕೊಳ್ಳುತ್ತಾರೆ. ಇದೇ ಪ್ರಶ್ನೆಯನ್ನು ಹರಿಪ್ರಿಯಾ ಅವರಿಗು ಕೇಳಿದ್ದು, ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ ಹರಿಪ್ರಿಯಾ. ಇದನ್ನು ಓದಿ..Kannada News: ಟಾಪ್ ನಟಿಯರನ್ನು ಮೀರಿಸುವ ಸೌಂದರ್ಯವಿದ್ದರೂ ವರಲಕ್ಷ್ಮಿ ರವರ ವಿಲ್ಲನ್ ಆಗಿದ್ದು ಯಾಕೆ ಗೊತ್ತೇ? ಅದಕ್ಕೆ ಒಪ್ಪದೇ ಈ ನಿರ್ಧಾರಕ್ಕೆ …

vasista haripriya marriage kannada new Kannada News:

“ಮದುವೆ ಆಗ್ತಿರೋದು ಲೈಫ್ ನ ಮತ್ತೊಂದು ಫೇಸ್. ಈಗ ನಾನು ಹೆಂಡತಿಯ ಸ್ಥಾನಕ್ಕೆ ಹೋಗಲಿದ್ದೇನೆ. ಈ ಎಲ್ಲಾ ವಿಚಾರಗಳನ್ನು ಅರ್ಥ ಮಾಡಿಕೊಂಡು, ಹೊಸ ಲೈಫ್ ಅನ್ನು ಎಂಜಾಯ್ ಮಾಡೋದಕ್ಕೆ ನನಗೆ ಸ್ವಲ್ಪ ಸಮಯ ಬೇಕು. 16 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ, ಇಷ್ಟು ವರ್ಷಗಳು ಮನೆ ಚಿತ್ರೀಕರಣ ಅಂತಾನೆ ಮುಗಿದು ಹೋಯ್ತು. ಹೆಂಡತಿಯ ಸ್ಥಾನಕ್ಕೆ ಹೋಗುತ್ತಿರುವ ನನಗೆ ಈಗ ಸ್ವಲ್ಪ ಬ್ರೇಕ್ ಬೇಕು. ನಂತರ ಚೆನ್ನಾಗಿರೋ ಕಥೆ ಬಂದರೆ ಖಂಡಿತ ಸಿನಿಮಾದಲ್ಲಿ ನಟಿಸುತ್ತೇನೆ..” ಎಂದಿದ್ದಾರೆ ಹರಿಪ್ರಿಯಾ. ಇನ್ನು ವೈಶಿಷ್ಟ ಸಿಂಹ ಅವರು ಇದರ ಬಗ್ಗೆ ಮಾತನಾಡಿ, ಅವರು ನಟಿಸಬಾರದು ಅಂತ ನಾನು ಹೇಳಲ್ಲ, ಒಬ್ಬ ನಟನಾಗಿ ಅವರು ನಟನೆ ಮಾಡಿದ್ರೇನೇ ನನಗೆ ಸಂತೋಷ.. ಎಂದು ಹೇಳಿದ್ದಾರೆ. ಇದನ್ನು ಓದಿ.. Kannada News: ಜೂನಿಯರ್ ಎನ್ಟಿಆರ್ ಕಟ್ಟಿರುವ ವಾಚ್ ಬೆಲೆ ಕೇಳಿದರೆ, ಒಂದು ಕ್ಷಣ ಮೈ ಮರೆತು ನೀರು ಕುಡಿತೀರಾ. ಎಷ್ಟು ಕೋಟಿ ಗೊತ್ತೇ??

Comments are closed.