Kannada News: ಅದೆಲ್ಲಾ ಆಗಲ್ಲ, ನಿಮ್ಮ ಅಭಿಮಾನಿಗಳು ನನಗೆ ಎಕ್ಕಡ ತಗೊಂಡ್ ಹೊಡೀತಾರೆ ಎಂದು ನೇರವಾಗಿ ವಿಷ್ಣು ಸರ್ ಗೆ ಹೇಳಿಬಿಟ್ಟಿದ್ದ ಜಗದೀಶ್. ಅಂದು ಏನಾಗಿತ್ತು ಗೊತ್ತೇ??

Kannada News: ಚಂದನವನದ ಖ್ಯಾತ ನಟರಲ್ಲಿ ಒಬ್ಬರು ವಿಷ್ಣುವರ್ಧನ್. ಇವರನ್ನು ಸಾಹಸಸಿಂಹ ವಿಷ್ಣುವರ್ಧನ್ ಎಂದು ಕರೆಯುತ್ತಾರೆ. ವಿಷ್ಣುವರ್ಧನ್ ಅವರಿಗೆ ನಿಮ್ಮ ಚಿತ್ರರಂಗದಲ್ಲಿ ಅವರಿಗೆ ಒಳ್ಳೆಯ ಹೆಸರು ಮತ್ತು ಡಾ.ರಾಜ್ ಕುಮಾರ್ ಅವರ ಹಾಗೆ ದೊಡ್ಡ ಅಭಿಮಾನಿ ಬಳಗ ಇದೆ. ವಿಷ್ಣುವರ್ಧನ್ ಅವರು 40 ವರ್ಷಕ್ಕಿಂತ ಹೆಚ್ಚಿನ ಸಮಯ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ವಿಷ್ಣುವರ್ಧನ್ ಅವರ ಬಗ್ಗೆ ಎಲ್ಲರಿಗೂ ಅಭಿಮಾನಿ ಬಳಗ ಇದೆ, ಚಿತ್ರರಂಗದಲ್ಲಿ ಎಲ್ಲರೂ ಕೂಡ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ.

kannada news bandana news Kannada News:

ನಮಗೆಲ್ಲ ಗೊತ್ತಿರುವ ಹಾಗೆ ವಿಷ್ಣುವರ್ಧನ್ ಅವರ ಕೆರಿಯರ್ ನಲ್ಲಿ ಬೆಸ್ಟ್ ಸಿನಿಮಾಗಳಲ್ಲಿ ಒಂದು ಬಂಧನ. ಈ ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿದ್ದರು. ಬಂಧನ ಸಿನಿಮಾವನ್ನು ಈಗಲೂ ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಜನರಿಗೆ ಈಗಲೂ ಕೂಡ ಬಂಧನ ಸಿನಿಮಾ ತುಂಬಾ ಇಷ್ಟ. ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು, ಸುಹಾಸಿನಿ ಅವರು ಮತ್ತು ಜೈ ಜಗದೀಶ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಇದನ್ನು ಓದಿ..Kannada News: ಮುಂಬೈ ನಲ್ಲಿ ಬಾರಿ ಮುಜುಗರ ಅನುಭವಿಸಿದ ರಶ್ಮಿಕಾ: ಪಬ್ಲಿಕ್ ನಲ್ಲಿ ಎಚ್ಚರ ತಪ್ಪಿದರೆ ಹೀಗೆ ಆಗೋದು ಎಂದ ನೆಟ್ಟಿಗರು. ಪಡ್ಡೆ ಹುಡುಗರಿಗಂತೂ ಹಬ್ಬ.

ಬಂಧನ ಸಿನಿಮಾದಲ್ಲಿ ಜೈ ಜಗದೀಶ್ ಅವರು ಈ ಸಿನಿಮಾದಲ್ಲಿ ವಿಲ್ಲನ್ ಪಾತ್ರದಲ್ಲಿ ನಟಿಸಿದ್ದರು ಎನ್ನುವುದು ಗೊತ್ತಿರುವ ವಿಚಾರ, ಈ ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಡೆದ ಒಂದು ಘಟನೆ ಬಗ್ಗೆ ನಟ ಜೈ ಜಗದೀಶ್ ಅವರು ಕಾರ್ಯಕ್ರಮ ಒಂದರಲ್ಲಿ ಬಂಧನ ಸಿನಿಮಾ ಸಮಯದಲ್ಲಿ ನಡೆದ ಘಟನೆ ಒಂದನ್ನು ನೆನಪಿಸಿಕೊಂಡಿದ್ದಾರೆ. ಅದು ಯಾವ ಘಟನೆ ಎಂದರೆ, ಬಂಧನ ಸಿನಿಮಾದ ಒಂದು ದೃಶ್ಯದಲ್ಲಿ ಸುಹಾಸಿನಿ ಅವರು ರಾಧಾಕೃಷ್ಣ ಬೊಂಬೆಯನ್ನು ಹಿಡಿದು ಇದನ್ನು ಯಾರು ಕೊಟ್ಟಿದ್ದು ಗೊತ್ತಾ ಎಂದು ಕೇಳುತ್ತಾರೆ.

ಆಗ ಜೈ ಜಗದೀಶ್ ಅವರು ಯಾವ ಬೋ* ಮಗ ಕೊಟ್ರೆ ನನಗೇನು ಎಂದು ಡೈಲಾಗ್ ಹೇಳಬೇಕಿತ್ತು, ಆದರೆ ಆ ಡೈಲಾಗ್ ಅನ್ನು ನಾನು ಹೇಳುವುದಿಲ್ಲ ಅದೊಂದನ್ನು ಚೇಂಜ್ ಮಾಡಿ ಎಂದು ಜೈ ಜಗದೀಶ್ ಅವರು ಶೂಟಿಂಗ್ ಕೂಡ ಮಾಡದೆ ಇದ್ದರಂತೆ, ನಿರ್ದೇಶಕರು ಇದು ಸಿನಿಮಾ ಅಷ್ಟೇ, ಡೈಲಾಗ್ ಹೇಳು ಎಂದರು ಕೂಡ ಜೈಜಗದೀಶ್ ಅವರು ಒಪ್ಪಿರಲಿಲ್ಲವಂತೆ, ಆಗ ವಿಷ್ಣುವರ್ಧನ್ ಅವರು ಕೂಡ ಅಲ್ಲಿಗೆ ಬಂದು, ಏನಾಗಿದೆ ಎಂದು ಕೇಳಿದಾಗ, ಈ ವಿಚಾರವನ್ನು ಹೇಳಿದರಂತೆ.. ಇದನ್ನು ಓದಿ..Kannada News: ನಿಜಕ್ಕೂ ಹರಿಪ್ರಿಯಾ ರವರು ವಸಿಷ್ಠ ರವರನ್ನು ಮದುವೆಯಾದ ಬಳಿಕ ಸಿನಿಮಾದಲ್ಲಿ ನಟನೆ ಮಾಡುತ್ತಾರೆ?? ಹೇಳಿದ್ದೇನು ಗೊತ್ತೇ??

ವಿಷ್ಣುವರ್ಧನ್ ಅವರು ಕೂಡ ಏನಾಗಲ್ಲ ಡೈಲಾಗ್ ಹೇಳೋ ಎಂದು ಹೇಳಿದಾಗ, ನಾನ್ ಹೇಳಲ್ಲಪ್ಪ, ನಿಮ್ಮ ಅಭಿಮಾನಿಗಳು ನನಗೆ ಎಕ್ಕಡ ತಗೊಂಡು ಹೊಡೀತಾರೆ ಎಂದು ಹೇಳಿದ್ದರಂತೆ. ಆಗ ವಿಷ್ಣುವರ್ಧನ್ ಅವರು ಅದೆಲ್ಲಾ ಏನು ಆಗಲ್ಲ, ನೀವು ಡೈಲಾಗ್ ಹೇಳಿ ಎಂದು ಹೇಳಿದರಂತೆ. ನಿರ್ದೇಶಕರು ಕೂಡ, ಈಗ ಡೈಲಾಗ್ ಹೇಳಿಬಿಡು, ಎಡಿಟಿಂಗ್ ನಲ್ಲಿ ಕಟ್ ಮಾಡಿಕೊಳ್ತೀನಿ ಎಂದು ಹೇಳಿದರಂತೆ. ಕೊನೆಗೆ ಬೇರೆ ದಾರಿ ಇಲ್ಲದೆ, ಜೈ ಜಗದೀಶ್ ಅವರು ಹೇಳಿದರಂತೆ. ಕೊನೆಗೆ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಯಿತು.

kannada news bandana news 1 Kannada News:

ಬಳಿಕ ಬೇರೊಂದು ಸಿನಿಮಾ ಚಿತ್ರೀಕರಣಕ್ಕಾಗಿ ಪಾಂಡವಪುರದ ಹತ್ತಿರ ಇರುವ ಹಳ್ಳಿಯೊಂದಕ್ಕೆ ಹೋದಾಗ, ಅಲ್ಲಿ ಒಬ್ಬ ಅಜ್ಜಿ ಜೈ ಜಗದೀಶ್ ಅವರನ್ನು ಅಲ್ಲೇ ನಿಂತ್ಕೊಳಯ್ಯ ಎಂದು ಹೇಳಿದ್ರಂತೆ, ಯಾಕಮ್ಮ ಅನ್ನು ಶೂಟಿಂಗ್ ಗಾಗಿ ಬಂದಿದ್ದೀನಿ ಎಂದು ಹೇಳಿದರು ಕೂಡ ಆ ಅಜ್ಜಿ ಜೈ ಜಗದೀಶ್ ಅವರನ್ನು ಅಲ್ಲೇ ನಿಲ್ಲಿಸಿ, ವಿಷ್ಣುವರ್ಧನ್ ಅವರಿಗೆ ಎಂಥ ಮಾತು ಹೇಳಿದ್ದೀಯಾ, ಸುಹಾಸಿನಿಗೆ ಏನು ಮಾಡಿದ್ದಿಯಾ ಎಂದು ಕೇಳಿದರಂತೆ, ಜೈಜಗದೀಶ್ ಅವರು ಎಷ್ಟೇ ಹೇಳಿದರು ಕೇಳದೆ ಇದ್ದಾಗ, ಬೇರೆಯವರು ಬಂದು ಸಮಾಧಾನ ಮಾಡಿದ್ದರಂತೆ. ಈ ಘಟನೆಯನ್ನು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಓದಿ.. Kannada News: ವಯಸ್ಸು ಮುಪ್ಪಾದ ಮೇಲೆ ಷಾಕಿಂಗ್ ಘಟನೆ ಬಗ್ಗೆ ವಿವರಣೆ ನೀಡಿದ ಹಿರಿಯ ನಟಿ: ಚಾನ್ಸ್ ಕೇಳಿದಕ್ಕೆ ಹೀರೋ ಏನು ಮಾಡಿದ್ದಾನೆ ಗೊತ್ತೇ??

Comments are closed.