Kannada News: ಸಮಂತಾ ಗಾಳಕ್ಕೆ ಸಿಕ್ಕಿಬಿದ್ದ ನಾಗ ಚೈತನ್ಯ: ಸಮ್ಮು ಅದೊಂದು ಕೆಲಸ ಮಾಡಿದರೆ ಚೈತನ್ಯ ಜೀವನ ಉಡೀಸ್. ಏನು ಗೊತ್ತೇ??

Kannada News: ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಇಬ್ಬರು ಕೂಡ ವಿಚ್ಛೇದನ ಪಡೆದ ನಂತರ, ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಾರೆ. ಇವರಿಬ್ಬರಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರವು ಟ್ರೆಂಡ್ ಆಗುತ್ತದೆ. ಇವರಿಬ್ಬರ ವಿಚಾರ ಅಂದ್ರೆ ಜನರಿಗೂ ಕುತೂಹಲ ಹೆಚ್ಚು. ಚೈತನ್ಯ ಮತ್ತು ಸಮಂತಾ ಇಬ್ಬರು ಕೂಡ ಗಾಢವಾಗಿ ಪ್ರೀತಿಸಿ ಮದುವೆಯಾದರು. ವರ್ಷಗಳ ಕಾಲ ಡೇಟಿಂಗ್ ಮಾಡಿ, ನಂತರ ಮನೆಯವರನ್ನು ಒಪ್ಪಿಸಿ, ಮದುವೆಯಾದರು. ಬಹಳ ಅನ್ಯೋನ್ಯವಾಗಿ, ಸಂತೋಷವಾಗಿದ್ದ ಜೋಡಿ, ಎಲ್ಲರ ಫೇವರೆಟ್ ಜೋಡಿಯಾಗಿತ್ತು.

ಆದರೆ ಮದುವೆಯಾಗಿ ನಾಲ್ಕು ವರ್ಷಗಳ ನಂತರ ಇದ್ದಕ್ಕಿದ್ದ ಹಾಗೆ ದಾಂಪತ್ಯ ಜೀವನವನ್ನು ಮುರಿದುಕೊಂಡರು. ವಿಚ್ಛೇದನ ಪಡೆದ ನಂತರ, ಇವರಿಬ್ಬರು ಕೂಡ ತಮ್ಮ ತಮ್ಮ ಕೆರಿಯರ್ ನಲ್ಲಿ ಬ್ಯುಸಿ ಆಗಿದ್ದರು. ವಿಚ್ಛೇದನ ಪಡೆದ ನಂತರ ಸಮಂತಾ ಅವರು ಸಕ್ಸಸ್ ಕಂಡರು ಕೂಡ, ಚೈತನ್ಯ ಅವರು ಹೆಚ್ಚಾಗಿ ಯಶಸ್ಸು ಗಳಿಸಲಿಲ್ಲ. ಚೈತನ್ಯ ಅವರು ತಂದೆ ನಾಗಾರ್ಜುನ ಅವರೊಡನೆ ನಟಿಸಿದ ಕಳೆದ ವರ್ಷ ತೆರೆಕೆಂಡ ಬಂಗಾರ್ರಾಜು ಸಿನಿಮಾ ಹಿಟ್ ಆಯಿತು. ಆದರೆ ಆ ಕ್ರೆಡಿಟ್ ಚೈತನ್ಯ ಅವರಿಗಿಂತ ಹೆಚ್ಚಾಗಿ, ನಾಗಾರ್ಜುನ ಅವರಿಗೆ ಸಿಕ್ಕಿತು. ಆ ಸಿನಿಮಾ ನಂತರ ಚೈತನ್ಯ ಅವರು ನಟಿಸಿದ ಮೊದಲ ಹಿಂದಿ ಸಿನಿಮಾ ಲಾಲ್ ಸಿಂಗ್ ಚಡ್ಡಾ ತೆರೆಕಂಡಿತು. ಆದರೆ ಈ ಸಿನಿಮಾ ಮತ್ತು ಥ್ಯಾಂಕ್ ಯು ಈ ಎರಡು ಸಿನಿಮಾಗಳು ಸಹ ಫ್ಲಾಪ್ ಲಿಸ್ಟ್ ಗೆ ಸೇರಿದವು. ಇದನ್ನು ಓದಿ..Kannada News: ವಯಸ್ಸು ಮುಪ್ಪಾದ ಮೇಲೆ ಷಾಕಿಂಗ್ ಘಟನೆ ಬಗ್ಗೆ ವಿವರಣೆ ನೀಡಿದ ಹಿರಿಯ ನಟಿ: ಚಾನ್ಸ್ ಕೇಳಿದಕ್ಕೆ ಹೀರೋ ಏನು ಮಾಡಿದ್ದಾನೆ ಗೊತ್ತೇ??

kannada news samantha naga chaitanya Kannada News:

ಆದರೆ ಸಮಂತಾ ಅವರು ನಟಿಸಿದ ಯಶೋದ ಸಿನಿಮಾ ಸೂಪರ್ ಹಿಟ್ ಆಯಿತು, ಆ ಸಿನಿಮಾದಲ್ಲಿ ದೊಡ್ಡ ಹೀರೋ ಇಲ್ಲದೆ, ಸಿಂಗಲ್ ಆಗಿ ಬಂದ ಸಮಂತಾ ಅವರು ದೊಡ್ಡ ಸಕ್ಸಸ್ ಪಡೆದರು. ಈಗ ಶಾಕುಂತಲಂ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ತೆರೆಗೆ ಬರುತ್ತಿದ್ದಾರೆ. ಇನ್ನು ಚೈತನ್ಯ ಅವರು ಕೂಡ ಕಸ್ಟಡಿ ಸಿನಿಮಾ ಮೂಲಕ ತೆರೆಮೇಲೆ ಬರಲಿದ್ದಾರೆ. ಈ ಸಿನಿಮಾಗಳಲ್ಲಿ ಯಾವ ಸಿನಿಮಾ ಹಿಟ್ ಆಗುತ್ತದೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ. ಒಂದು ವೇಳೆ ಚೈತನ್ಯ ಅವರ ಸಿನಿಮಾ ಫ್ಲಾಪ್ ಆದರೆ, ಅವರ ಕೆರಿಯರ್ ಗೆ ದೊಡ್ದ ಹೊಡೆದ ಬೀಳುವುದು ಗ್ಯಾರಂಟಿ. ಚೈತನ್ಯ ಅವರಿಗೆ ಹಿಟ್ ಸಿಗುವುದು ಬಹಳ ಅವಶ್ಯಕತೆ ಇದೆ. ಇನ್ನು ಹಿಟ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ಸಮಂತಾ ಅವರದ್ದೇ ಮೇಲುಗೈ ಆಗಿರಲಿದೆ. ಇದನ್ನು ಓದಿ.. Kannada News: ಅದೆಲ್ಲಾ ಆಗಲ್ಲ, ನಿಮ್ಮ ಅಭಿಮಾನಿಗಳು ನನಗೆ ಎಕ್ಕಡ ತಗೊಂಡ್ ಹೊಡೀತಾರೆ ಎಂದು ನೇರವಾಗಿ ವಿಷ್ಣು ಸರ್ ಗೆ ಹೇಳಿಬಿಟ್ಟಿದ್ದ ಜಗದೀಶ್. ಅಂದು ಏನಾಗಿತ್ತು ಗೊತ್ತೇ??

Comments are closed.