Kannada News: ಮೂರನೇ ಮದುವೆಯಾಗಿಲ್ಲ ಎಂದು ಕಡ್ಡಿ ಮುರಿದ ಸುಧಾ: ಆದರೆ ಸದಾ ಇವರ ಜೊತೆ ಇರುವ ವ್ಯಕ್ತಿ ಯಾರು ಅಂತೇ ಗೊತ್ತೇ? 64 ನೇ ವಯಸಿನಲ್ಲಿ ಜೊತೆಗೆ ಏನು ಮಾಡುತ್ತಿದ್ದಾರೆ ಗೊತ್ತೇ?

Kannada News: ನಟಿ ಜಯಸುಧಾ (Jayasudha) ಅವರು ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಸ್ಟಾರ್ ಹೀರೋಯಿನ್ ಆಗಿ ಹೆಸರು ಗಳಿಸಿದರು. ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ನಟಿಸಿದ್ದಾರೆ. ಸೀನಿಯರ್ ಎನ್.ಟಿ.ಆರ್ (NTR), ಸೂಪರ್ ಸ್ಟಾರ್ ಕೃಷ್ಣ (Super Star Krishna)ಅವರು, ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರು ಸೇರಿದ ಹಾಗೆ ಎಲ್ಲಾ ಭಾಷೆಯಲ್ಲೂ ನಟಿಸಿದ್ದಾರೆ. ಈಗ ತಾಯಿ ಪಾತ್ರಗಳಲ್ಲಿ, ಅಜ್ಜಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ತಮಿಳಿನ ಖ್ಯಾತ ನಟ ವಿಜಯ್ (VIjay) ಅವರ ವಾರಿಸು (Varisu) ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ ನಟಿ ಜಯಸುಧಾ..

ಆದರೆ ನಟಿ ಜಯಸುಧಾ ಅವರ ಬಗ್ಗೆ ಇತ್ತೀಚೆಗೆ ಚಿತ್ರರಂಗದಲ್ಲಿ ಗಾಸಿಪ್ ಒಂದು ಕೇಳಿಬಂದಿದೆ. ಆ ಗಾಸಿಪ್ ಮೀಡಿಯಾ ವರೆಗು ಬಂದು ಭಾರಿ ವೈರಲ್ ಆಗಿದೆ. ಅದೇನೆಂದರೆ, ನಟಿ ಜಯಸುಧಾ ಅವರು ಮೊದಲಿಗೆ ಒಂದು ಮದುವೆಯಾಗಿ, ಮೊದಲ ಪತಿಯಿಂದ ವಿಚ್ಚೇದನ ಪಡೆದ ನಂತರ, ಬಾಲಿವುಡ್ ನಟ ಜಿತೇಂದ್ರ ಕಪೂರ್ ಅವರ ಸಂಬಂಧಿ ನಿತಿನ್ ಕಪೂರ್ ಅವರೊಡನೆ ಮದುವೆಯಾದರು. ಆದರೆ ನಿತಿನ್ ಕಪೂರ್ ಅವರು 2017ರಲ್ಲಿ ವೈಯಕ್ತಿಕ ಕಾರಣಗಳಿಂದ ಪ್ರಾಣ ಕಳೆದುಕೊಂಡರು. ಆಗಿನಿಂದ ಜಯಸುಧಾ ಅವರು ಒಂಟಿಯಾಗಿದ್ದಾರೆ. ಆದರೆ ಜಯಸುಧಾ ಅವರು ಇತ್ತೀಚೆಗೆ ಒಬ್ಬ ಅಮೆರಿಕಾ ವ್ಯಕ್ತಿಯ ಜೊತೆಗೆ ಕಾಣಿಸಿಕೊಂಡಿದ್ದು, ಅವರು ಆ ವ್ಯಕ್ತಿಯ ಜೊತೆಗೆ ಮದುವೆಯಾಗಿದ್ದಾರೆ ಎಂದು ಗಾಸಿಪ್ ಕೇಳಿ ಬರುತ್ತಿದೆ. ಇದನ್ನು ಓದಿ.. Kannada News: ತಂದೆಯನ್ನು ಬೇರೆ ಗಂಡಸರಿಗೆ ಹೋಲಿಕೆ ಮಾಡಿ, ಷಾಕಿಂಗ್ ಹೇಳಿಕೆ ನೀಡಿದ ಬಾಲಯ್ಯ ಪುತ್ರಿ. ಹೇಳಿದ್ದೇನು ಗೊತ್ತೇ? ಶಾಕ್ ಆದ ನೆಟ್ಟಿಗರು.

kannada news ayasudha gives clarity about third marriage kannada news Kannada News:

ಈ ವಿಚಾರಗಳು ಎಲ್ಲೆಡೆ ವೈರಲ್ ಆಗುತ್ತಿದ್ದ ಹಾಗೆಯೇ ಜಯಸುಧಾ ಅವರು ಮೂರನೇ ಮದುವೆ ಗಾಸಿಪ್ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. “ಆತ ನನ್ನ ಬಯೋಪಿಕ್ ತೆಗೆಯಲು ಬಂದಿರುವ ವ್ಯಕ್ತಿ. ಇದೊಂದು ಆಧ್ಯಾತ್ಮಕ ಬಯೋಪಿಕ್ ಆಗಿದೆ. ನಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವುದಕ್ಕಿಂತ ಮೊದಲು ಹೇಗಿದ್ದೆ, ಈಗ ಹೇಗಿದ್ದೀನಿ ಎನ್ನುವುದನ್ನು ತಿಳಿದುಕೊಂಡು, ಅದರ ಬಗ್ಗೆ ಅವರು ಸಂಶೋಧನೆ ಮಾಡಬೇಕು. ಅದಕ್ಕಾಗಿಯೇ ಅವರು ನನ್ನ ಜೊತೆ ಪ್ರಯಾಣ ಮಾಡುತ್ತಾ, ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಅದಕ್ಕಿಂತ ಹೆಚ್ಚಾಗಿ ಇನ್ನೇನು ಇಲ್ಲ..” ಎಂದು ಜಯಸುಧಾ ಅವರು ಈ ವಿಚಾರದ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. ಇದನ್ನು ಓದಿ..Kannada News: ಸ್ಟೇಜ್ ಮೇಲೆ ಎಲ್ಲವನ್ನು ಮರೆತು ಡಾನ್ಸ್ ಮಾಡಿ, ಮೈ ರೊಮ್ಮ ನಿಲ್ಲುವಂತೆ ಮಾಡಿದ ನಿರೂಪಕಿ: ವಿಡಿಯೋ ನೋಡಿದರೆ ತಡೆದುಕೊಳ್ಳಲು ಆಗಲ್ಲ.

Comments are closed.