Kannada News: ಅಂದು ರಶ್ಮಿಕಾ ಇಂದು ಪ್ರಶಾಂತ್ ನೀಲ್: ಕನ್ನಡಿಗರು ವಿಶಾಲ ಹೃದಯದವರು, ಅದಕ್ಕೆ ಎಲ್ಲರೂ ಮಕ್ಮಲ್ ಟಾಪ್ ಹಾಕ್ತಾರೆ. ಏನಾಗಿದೆ ಗೊತ್ತೇ?

Kannada News: ನಾವೆಲ್ಲರು ನೋಡಿರುವ ಹಾಗೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಮೊದಲಿಗೆ ಕನ್ನಡ ಚಿತ್ರರಂಗದ ಮೂಲಕ ಸಿನಿಜರ್ನಿ ಶುರುಮಾಡಿ, ಆರಂಭದಲ್ಲಿ ಹೆಸರು ಮಾಡಿ, ನಂತರ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ನ್ಯಾಷನಲ್ ಕ್ರಶ್ ಆಗಿ ಇಂದು ಬಾಲಿವುಡ್ ನಲ್ಲಿ ಕಮಾಲ್ ಮಾಡುತ್ತಿದ್ದಾರೆ, ಆದರೆ ಕನ್ನಡವನ್ನೇ ಮರೆತಿದ್ದಾರೆ. ಇದೀಗ ಅದೇ ಸಾಲಿಗೆ ಮತ್ತೊಬ್ಬ ಕನ್ನಡದ ಸೆಲೆಬ್ರಿಟಿ ಸೇರಿಕೊಳ್ಳುವ ಹಾಗೆ ಕಾಣುತ್ತಿದೆ. ಅವರು ಮತ್ಯಾರು ಅಲ್ಲ, ಕೆಜಿಎಫ್ (KGF) ಖ್ಯಾತಿಯ ಮಾಂತ್ರಿಕ ಪ್ರಶಾಂತ್ ನೀಲ್ (Prashanth Neel) ಅವರು. ಇವರು ಕೆಜಿಎಫ್ ಅಂತಹ ಎಷ್ಟು ದೊಡ್ಡ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ ಎಂದು ನಮಗೆಲ್ಲ ಗೊತ್ತಿದೆ.

ಕೆಜಿಎಫ್ ಇಂದ ಪ್ರಪಂಚದ ಹಲವು ಜನರು ಕನ್ನಡದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿಫಾ ಪ್ರಶಾಂತ್ ನೀಲ್ ಅವರು ಈಗ ಕನ್ನಡದಿಂದ ದೂರ ಉಳಿದ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಏನೆಂದರೆ, ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಸಂಸ್ಥೆ ತೆಲುಗು ನಟ ಪ್ರಭಾಸ್ (Prabhas) ಅವರೊಡನೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ, ಇದಾದ ಬಳಿಕ ಜ್ಯೂನಿಯರ್ ಎನ್ಟಿಆರ್ (Jr NTR) ಅವರ ಜೊತೆಗೆ ಒಂದು ಸಿನಿಮಾ ಮಾಡಲಿದ್ದಾರೆ, ಈ ಸಿನಿಮಾಗಳ ನಂತರ ಆದರು ಪ್ರಶಾಂತ್ ನೀಲ್ ಅವರು ಕನ್ನಡಕ್ಕೆ ಬರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಕೇಳಿಬಂದಿರುವ ಆ ಒಂದು ಸುದ್ದಿ, ಕನ್ನಡರಿಗರಿಗೆ ಕೋಪ ಬರಿಸಿದೆ. ಇದನ್ನು ಓದಿ.. Lakshana: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಶ್ವೇತಾ: ಕುತಂತ್ರ ಬಯಲಾದರೂ ಕೊನೆ ಕ್ಷಣದಲ್ಲಿ ಟ್ವಿಸ್ಟ್. ಶ್ವೇತಾ ತಡೆಯೋರು ಯಾರು ಇಲ್ಲವ??

kannada news rashmika prashanth neel Kannada News:

ತೆಲುಗು ನಿರ್ಮಾಪಕ ದಿಲ್ ರಾಜು (Dil Raju) ಅವರು, ತಮ್ಮ ಮುಂದಿನ ಸಿನಿಮಾ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರಲಿದೆ, ಇದು ಐತಿಹಾಸಿಕ ಕಥೆ ರವಣಂ ಎಂದು ಟೈಟಲ್ ಫಿಕ್ಸ್ ಆಗಿದೆ ಎಂದು ಹೇಳಿದ್ದಾರೆ. ಹೊಂಬಾಳೆ ಸಂಸ್ಥೆ ಕೆಜಿಎಫ್3 ಬರುತ್ತದೆ ಎಂದು ಹೇಳಿಕೆ ನೀಡಿತ್ತು, ಆದರೆ ಈಗ ಪ್ರಶಾಂತ್ ನೀಲ್ ಅವರು ತೆಲುಗು ಸಿನಿಮಾಗೆ ಕಮಿಟ್ ಆಗಿರುವುದರಿಂದ, ಇವರಿಗೆ ಬೆಳೆಯುವ ವರೆಗು ಕನ್ನಡ ಬೇಕಿತ್ತು, ಇನ್ನುಮುಂದೆ ಕನ್ನಡಕ್ಕೆ ಬರುವುದಿಲ್ಲ ಎನ್ನಿಸುತ್ತದೆ, ರಾಜಮೌಳಿ ಅವರನ್ನು ನೋಡಿ ಎಲ್ಲರೂ ಕಲಿಯಬೇಕು, ಅವರು ಮನಸ್ಸು ಮಾಡಿದ್ದರೆ, ಬಾಲಿವುಡ್ ಗೆ ಹೋಗಬಹುದಿತ್ತು, ಆದರೆ ಅವರು ತೆಲುಗು ಚಿತ್ರರಂಗವನ್ನು ಗ್ಲೋಬಲ್ ಲೆವೆಲ್ ಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಪ್ರಶಾಂತ್ ನೀಲ್ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಕನ್ನಡಿಗರು ಅಸಮಾಧಾನ ಗೊಂಡಿದ್ದಾರೆ. ಇದನ್ನು ಓದಿ..Kannada News: ಗೆಲುವು, ಸೋಲು ಏಳು ಬೀಳು ಕಂಡಿರುವ ಸಮಂತಾ ದಿಡೀರ್ ಎಂದು ಬದಲಾಗಲು ಕಾರಣ ಯಾರಂತೆ ಗೊತ್ತೇ? ಆ ಒಬ್ಬನೇ ಇದಕೆಲ್ಲ ಕಾರಣ.

Comments are closed.