Kannada News: ಅನುಶ್ರೀ ಇಷ್ಟು ದಿನ ಮದುವೆ ಆಗದೆ ಇರಲು ಈ ಒಬ್ಬ ವ್ಯಕ್ತಿ ಕಾರಣ ಅಂತೆ. ಕಣ್ಣೀರಿಟ್ಟ ಅನುಶ್ರೀ ಹೇಳಿದ್ದೇನು ಗೊತ್ತೇ??

Kannada News: ಅನುಶ್ರೀ ಇಂದು ಕರ್ನಾಟಕದ ನಂಬರ್ 1 ನಿರೂಪಕಿ ಎಂದರೆ ತಪ್ಪಲ್ಲ. ಜೀಕನ್ನಡ ವಾಹಿನಿಯ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾರೆ. ಇವರು ಮಾತನಾಡುವ ಶೈಲಿ ಎಲ್ಲರಿಗೂ ತುಂಬಾ ಇಷ್ಟ. ಕನ್ನಡ ಸಿನಿಮಾಗಳ ಇವೆಂಟ್ ಗಳು, ದೊಡ್ಡ ದೊಡ್ಡ ಇವೆಂಟ್ ಗಳನ್ನು ಅನುಶ್ರೀ ಅವರೇ ನಿರೂಪಣೆ ಮಾಡುತ್ತಾರೆ. ಆದರೆ ಅನುಶ್ರೀ ಅವರ ಬಗ್ಗೆ ಒಂದು ಪ್ರಶ್ನೆ ಎಲ್ಲರಿಗೂ ಇದೆ, ಅದೇನೆಂದರೆ, ಅನುಶ್ರೀ ಅವರು ಇನ್ನು ಯಾಕೆ ಮದುವೆಯಾಗಿಲ್ಲ ಎಂದು.. ಅದಕ್ಕೀಗ ಸ್ವತಃ ಅನುಶ್ರೀ ಅವರೇ ಉತ್ತರ ಕೊಟ್ಟಿದ್ದಾರೆ..

ಅನುಶ್ರೀ ಅವರು ಇತ್ತೀಚೆಗೆ ಚಿಕ್ಕಬಳ್ಳಾಪುರ ಇವೆಂಟ್ ನಲ್ಲಿ ಮಿಂಚಿದರು, ಅಲ್ಲಿ ಕೂಡ ಅನುಶ್ರೀ ಅವರಿಗೆ ಇನ್ನು ಯಾಕೆ ಮದುವೆಯಾಗಿಲ್ಲ ಎಂದು ಪ್ರಶ್ನೆ ಕೇಳಲಾಯಿತು. ಆಗ ಅನುಶ್ರೀ ಅವರು ಇಲ್ಲಿ ಚಿಕ್ಕಬಳ್ಳಾಪುರದಲ್ಲಿ ಒಳ್ಳೆಯ ಹುಡುಗ ಸಿಕ್ಕಿದ್ರೆ ಹುಡುಕೋಣ ಎಂದಿದ್ದಾರೆ, ಆಗ ಅಲ್ಲಿದ್ದ ಹುಡುಗರು ನಾವಿದ್ದೇವೆ ಎಂದು ಹೇಳಿದ್ದು, ಅನುಶ್ರೀ ಅವರಿಗೆ ಕೂದಲೇ ಇಲ್ಲದ ಒಬ್ಬರು ಪ್ರೊಪೋಸ್ ಮಾಡಿ, ನನಗೆ ಕೂದಲಿಲ್ಲ ನನ್ನನ್ನು ಮದುವೆ ಆಗ್ತೀರಾ ಎಂದು ಕೇಳಿದ್ದಾರೆ, ಆಗ ಅನುಶ್ರೀ ಕಾಂತಾರ ಸಿನಿಮಾದ ಕಾಡಲ್ಲಿ ಒಂದು ಸೊಪ್ಪು ಸಿಗ್ತದೆ ಡೈಲಾಗ್ ಹೇಳಿದ್ದು ಎಲ್ಲರೂ ನಕ್ಕಿದ್ದಾರೆ. ಇದನ್ನು ಓದಿ.. Kannada News: ಮೇಲ್ನೋಟಕ್ಕೆ ಎಲ್ಲರೂ ಒಂದೇ, ಆದರೆ ಬಾಲಯ್ಯ ರವರಿಗೆ NTR ಮೇಲೆ ಬಾರಿ ಕೋಪ. ಯಾಕೆ ಗೊತ್ತೇ? ಅದೊಂದು ವಿಚಾರಕ್ಕೆ NTR ಅನ್ನು ಕ್ಷಮಿಸೋದೇ ಇಲ್ಲ

kannada news anushree about marriage Kannada News:

ಇನ್ನು ಕೆಲವು ಹುಡುಗರು ಪ್ರೊಪೋಸ್ ಮಾಡಿದ್ದು, ಅನುಶ್ರೀ ಅವರು ತಮಾಷೆಯಾಗಿಯೇ ಸ್ವೀಕರಿಸಿ, ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ, ನೋಡಿದ ತಕ್ಷಣ ಹೇಗೆ ಮದುವೆ ಆಗೋದಕ್ಕೆ ಆಗುತ್ತೆ ಎಂದು ತಮಾಷೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ತಾವು ಇನ್ನು ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿ, ತಾಯಿ ಮತ್ತು ತಮ್ಮ ಇದ್ದಾರೆ, ನಾನು ಮದುವೆ ಆದರೆ ಅವರನ್ನ ನೋಡಿಕೊಳ್ಳೋದು ಯಾರು, ಮೊದಲು ಅವರ ಲೈಫ್ ಸೆಟ್ಲ್ ಆಗಬೇಕು ಎಂದು ಹೇಳಿದ್ದಾರೆ ಅನುಶ್ರೀ. ಆ ಜವಾಬ್ದಾರಿ ಇರುವುದರಿಂದ ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ. ಇದನ್ನು ಓದಿ..Kannada News: 10 ವರ್ಷದ ಬಳಿಕ ತಂದೆಯಾಗಿರುವ ಚರಣ್ ಗೆ ಗಂಡು ಮಗುನೇ ಆಗಬೇಕು ಎಂದ ಅಕ್ಕ: ಯಾಕೆ ಅಂತೇ ಗೊತ್ತೇ? ಕಾರಣ ತಿಳಿದರೆ ಶಾಕ್.

Comments are closed.