Kannada News: ದಿಡೀರ್ ಎಂದು ಉಲ್ಟಾ ಹೊಡೆದು ಕನ್ನಡಿಗರಿಗೆ ಶಾಕ್ ಕೊಟ್ಟ ರಶ್ಮಿಕಾ: ರಕ್ಷಿತ್, ರಿಷಬ್ ಬಗ್ಗೆ ಇದೀಗ ಹೇಳಿದ್ದೇನು ಗೊತ್ತೇ??

Kannada News: ನಟಿ ರಶ್ಮಿಕಾ ಮಂದಣ್ಣ ಕನ್ನಡದ ವಿಚಾರಕ್ಕೆ ಅತಿಹೆಚ್ಚಾಗಿ ಟ್ರೋಲ್ ಆಗುತ್ತಾರೆ. ಕನ್ನಡದಲ್ಲಿ ಕೆರಿಯರ್ ಶುರು ಮಾಡಿದ ರಶ್ಮಿಕಾ ಅವರು, ಬಳಿಕ ತೆಲುಗಿಗೆ ಎಂಟ್ರಿ ಕೊಟ್ಟು, ಅಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿ, ಇಂದು ಬಾಲಿವುಡ್ ನಲ್ಲಿ ಸಹ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಹಿಂದಿ ಸಂದರ್ಶನದಲ್ಲಿ ರಶ್ಮಿಕಾ ಅವರು ತಮಗೆ ಮೊದಲ ಅವಕಾಶ ಕೊಟ್ಟ ಪ್ರೊಡಕ್ಷನ್ ಕಂಪನಿಯ ಹೆಸರು ಹೇಳುವುದಕ್ಕೆ ಹಿಂದೇಟು ಹಾಕಿ, ಕನ್ನಡ ಸಿನಿಪ್ರಿಯರ ಕೋಪಕ್ಕೆ ಗುರಿಯಾಗಿದ್ದರು. ಅದು ವಿವಾದವೇ ಆಗಿತ್ತು. ಆದರೆ ಈಗ ರಶ್ಮಿಕಾ ಅವರು ಉಲ್ಟಾ ಹೊಡೆದಿದ್ದಾರೆ.

ರಶ್ಮಿಕಾ ಅವರು ಇತ್ತೀಚೆಗೆ ತೆಲುಗಿನ ಖ್ಯಾತ ಜರ್ನಲಿಸ್ಟ್ ಪ್ರೇಮ ಅವರ ಟಾಕ್ ಶೋನಲ್ಲಿ ಪಾಲ್ಗೊಂಡಿದ್ದಾರೆ, ಈ ಶೋನಲ್ಲಿ ಪ್ರೇಮ ಅವರು ಮೊದಲ ಎರಡು ಸಿನಿಮಾಗಳ ಬಗ್ಗೆ ಕೇಳಿದಾಗ, “ಹಾನೆಸ್ಟ್ ಆಗಿ ಹೇಳಬೇಕು ಎಂದರೆ, ಚಿತ್ರರಂಗಕ್ಕೆ ದಾರಿ ತೋರಿಸಿದ್ದೆ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರು. ನನಗೆ ಅವಕಾಶ ಕೊಟ್ಟಿದ್ದು ಅವರು ಆಗಿನಿಂದ ಈಗಿನವರೆಗೂ ಸಾಕಷ್ಟು ಜನರ ಜೊತೆಗೆ ಕೆಲಸ ಮಾಡಿದ್ದೇನೆ..” ಎಂದಿದ್ದಾರೆ ರಶ್ಮಿಕಾ. ಹಾಗೆಯೇ ಅಪ್ಪು ಸರ್ ಜೊತೆಗೆ ಕೆಲಸ ಮಾಡಿದ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.. ಇದನ್ನು ಓದಿ.. Kannada News: ಅಂದು ರಶ್ಮಿಕಾ ಇಂದು ಪ್ರಶಾಂತ್ ನೀಲ್: ಕನ್ನಡಿಗರು ವಿಶಾಲ ಹೃದಯದವರು, ಅದಕ್ಕೆ ಎಲ್ಲರೂ ಮಕ್ಮಲ್ ಟಾಪ್ ಹಾಕ್ತಾರೆ. ಏನಾಗಿದೆ ಗೊತ್ತೇ?

kannada news rashmika about rishab rakshit shetty Kannada News:

“ಪುನೀತ್ ಸರ್ ಜೊತೆಗೆ ಕೆಲಸ ಮಾಡಿದ ನಂತರ ಅವರ ಪ್ರಭಾವದಿಂದ ದೊಡ್ಡದಾಗಿ ಕೆಲಸ ಮಾಡುವುದನ್ನು ಕಲಿತೆ. ಪುನೀತ್ ಸರ್ ಅನ್ನು ಭೇಟಿ ಮಾಡಿದ್ದು, ದೇವರ ಆಶೀರ್ವಾದವೆ ಸರಿ. ಇಂದು ನಾನು 4 ಚಿತ್ರರಂಗದಲ್ಲಿ ಕೆಲಸ ಮಾಡ್ತಿದ್ದೀನಿ ಅಂದ್ರೆ ಅದು ನನಗೆ ಆಶ್ಚರ್ಯ ಎನಿಸುತ್ತದೆ, ಅದಕ್ಕಾಗಿ ನಾನು ಪುನೀತ್ ಸರ್ ಗೆ ಧನ್ಯವಾದ ಹೇಳುತ್ತೇನೆ..” ಎಂದು ಹೇಳಿದ್ದಾರೆ ರಶ್ಮಿಕಾ. ಕೆಲವೇ ದಿನಗಳ ಹಿಂದೆ ರಿಷಬ್ ಮತ್ತು ರಕ್ಷಿತ್ ಅವರ ಪ್ರೊಡಕ್ಷನ್ ಕಂಪನಿ ಹೆಸರು ಹೇಳುವುದಕ್ಕೂ ಹಿಂದೆ ಮುಂದೆ ನೋಡಿದ್ದ ರಶ್ಮಿಕಾ ಮಂದಣ್ಣ ಇಂದು ದಿಢೀರ್ ಎಂದು ಉಲ್ಟಾ ಹೊಡೆದಿರುವುದು ಆಶ್ಚರ್ಯಕರವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಅನುಶ್ರೀ ಇಷ್ಟು ದಿನ ಮದುವೆ ಆಗದೆ ಇರಲು ಈ ಒಬ್ಬ ವ್ಯಕ್ತಿ ಕಾರಣ ಅಂತೆ. ಕಣ್ಣೀರಿಟ್ಟ ಅನುಶ್ರೀ ಹೇಳಿದ್ದೇನು ಗೊತ್ತೇ??

Comments are closed.