Kannada News: ಸಮಂತಾ ಹಾಗೂ ನಾಗ ಚೈತನ್ಯ ವಿಚಾರಕ್ಕೆ ಎಂಟ್ರಿ ಕೊಟ್ಟ ನಾಗಾರ್ಜುನ ಎರಡನೇ ಹೆಂಡತಿ ಮಗ ನಿಖಿಲ್. ಶಾಕ್ ಆದ ನಾಗ ಚೈತನ್ಯ. ಏನಾಗಿದೆ ಗೊತ್ತೇ?

Kannada News: ನಟಿ ಸಮಂತಾ (Samantha) ಮತ್ತು ನಟ ನಾಗಚೈತನ್ಯ (Nagachaitanya) ಅವರ ಬಗ್ಗೆ ಹಲವು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಇವರಿಬ್ಬರ ಬಗ್ಗೆ ಜನರಿಗೆ ಎಷ್ಟು ಕ್ರೇಜ್ ಇದೆ ಎಂದರೆ, ಇವರಿಬ್ಬದ ವಿಚಾರದಲ್ಲಿ ಹೊರಬರುವ ಅದೇನೇ ಸುದ್ದಿ ಇರಲಿ, ಶೀಘ್ರವೇ ವೈರಲ್ ಆಗಿಬಿಡುತ್ತದೆ. ನಾಗಚೈತನ್ಯ ಅವರು ನಾಗಾರ್ಜುನ ಅವರ ಮಗನಾಗಿ ಚಿತ್ರರಂಗಕ್ಕೆ ಬಂದು, ಒಂದು ಮಟ್ಟಕ್ಕೆ ಹೆಸರು ಮಾಡಿ, ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗಲೂ ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇನ್ನು ಸಮಂತಾ ಅವರು, ಯಾವುದೇ ಸಿನಿಮಾ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬಂದವರು.

ಸೌತ್ ಇಂಡಿಯಾದ ಟಾಪ್ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ ನಟಿ ಸಮಂತಾ. ನಾಗಚೈತನ್ಯ ಮತ್ತು ಸಮಂತಾ ಇಬ್ಬರಿಗೂ ಯೇ ಮಾಯ ಚೇಸಾವೆ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರ ಪರಿಚಯವಾಗಿತ್ತು, ಇದು ಅವರಿಬ್ಬರು ಜೊತೆಯಾಗಿ ಮೊದಲ ಸಿನಿಮಾ ಕೂಡ ಹೌದು. ಈ ಸಿನಿಮಾ ಇಂದ ಶುರುವಾದ ಸ್ನೇಹ ಬಳಿಕ, ಪ್ರೀತಿಯಾಗಿ ಬದಲಾಯಿತು. ಕೆಲ ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ, ಹಿರಿಯರ ಆಶೀರ್ವಾದ ಪಡೆದು ಮದುವೆಯಾದರು. ಆದರೆ 10 ವರ್ಷಗಳು ಕೂಡ ದಾಂಪತ್ಯ ಜೀವನ ನಡೆಸದೆ ಬೇರೆಯಾದರು. ಈ ಜೋಡಿ ವಿಚ್ಛೇದನ ಪಡೆದು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇವರಿಬ್ಬರು ಮತ್ತೆ ಒಂದಾಗಲಿ ಎನ್ನುವುದೇ ಎಲ್ಲರ ಆಸೆ. ಇದನ್ನು ಓದಿ.. Kannada News: ಹೊಸ ಸಿನಿಮಾ ಕಾರ್ಯಕ್ರಮಕ್ಕೆ ಬಂದು ಬಗ್ಗಿ ಬಗ್ಗಿ ಅಂದ ತೋರಿಸುತ್ತಿರುವ ರಶ್ಮಿಕಾ: ಬಾಯ್ಬಿಟ್ಟು ನೋಡಿ, ಹೃದಯ ಕಿತ್ತು ಕೊಟ್ಟ ಹುಡುಗ್ರು: ವಿಡಿಯೋ ಹೇಗಿದೆ ಗೊತ್ತೇ?

kannada news akhil to resolve sam chai Kannada News:

ಈಗ ಇವರಿಬ್ಬರು ಒಂದು ಮಾಡುವ ಜವಾಬ್ದಾರಿಯನ್ನು ಅಖಿಲ್ ಅಕ್ಕಿನೇನಿ (Akhil Akkineni) ಅವರು ತೆಗೆದುಕೊಂಡ ಹಾಗೆ ತೋರುತ್ತಿದೆ. ಅಖಿಲ್ ಅವರಿಗೆ ಎಂಗೇಜ್ಮೆಂಟ್ ಆಗಿ ಕ್ಯಾನ್ಸಲ್ ಆಗಿರುವ ವಿಚಾರ ಗೊತ್ತೇ ಇದೆ. ನಾಗಾರ್ಜುನ (Nagarjuna) ಅವರು ಈಗ ಅಖಿಲ್ ಗೆ ಮದುವೆ ಮಾಡಬೇಕು ಎಂದುಕೊಂಡಿದ್ದು, ಸಂಬಂಧ ಹುಡುಕುವುದಕ್ಕೂ ಶುರು ಮಾಡಿದ್ದಾರಂತೆ. ಅಖಿಲ್ ಮದುವೆಗೆ ಸಮಂತಾ ಅವರು ಬರುವುದಂತು ಖಂಡಿತ ಎನ್ನುತ್ತಿದ್ದಾರೆ ಅಕ್ಕಿನೇನಿ ಕುಟುಂಬದ ಫ್ಯಾನ್ಸ್. ಸಮಂತಾ ಬಂದರೆ ನಾಗಚೈತ್ಯನ್ಯ ಸಮಂತಾ ಅವರ ಜೊತೆಗೆ ಮಾತನಾಡುತ್ತಾರೆ, ಇದರಿಂದ ಸರಿಹೋಗಬಹುದು, ಇವರಿಬ್ಬರು ಸರಿ ಹೋಗಲು ಅಖಿಲ್ ಕಾರಣವಾಗಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ಓದಿ.. Kannada News: ದಿಡೀರ್ ಎಂದು ಉಲ್ಟಾ ಹೊಡೆದು ಕನ್ನಡಿಗರಿಗೆ ಶಾಕ್ ಕೊಟ್ಟ ರಶ್ಮಿಕಾ: ರಕ್ಷಿತ್, ರಿಷಬ್ ಬಗ್ಗೆ ಇದೀಗ ಹೇಳಿದ್ದೇನು ಗೊತ್ತೇ??

Comments are closed.