Kannada News: ಓಡಿ ಓಡಿ ನೂರಾರು ಕೋಟಿ ಗಳಿಸಿದ ಉಸೈನ್ ಬೋಲ್ಟ್ ಯಾವ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತೆ?? ಬ್ಯಾಂಕ್ ಅಕೌಂಟ್ ನಲ್ಲಿ ಇರುವ ಚಿಲ್ಲರೆ ಎಷ್ಟು ಗೊತ್ತೇ??

Kannada News: ಪ್ರಪಂಚದ ಶ್ರೇಷ್ಠ ಓಟಗಾರ ಎಂದು ಹೆಸರು ಪಡೆದಿರುವವರು ಉಸೇನ್ ಬೋಲ್ಟ್ (Usain Bolt), ಇವರ ಹೆಸರಿನಲ್ಲಿ ಅದೆಷ್ಟೋ ದಾಖಲೆಗಳಿವೆ. ಇವರು ಓಡುವ ಮೂಲಕ ವಿಶ್ವದಾಖಲೆಗಳನ್ನು ಬರೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಉಸೇನ್ ಬೋಲ್ಟ್ ಅವರು ಇಂದು ಸಂಕಷ್ಟಕ್ಕೆ ಸಿಲುಕುಕೊಂಡಿದ್ದಾರೆ. ಉಸೇನ್ ಬೋಲ್ಟ್ ಅವರಿಗೆ ಹಣಕಾಸಿನ ವಿಚಾರದಲ್ಲಿ ಮೋಸ ನಡೆದಿದೆ, ಇದ್ದಕ್ಕಿದ್ದ ಹಾಗೆ ಅವರ ಖಾತೆಯಲ್ಲಿ ಕೋಟಿ ಕೋಟಿ ಹಣ ಕಾಣೆಯಾಗಿದೆ.

ಉಸೇನ್ ಬೋಲ್ಟ್ ಅವರ ಖಾತೆಯಿಂದ ಖಾಲಿ ಆಗಿರುವುದು ಒಂದಲ್ಲ ಎರಡಲ್ಲ ಬರೋಬ್ಬರಿ, 12.7 ಮಿಲಿಯನ್ ಡಾಲರ್ ಗಳು, ಭಾರತದ ರೂಪಾಯಿಯಲ್ಲಿ ಬರೋಬ್ಬರಿ 101 ಕೋಟಿ ರೂಪಾಯಿ. ಉಸೇನ್ ಬೋಲ್ಟ್ ಅವರು ತಮ್ಮ ಹಣವನ್ನು ಜಮೈಕಾ (Jamaica) ದಲ್ಲಿರುವ ಒಂದು ಹೂಡಿಕೆಯ ಕಂಪನಿಯಲ್ಲಿ ಇನ್ವೆಸ್ಟ್ ಮಾಡಿದ್ದರು. ಈಗ ಆ ಹಣ ಕಾಣೆಯಾಗಿದ್ದು, ಉಸೇನ್ ಬೋಲ್ಟ್ ಅವರ ಲಾಯರ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಬೋಲ್ಟ್ ಅವರು ಜಮೈಕಾ ಸ್ಟ್ಯಾಕ್ಸ್ ಅಂಡ್ ಸೆಕ್ಯೂರಿಟಿಸ್ ಲಿಮಿಟೆಡ್ ನಲ್ಲಿ ಇರುವ ಇವರ ಅಕೌಂಟ್ ನಲ್ಲಿ ಈಗ $12,000 ಡಾಲರ್ ಗಳು ಮಾತ್ರ. ಇದನ್ನು ಓದಿ..Kannada News: ಪಠಾಣ್ ಸಿನೆಮಾಗೆ ಶಾರುಖ್ ಖಾನ್ ಪಡೆದ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಸೋಲುತ್ತದೆ ಅಂತಾನೆ ಕಡಿಮೆ ತಗೊಂಡ್ರ?? ಎಷ್ಟು ಗೊತ್ತೇ??

kannada news usain bolt lost money Kannada News:

ಈಗಾಗಲೇ ಅಲ್ಲಿನ ಹಣಕಾಸು ಆಯೋಗ ಈ ವಿಚಾರ ಬಗ್ಗೆ ವಿಚಾರಣೆ ಶುರು ಮಾಡಿದೆ. 12 ದಿನಗಳ ಒಳಗಾಗಿ ತಮ್ಮ ಹಣ ತಮಗೆ ಸಿಗಬೇಕು ಇಲ್ಲದೆ ಹೋದರೆ ಕಾನೂನಿನ ಪ್ರಕಾರ ಹೋರಾಟ ಮಾಡಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ. ಉಸೇನ್ ಬೋಲ್ಟ್ ಅವರು ಒಲಂಪಿಕ್ಸ್ (Olympics) ನಲ್ಲಿ 3 ಸಾರಿ ಗೋಲ್ಡ್ ಮೆಡಲ್ ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. 2018ರ ವರದಿಯ ಪ್ರಕಾರ, ಪ್ರಪಂಚದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪೈಕಿ, ಉಸೇನ್ ಬೋಲ್ಟ್ ಅವರು 45ನೇ ಸ್ಥಾನದಲ್ಲಿದ್ದರು, ಇವರು 1 ಮಿಲಿಯನ್ ಡಾಲರ್ ಸಂಬಳ ಪಡೆಯುತ್ತಿದ್ದರು. ಇದನ್ನು ಓದಿ.. Kannada News: ಕನ್ನಡ ಚಿತ್ರರಂಗಕ್ಕೆ ಮತ್ತೆ ವಾಪಾಸ್ ಎಂಟ್ರಿ ಕೊಟ್ಟ ದೇವಲೋಕದ ಅಪ್ಸರೆ: ಈಕೆಯನ್ನು ನೋಡಲು ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್. ಯಾರು ಗೊತ್ತೇ??

Comments are closed.