Kannada News: ಬಿಗ್ ನ್ಯೂಸ್: ಸುದೀಪ್ ರವರಿಗೆ ತಿರುಗೇಟು ಕೊಟ್ಟ ರಶ್ಮಿಕಾ: ಒಳ್ಳೆಯದು ಮಾಡಲು ಹೋದ ಸುದೀಪ್ ಸರ್ ಗೆ ಇದೆಂತ ಅವಮಾನ??

Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮಾತುಗಳು ಪದೇ ಪದೇ ವೈರಲ್ ಆಗುತ್ತಿದೆ, ಅವರು ನೀಡುತ್ತಿರುವ ಹೇಳಿಕೆಗಳು ಆ ರೀತಿ ಇದೆ. ರಶ್ಮಿಕಾ ಅವರು ರಿಷಬ್ ಶೆಟ್ಟಿ (Rishab Shetty)ಮತ್ತು ರಕ್ಷಿರ್ ಶೆಟ್ಟಿ (Rakshit Shetty) ಅವರ ಹೆಸರನ್ನು ಹೇಳಲು ಹಿಂಜರಿದಿದ್ದಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ರಶ್ಮಿಕಾ ಅವರಿಗೆ ಮೊದಲು ಅವಕಾಶ ಕೊಟ್ಟವರ ಮೇಲೆ ಗೌರವ ಇಲ್ಲ, ಅವರನ್ನು ಬ್ಯಾನ್ ಮಾಡಬೇಕು ಎನ್ನುವ ಮಾತುಗಳು ಸಹ ಕೇಳಿಬಂದಿತ್ತು, ಇತ್ತೀಚೆಗೆ ಬಾಲಿವುಡ್ ಹಾಡುಗಳ ಬಗ್ಗೆ ಕೊಟ್ಟ ಹೇಳಿಕೆ ಕೂಡ ವೈರಲ್ ಆಗಿತ್ತು.

ಇದೆಲ್ಲವೂ ನಡೆಯುವಾಗ ಕಾರ್ಯಕ್ರಮ ಒಂದರಲ್ಲಿ ನಟ ಸುದೀಪ್ (Sudeep) ಅವರು ರಶ್ಮಿಕಾ ಅವರ ಕುರಿತು ಕೇಳಿದಾಗ, ಅವರು ಪ್ರತಿಕ್ರಿಯೆ ನೀಡಿದ್ದರು.. “Public Figure ಅಂದಾಗ ಜನರಿಂದ ಹಾರ, ಮೊಟ್ಟೆ, ಟೊಮ್ಯಾಟೋ ಎಲ್ಲವೂ ಬೀಳುತ್ತೆ. ಇದನ್ನೆಲ್ಲ ಎದುರಿಸುವುದನ್ನು ಕಲಿಯಬೇಕು, ಸ್ಟ್ರಾಂಗ್ ಆಗಿರಬೇಕು. ಹುಷಾರಾಗಿ ಇರಬೇಕು, ಯಾವ ವಿಷಯವನ್ನ ಹೇಗೆ ಮಾತನಾಡಬೇಕು ಅನ್ನೋದು ಗೊತ್ತಿರಬೇಕು. ಶುರುವಿನಲ್ಲಿ ಇದೆಲ್ಲಾ ಅಭ್ಯಾಸ ಮಾಡಿಕೊಂಡರೆ ನೀವು ಹೆಚ್ಚು ತೊಂದರೆಗೆ ಸಿಲುಕಿಕೊಳ್ಳುವುದಿಲ್ಲ. ಮೊಬೈಲ್, ಸೋಷಿಯಲ್ ಮೀಡಿಯಾ ಅಕೌಂಟ್, ಮಿಲಿಯನ್ ಗಟ್ಟಲೇ ಫಾಲೋವರ್ಸ್ ಇದೆಲ್ಲಾ ಬೇಕು.. ನೆಗಟಿವಿಟಿ ಬೇಡ ಅಂದ್ರೆ ಹೇಗೆ..?” ಎಂದು ಸುದೀಪ್ ಅವರು ಹೇಳಿದ್ದರು. ಇದನ್ನು ಓದಿ.. Kannada News: ಸಿನಿಮಾದಲ್ಲಿ ಗೆದ್ದು, ದೇಶವನ್ನೇ ಗೆಲ್ಲುವಷ್ಟು ಕ್ಯೂಟ್ ಆಗಿರುವ ಜೋಡಿ, ಕೃಷ್ಣ ಹಾಗೂ ಮಿಲನ ಜೋಡಿಯ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೆ?

kannada news rashmika about sudeep Kannada News:

ಈ ಮಾತುಗಳಿಗೆ ರಶ್ಮಿಕಾ ಅವರು ತೆಲುಗು ಸಂದರ್ಶನ ಒಂದರಲ್ಲಿ ಉತ್ತರ ಕೊಟ್ಟಿದ್ದಾರೆ.. “ಇತ್ತೀಚೆಗೆ ನಾನು ಇಷ್ಟಪಡುವ ನಟನ ಇಂಟರ್ವ್ಯೂ ನೋಡಿದೆ, ಕಲಾವಿದರಿಗೆ ಅಭಿಮಾನಿಗಳಿಂದ ಹಾರ ಬೀಳುತ್ತದೆ ಎಂದಮೇಲೆ, ಅದೇ ರೀತಿ ಮೊಟ್ಟೆ ಟೊಮ್ಯಾಟೋ, ಕಲ್ಲು ಕೂಡ ಬೀಳಬಹುದು, ಅದಕ್ಕೆಲ್ಲ ಸಿದ್ಧವಾಗಿರಬೇಕು ಎಂದು ಹೇಳಿದ್ದರು. ಆ ಮಾತಿನ ಮೇಲೆ ನನಗೂ ಒಪ್ಪಿಗೆ ಇದೆ. ನಾನು ಕೂಡ public figure, ಆದರೆ ಆ ಕಲ್ಲಿನಿಂದ ನನಗೆ ಪೆಟ್ಟಾಗುತ್ತಿದೆ, ಆ ನೋವಿನಿಂದ ರಕ್ತ ಬರುತ್ತಿರುವಾಗ ಅದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ..” ಎಂದು ರಶ್ಮಿಕಾ ಅವರು ಹೇಳಿದ್ದು, ಈ ಮಾತುಗಳು ಈಗ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಕನ್ನಡ ಚಿತ್ರರಂಗಕ್ಕೆ ಮತ್ತೆ ವಾಪಾಸ್ ಎಂಟ್ರಿ ಕೊಟ್ಟ ದೇವಲೋಕದ ಅಪ್ಸರೆ: ಈಕೆಯನ್ನು ನೋಡಲು ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್. ಯಾರು ಗೊತ್ತೇ??

Comments are closed.