Post Office Schemes: ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ಡಬಲ್ ಆಗುತ್ತೆ ಗೊತ್ತೇ?? ಪೋಸ್ಟ್ ಆಫೀಸ್ ನ ಬೆಸ್ಟ್ 5 ಯೋಜನೆಗಳಲ್ಲಿ ಹಾಕಿ ಕುಳಿತಲ್ಲೇ ಶ್ರೀಮಂತರಾಗಿ.

Post Office Schemes: ಸಾಮಾನ್ಯವಾಗಿ ಜನರು ತಮಗೆ ಬರುವ ಸಂಬಳದಲ್ಲಿ 10% ಹಣವನ್ನು ಉಳಿತಾಯ ಮಾಡಬೇಕು ಎಂದು ಬಯಸುತ್ತಾರೆ. ಇದಕ್ಕೆ ಸರಿಯಾದ ಯೋಜನೆ ಯಾವುದು ಎಂದು ತಿಳಿದುಕೊಳ್ಳುವುದು ಒಳ್ಳೆಯದು, ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಆಯ್ಕೆ ಅಂಚೆಕಛೇರಿಯಲ್ಲಿ ಹೂಡಿಕೆ ಮಾಡುವುದು. ಅಂಚೆಕಛೇರಿಯಲ್ಲಿ ಹೂಡಿಕೆ ಮಾಡುವುದರಿಂದ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯುತ್ತೀರಿ. ಜನರಿಗೆ ಹೂಡಿಕೆ ಮಾಡುವ ಸಲುವಾಗಿ ಭಾರತೀಯ ಅಂಚೆಕಚೇರಿ ಕೆಲವು ಯೋಜನೆಗಳನ್ನು ಹೊರತಂದಿದೆ, ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

*ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) :- ಇದು ಒಳ್ಳೆಯ ಯೋಜನೆಗಳಲ್ಲಿ ಒಂದು, ಈಗ 7% ಬಡ್ಡಿದರ ನೀಡುತ್ತದೆ. ಹಾಗೆಯೇ ತೆರಿಗೆ ಪ್ರಯೋಜನವಿದೆ. ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಕನಿಷ್ಠ 100 ರೂಪಾಯಿ. ಒಂದು ಹಣಕಾಸಿನ ವರ್ಷದಲ್ಲಿ, ಈ ಯೋಜನೆಯಲ್ಲಿ 1.50 ಲಕ್ಷದವರೆಗೂ ಠೇವಣಿಗಳ ಮೇಲೆ ತೆರಿಗೆ ರಹಿತ ಪ್ರಯೋಜನ ಪಡೆಯಬಹುದು. ಈ ಯೋಜನೆಯ ಸಮಯ ಐದು ವರ್ಷಗಳಾಗಿದೆ.
*ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) :- ಇದೊಂದು ಸುರಕ್ಷಿತವಾದ ಯೋಜನೆ, ಇದರಲ್ಲಿ ಬಂದ ಆದಾಯ ತೆರಿಗೆ ರಹಿತ ಆಗಿರುತ್ತದೆ. ಒಂದು ಹಣಕಾಸಿನ ವರ್ಷದಲ್ಲಿ 1.5 ಲಕ್ಷದವರೆಗೂ ತೆರಿಗೆ ವಿನಾಯಿತಿ ಸಿಗುತ್ತದೆ, ಬಡ್ಡಿ ದರಕ್ಕೂ ವಿನಾಯಿತಿ ಸಿಗುತ್ತದೆ. ಕನಿಷ್ಠ 500 ರೂಪಾಯಿಯಿಂದ ಗರಿಷ್ಠ 1.5ಲಕ್ಷ ರೂಪಾಯಿಯವರೆಗು ಹೂಡಿಕೆ ಮಾಡಬಹುದು. ಪ್ರಸ್ತುತ 7.1% ಬಡ್ಡಿ ನೀಡುತ್ತಿದೆ. ಈ ಯೋಜನೆಯಲ್ಲಿ 15 ವರ್ಷಗಳ ಲಾಕ್ ಇನ್ ಸಮಯ ಇದೆ. ನಂತರ 5 ವರ್ಷಗಳ ವರೆಗು ಈ ಯೋಜನೆಯನ್ನು ವಿಸ್ತರಣೆ ಮಾಡಬಹುದು. ಬ್ಯಾಂಕ್ ನಲ್ಲಿ ಸಹ ಪಿಪಿಎಫ್ ಖಾತೆ ತೆರೆಯಬಹುದು. ಇದನ್ನು ಓದಿ..Post Office Scheme: ನೀವು ಪ್ರತಿ ತಿಂಗಳು ಆದಾಯ ಪಡೆಯಬೇಕು ಎಂದರೆ 100 % ಸುರಕ್ಷಿತವಾಗಿರುವ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹಾಕಿ

best post office saving schemes in kannada Post Office Schemes:

*5 ವರ್ಷಗಳ ಪೋಸ್ಟ್ ಆಫೀಸ್ ಟೈಮ್ ಠೇವಣಿ ಯೋಜನೆ :- ಇದು ಬ್ಯಾಂಕ್ ನಲ್ಲಿ ಮಾಡುವ ಎಫ್.ಡಿ ಹಾಗೆ 5 ವರ್ಷಗಳ ಸಮಯದವರೆಗು ಸ್ಥಿರ ಠೇವಣಿ ಸಿಗುತ್ತದೆ. ಇದರಲ್ಲಿ ವರ್ಷಕ್ಕೆ 1.5 ಲಕ್ಷ ರೂಪಾಯಿವರೆಗು ತೆರಿಗೆ ವಿನಾಯಿತಿ ಪಡೆಯಬಹುದು. ಇದರಲ್ಲಿ ಕನಿಷ್ಠ ಹೂಡಿಕೆ 1000 ಹಾಗೆ ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಈಗ ಈ ಯೋಜನೆಗೆ 7% ಬಡ್ಡಿ ನೀಡಲಾಗುತ್ತಿದೆ.
*ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) :- 60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವವರು ಈ ಯೋಜನೆಯಲ್ಲಿ ಖಾತೆ ತೆರೆಯಬಹುದು. ಈಗ ಇದರ ಬಡ್ಡಿದರ 8% ಆಗಿದೆ, ಇದರ್ ಮೆಚ್ಯುರಿಟಿ ಸಮಯ 5 ವರ್ಷ. ಈ ಯೋಜನೆಯಲ್ಲಿ 1.5ಲಕ್ಷದ ವರೆಗು ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ ಬಡ್ಡಿಗೆ ತೆರಿಗೆ ಬೀಳುತ್ತದೆ.

*ಸುಕನ್ಯಾ ಸುರಕ್ಷಾ ಯೋಜನೆ :- ಇದು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಶುರು ಮಾಡಿರುವ ಯೋಜನೆ ಆಗಿದೆ. ಇದಕ್ಕೆ 7.6% ಬಡ್ಡಿ ನೀಡಲಾಗುತ್ತಿದೆ. ವಾರ್ಷಿಕ ಆದಾಯದ ಮೇಲೆ ಬಡ್ಡಿ ನಿಗದಿ ಮಾಡುತ್ತಾರೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ 250 ರೂಪಾಯಿ, ಗರಿಷ್ಠ 1.5ಲಕ್ಜ ರೂಪಾಯಿ ಆಗಿದೆ. ಈ ಯೋಜನೆ ಶುರು ಮಾಡಿ 15 ವರ್ಷಗಳ ವರೆಗು ಠೇವಣಿ ಮಾಡಬಹುದು. ಇದನ್ನು ಓದಿ.. Post Office: ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಪೋಸ್ಟ್ ಆಫೀಸ್: ಠೇವಣಿಯ ಬಡ್ಡಿ ದರ ಹೆಚ್ಚಳ. ಎಷ್ಟಾಗಿದೆ ಗೊತ್ತೇ??

Comments are closed.