Kannada News: ಶ್ರೇಷ್ಠ ಮೇಲೆ ಫುಲ್ ಕಿರುಚಾಡಿದ ತಾಂಡವ್: ಭಾಗ್ಯಗೆ ಡೈವೋರ್ಸ್ ಕೊಡ್ತಾನ? ಮುಂದೇನು ಆಗಲಿದೆ ಗೊತ್ತೇ??

Kannada News: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿ ಜನರ ಮೆಚ್ಚುಗೆ ಪಡೆಯುತ್ತಿರುವ ಧಾರವಾಹಿ ಭಾಗ್ಯಲಕ್ಷ್ಮಿ (Bhagyalakshmi). ಸೋಮವಾರದಿಂದ ಶುಕ್ರವಾರದವರೆಗು ಸಂಜೆ 7ಗಂಟೆಗೆ ಪ್ರಸಾರವಾಗುತ್ತದೆ. ಈ ಧಾರವಾಹಿ ಅಕ್ಕ ತಂಗಿಯರ ಕಥೆ, ಬಹಳ ವರ್ಷಗಳ ನಂತರ ನಿರೂಪಕಿ ಸುಷ್ಮಾ ಅವರು ಕಿರುತೆರೆಗೆ ಮರಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಧಾರವಾಹಿ ಟಿಆರ್ಪಿ ಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಅಕ್ಕ ತಂಗಿಯರ ಈ ಕಥೆ ಜನರ ಮನಸ್ಸಿಗೆ ಬಹಳ ಇಷ್ಟವಾಗಿದೆ.

ಭಾಗ್ಯಳಿಗೆ ಲಕ್ಷ್ಮಿ ಎನ್ನುವ ತಂಗಿ, ಅಕ್ಕ ತಂಗಿಯರ ಬಾಂಧವ್ಯ, ಅಕ್ಕನನ್ನು ಕಂಡರೆ ತಾಯಿಯನ್ನೇ ಕಂಡಷ್ಟು ಪ್ರೀತಿ ಲಕ್ಷ್ಮಿಗೆ. ಲಕ್ಷ್ಮಿಗೂ ತಂಗಿಯನ್ನು ಕಂಡರೆ ಮಗಳನ್ನೇ ಕಂಡಷ್ಟು ಪ್ರೀತಿ. ಭಾಗ್ಯಳಿಗೆ ತಾಂಡವ್ ಜೊತೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ, ಆದರೆ ತಾಂಡವ್ ಗೆ ಭಾಗ್ಯಳನ್ನು ಕಂಡರೆ ಇಷ್ಟವಿಲ್ಲ. ಆಕೆ ಪೆದ್ದು ಎನ್ನುವುದು ತಾಂಡವ್ ಅಭಿಪ್ರಾಯ, ಅಷ್ಟೇ ಅಲ್ಲದೆ ಆಫೀಸ್ ನಲ್ಲಿ ತನ್ನ ಜೊತೆಗೆ ಕೆಲಸ ಮಾಡುವ ಶ್ರೇಷ್ಠ ಜೊತೆಗೆ ಓಡಾಡುತ್ತಾ ಆಕೆಯನ್ನು ಪ್ರೀತಿಸುತ್ತಿದ್ದಾನೆ. ಇತ್ತ ಮನೆಯಲ್ಲಿ ತಾಂಡವ್ ತಾಯಿ ಕುಸುಮಾಗೆ ಶ್ರೇಷ್ಠ ತಾಂಡವ್ ಮೇಲೆ ಅನುಮಾನ ಬಂದು, ಶ್ರೇಷ್ಠ ಮನೆಗೆ ಬಂದು, ಚೆನ್ನಾಗಿ ಬೈದಿದ್ದಾರೆ. ನನ್ನ ಮಗ ಶ್ರೀರಾಮನ ಹಾಗೆ, ನೀನು ಮೇನಕೆ ಥರ ಬಂದು ಅವನನ್ನ ಬುಟ್ಟಿಗೆ ಹಾಕೋಬೇಡ ಎಂದು ಬೈದು ಹೋಗಿದ್ದಕ್ಕೆ ಕೋಪ ಮಾಡಿಕೊಂಡ ಶ್ರೇಷ್ಠ ತಾಂಡವ್ ಬಂದಾಗ ಅವನನ್ನು ಮನೆಯಿಂದ ಹೊರಹಾಕಿದ್ದಾಳೆ. ಇದನ್ನು ಓದಿ..Kannada News: ನಿಮ್ಮ ಅಭಿಮಾನಿಗಳು ನಿಮಗೆ ಯಾಕೆ ಮತ ಹಾಕಲಿಲ್ಲ ಎಂದು ಪವನ್ ರವರಿಗೆ ನೇರವಾಗಿ ಕೇಳಿದ ಬಾಲಯ್ಯ. ಪವನ್ ಕೊಟ್ಟ ಉತ್ತರ ಏನು ಗೊತ್ತೇ?

kannada news bhagyalakshmi kannada serial Kannada News:

ಅದಕ್ಕೆ ತಾಂಡವ್ ಶ್ರೇಷ್ಠಳಿಗೆ ಬೈದು, ಮನೆಯಲ್ಲಿದ್ದಾಗ ಕಾಲ್ ಮಾಡಬೇಡ ಅಂದ್ರೆ ನೀನು ಕೇಳೋದಿಲ್ಲ ಅದು ನಿನ್ನದೇ ತಪ್ಪು ಎನ್ನುತ್ತಾನೆ. ಅದಕ್ಕೆ ಶ್ರೇಷ್ಠ, ನೀನು ಮಾತ್ರ ಒಳ್ಳೆಯವನಾ, ಭಾಗ್ಯಗೆ ಡಿವೋರ್ಸ್ ಕೊಟ್ಟು ನನ್ನನ್ನು ಮದುವೆಯಾಗು ಎಂದು ಕೇಳುತ್ತಾಳೆ, ತಾಂಡವ್ ಅದಕ್ಕೆ ಒಪ್ಪಿಕೊಳ್ಳುತ್ತಾನೆ, ನಾನು ಭಾಗ್ಯಳಿಗೆ ಡಿವೋರ್ಸ್ ಕೊಟ್ಟು ನಿನ್ನನ್ನ ಮದುವೆ ಆಗ್ತೀನಿ, ನಮ್ಮ ಮನೆಗೆ ಬಂದು ನನ್ನ ತಂದೆ ತಾಯಿ ಮತ್ತು ಮಕ್ಕಳನ್ನ ನೋಡ್ಕೋತೀಯಾ ಎಂದು ಶ್ರೇಷ್ಠಳಿಗೆ ಕೇಳಿದ್ದು ಇಲ್ಲಿಗೆ ಎಪಿಸೋಡ್ ನಿಂತಿದೆ. ಮುಂದಿನ ಎಪಿಸೋಡ್ ನಲ್ಲಿ ಏನಾಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದು, ಮುಂದೆ ಏನಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ನಿಜಕ್ಕೂ ಶ್ರೇಷ್ಠಳಿಗೆ ತಾಂಡವ್ ಜೊತೆಗೆ ಮದುವೆ ಆಗುವುದಕ್ಕೆ ಇಷ್ಟವಿಲ್ಲ. ಮಕ್ಕಳನ್ನು ನೋಡಿಕೊಳ್ಳುತ್ತೀಯಾ ಎಂದು ಕೇಳಿದ ತಕ್ಷಣ ಸ್ವಲ್ಪ ಯೋಚನೆ ಮಾಡಿ, ತಾಂಡವ್ ಕೂಲ್ ಆಗುವ ಹಾಗೆ ಮಾಡುತ್ತಾಳೆ, ಮುಂದೆ ಇದನ್ನೆಲ್ಲ ಮಾತನಾಡೋಣ ಎಂದು ಹೇಳುತ್ತಾಳೆ. ಇದನ್ನು ಓದಿ.. Kannada News: ಟಾಪ್ ನಟನಾಗಿದ್ದ ರಾಮ್ ಕುಮಾರ್, ಅಣ್ಣಾವ್ರ ಅಳಿಯ ಆದ್ಮೇಲೆ ನಟನೆಗೆ ಯಾರು ಅವಕಾಶ ನೀಡಲಿಲ್ಲ. ಅದ್ಯಾಕೆ ಗೊತ್ತೇ?

Comments are closed.