Kannada News: ಹೊಸ ಧಾರಾವಾಹಿಗಳ ಎಂಟ್ರಿ ಇಂದ ಅಲ್ಲೋಲ ಕಲ್ಲೋಲವಾದ ಟಿ ಆರ್ ಪಿ ಲಿಸ್ಟ್. ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ? ಶ್ರೀ ರಸ್ತು ಶುಭಮಸ್ತು ಕಥೆ ಏನಾಗಿದೆ ಗೊತ್ತೇ??

Kannada News: ಕನ್ನಡ ಕಿರುತೆರೆಯ ಎಲ್ಲಾ ಚಾನೆಲ್ ಗಳಲ್ಲಿ ಹಲವು ಧಾರವಾಹಿಗಳು ಪ್ರತಿದಿನ ಪ್ರಸಾರವಾಗುತ್ತಿದೆ. ಅವುಗಳಲ್ಲಿ ಎಲ್ಲಾ ಧಾರವಾಹಿಗಳು ಕೂಡ ವೀಕ್ಷಕರಿಗೆ ಇಷ್ಟವಾಗುವುದಿಲ್ಲ. ಮನೆಯಲ್ಲಿರುವ ವೀಕ್ಷಕರು ಅತಿಹೆಚ್ಚಾಗಿ ಯಾವ ಧಾರವಾಹಿಯನ್ನು ನೋಡುತ್ತಾರೋ, ಅದರ ಮೇಲೆ ಪ್ರತಿವಾರದ ಟಿಆರ್ಪಿ ರೇಟಿಂಗ್ ಬರುತ್ತದೆ. ಈ ವಾರ ಕಲರ್ಸ್ ಕನ್ನಡದಲ್ಲಿ ಹೊಸ ಧಾರವಾಹಿಗಳು ಶುರುವಾಗಿದೆ, ಹಾಗೆಯೇ ಜೀಕನ್ನಡ ವಾಹಿನಿಯ ರೇಟಿಂಗ್ ನಲ್ಲಿ ಬದಲಾವಣೆ ಆಗಿದೆ. ಟಾಪ್ 2ನೇ ಸ್ಥಾನದಲ್ಲಿದ್ದ ಶ್ರೀರಸ್ತು ಶುಭಮಸ್ತು ಧಾರವಾಹಿ ಈ ವಾರ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? ಹಾಗೆಯೇ ಈ ವಾರ ಟಿಆರ್ಪಿ ರೇಟಿಂಗ್ ನಲ್ಲಿ ಅತಿಹೆಚ್ಚು ರೇಟಿಂಗ್ ಪಡೆದು ಟಾಪ್ 10 ಸ್ಥಾನ ಪಡೆಡಿರುವ ಧಾರವಾಹಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

kannada news kannada serial trp rating Kannada News:

ಟಾಪ್ 10ನೇ ಸ್ಥಾನದಲ್ಲಿ ಇರುವುದು ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರವಾಹಿ. 4.9 ರೇಟಿಂಗ್ ಪಡೆದು 10ನೇ ಸ್ಥಾನದಲ್ಲಿದೆ. ಚಾರು ಮತ್ತು ರಾಮಚಾರಿಯ ಹೊಸ ಸ್ನೇಹ ಈಗ ವೀಕ್ಷಕರಿಗೂ ಇಷ್ಟವಾಗುತ್ತಿದೆ. 11ನೇ ಸ್ಥಾನದಲ್ಲಿದ ರಾಮಾಚಾರಿ ಧಾರವಾಹಿ 10ನೇ ಸ್ಥಾನಕ್ಕೆ ಬಂದಿದೆ. 9ನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಗೀತಾ ಧಾರವಾಹಿ ಇದೆ, 5.0 ರೇಟಿಂಗ್ ಪಡೆದುಕೊಂಡಿದೆ. ತನ್ನ ತಂದೆಯನ್ನು ಕೊಂದಿದ್ದು ಯಾರು ಎನ್ನುವ ಸತ್ಯವನ್ನು ವಿಜಯ್ ಹುಡುಕಾಟ ನಡೆಸುತ್ತಿದ್ದಾನೆ. 8ನೇ ಸ್ಥಾನದಲ್ಲಿದ್ದ ಗೀತಾ ಧಾರವಾಹಿ ಈಗ 9ನೇ ಸ್ಥಾನಕ್ಕೆ ಬಂದಿದೆ. ಇದನ್ನು ಓದಿ..Kannada News: ಶಾರುಖ್ ಖಾನ್ ಕಟ್ಟುವ ವಾಚ್ ಬೆಲೆ, ನಿಮ್ಮ ನೆಚ್ಚಿನ ನಟನ ಸಂಭಾವನೆಗಿಂತ ಹೆಚ್ಚು. ಅದೆಷ್ಟು ಗೊತ್ತೇ? ತಿಳಿದರೆ ಒಮ್ಮೆಲೇ ಶಾಕ್ ಆಗ್ತೀರಾ.

5.0 ರೇಟಿಂಗ್ ಪಡೆದು 8ನೇ ಸ್ಥಾನದಲ್ಲಿ ಈಗ ಜೊತೆ ಜೊತೆಯಲಿ ಧಾರವಾಹಿ ಬಂದಿದೆ. 6ನೇ ಸ್ಥಾನದಲ್ಲಿದ್ದ ಜೊತೆ ಜೊತೆಯಲಿ ಈಗ 8ನೇ ಸ್ಥಾನಕ್ಕೆ ಕುಸಿದಿದೆ, ಕಥೆಯಲ್ಲಿ ಆಗುತ್ತಿರುವ ಬದಲಾವಣೆಗಳು ವೀಕ್ಷಕರಿಗೆ ಇಷ್ಟ ಆಗುವ ಹಾಗೆ ಕಾಣುತ್ತಿಲ್ಲ, ಹಾಗಾಗಿ ಜೊತೆ ಜೊತೆಯಲಿ ಧಾರವಾಹಿ 8ನೇ ಸ್ಥಾನಕ್ಕೆ ಬಂದಿದೆ. 7ನೇ ಸ್ಥಾನದಲ್ಲಿ ಕೆಂಡಸಂಪಿಗೆ ಧಾರವಾಹಿ ಇದೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಈ ಹೊಸ ಸೀರಿಯಲ್ ವೀಕ್ಷಕರಿಗೆ ಇಷ್ಟವಾಗುತ್ತಿದ್ದು, ಈ ಧಾರವಾಹಿ 5.5 ರೇಟಿಂಗ್ ಪಡೆದುಕೊಂಡಿದೆ.

6ನೇ ಸ್ಥಾನದಲ್ಲಿ 6.9 ರೇಟಿಂಗ್ ಪಡೆದು ಹಿಟ್ಲರ್ ಕಲ್ಯಾಣ ಧಾರವಾಹಿ ನಿಂತಿದೆ. ಕಳೆದ ವಾರ 5ನೇ ಸ್ಥಾನದಲ್ಲಿತ್ತು, ಈ ವಾರ 6ನೇ ಸ್ಥಾನಕ್ಕೆ ಬಂದಿದೆ. ಲೀಲಾ ಈಗ ಮತ್ತೆ ಏಜೆ ಮನೆಯೊಳಗೆ ಹೊಸ ಅವತಾರಾದಲ್ಲಿ ಬಂದಿದ್ದು, ವೀಕ್ಷಕರಿಗೆ ಕಥೆ ಇಷ್ಟವಾಗುತ್ತಿದೆ. 5ನೇ ಸ್ಥಾನದಲ್ಲಿ 5ನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಧಾರವಾಹಿ ನಿಂತಿದೆ, 7.0 ರೇಟಿಂಗ್ ಪಡೆದಿದೆ. ಕಳೆದ ವಾರ 3ನೇ ಸ್ಥಾನದಲ್ಲಿದ್ದ ಭಾಗ್ಯಲಕ್ಷ್ಮಿ ಈ ವಾರ 5ನೇ ಸ್ಥಾನಕ್ಕೆ ಬಂದಿದೆ. ಇದನ್ನು ಓದಿ..Kannada News: ನಾನೇ ಎಲ್ಲಾ ನಂದೇ ಎಲ್ಲಾ ಮೆರೆಯುತ್ತಿದ್ದ ಡಿ ಬಾಸ್ ಕೊನೆಗೂ ಇಳಿಸಲಿಲ್ಲ ಕಾಲರ್. ಕ್ರಾಂತಿ ಟಿಕೆಟ್ ಕಲೆಕ್ಷನ್ ಎಷ್ಟಾಗಿದೆ ಗೊತ್ತೇ??

ಟಾಪ್ 4ನೇ ಸ್ಥಾನದಲ್ಲಿ 7.3 ರೇಟಿಂಗ್ ಪಡೆದು ಸತ್ಯ ಧಾರವಾಹಿ ಇದೆ. ಈ ಧಾರವಾಹಿಯನ್ನು ಜನರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಸತ್ಯ ಮತ್ತು ಅಮುಲ್ ಬೇಬಿ ನಡುವೆ ಶುರುವಾಗಿರುವ ಪ್ರೀತಿ ಜನರಿಗೆ ಇಷ್ಟವಾಗುತ್ತಿದೆ. ಟಾಪ್ 3ನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು ಧಾರವಾಹಿ ನಿಂತಿದೆ. ಕಳೆದ ವಾರ ಎರಡನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು ಈ ವಾರ 8.8 ರೇಟಿಂಗ್ ಪಡೆದು 3ನೇ ಸ್ಥಾನಕ್ಕೆ ಬಂದಿದೆ. ತುಳಸಿ ಮತ್ತು ಮಾಧವ್ ಸ್ನೇಹ, ದತ್ತಣ್ಣನ ಪಾತ್ರ ಜನರಿಗೆ ಇಷ್ಟವಾಗಿದೆ.

kannada news kannada serial trp rating 1 Kannada News:

ಟಾಪ್ 2ನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಸ್ಥಾನ ಪಡೆದಿದೆ, ಕಳೆದ ವಾರ ಮೊದಲ ಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಈ ವಾರ 9.09 ರೇಟಿಂಗ್ ಪಡೆದು, 2ನೇ ಸ್ಥಾನಕ್ಕೆ ಬಂದಿದೆ. ರಾಜಿಯ ಕುತಂತ್ರ, ಪುಟ್ಟಕ್ಕನ ಮನೆಯಲ್ಲಿ ಮದುವೆ ಸಂಭ್ರಮ ಇದೆಲ್ಲವೂ ಕೂಡ ವೀಕ್ಷಕರಿಗೆ ಇಷ್ಟವಾಗಿದೆ. ಮೊದಲ ಸ್ಥಾನದಲ್ಲಿ 10.4 ಪಡೆದು ಗಟ್ಟಿಮೇಳ ಧಾರವಾಹಿ ಟಾಪ್ ಸ್ಥಾನದಲ್ಲಿದೆ. ಮನೆಯಲ್ಲಿ ಎಲ್ಲರೂ ಕೂತು ನೋಡುವಂಥ ಕಥೆ ಇದಾಗಿದ್ದು, ಮೊದಲ ಸ್ಥಾನ ಪಡೆದುಕೊಂಡಿದೆ. ಇದನ್ನು ಓದಿ.. Kannada News: ಸಿಡಿದೆದ್ದ ಚಿರಂಜೀವಿ: ನಟಿಯ ಜೊತೆ ಸೇರಿಕೊಂಡು ಮಾಡಬಾರದ ಕೆಲಸ ಮಾಡಿದ ವರುಣ್ ತೇಜ್: ಚಿರುಗೆ ಕೋಪ ಯಾಕೆ ಗೊತ್ತೇ?

Comments are closed.