Cricket News: ಯಾರು ಕಾಣದಂತಹ ದುಬಾರಿ ಉಡುಗೊರೆಯನ್ನು ಪಡೆದ ರಾಹುಲ್: ಕೊಹ್ಲಿ, ಧೋನಿ, ಸಲ್ಮಾನ್ ಕೋಟಿ ಕೋಟಿ ಖರ್ಚು ಮಾಡಿ ಕೊಟ್ಟ ಉಡುಗೊರೆ ಏನು ಗೊತ್ತೇ??

Cricket News: ಇಷ್ಟು ದಿನಗಳು ಲವ್ ಬರ್ಡ್ಸ್ ಎನ್ನಿಸಿಕೊಂಡಿದ್ದ ಕ್ರಿಕೆಟರ್ ಕೆ.ಎಲ್.ರಾಹುಲ್ (K L Rahul) ಮತ್ತು ಬಾಲಿವುಡ್ ನ ಉದಯೋನ್ಮುಖ ನಟಿ ಅಥಿಯಾ ಶೆಟ್ಟಿ (Athiya Shetty) ಅವರ ಮದುವೆ ಈ ಸೋಮವಾರ ನಡೆದಿದೆ. ಹೆಚ್ಚಿನ ಜನರಿಗೆ ಆಮಂತ್ರಣ ಇಲ್ಲದೆ, ಆಪ್ತರ ಸಮ್ಮುಖದಲ್ಲಿ, ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಬಂಗಲೆಯಲ್ಲಿ ಈ ಜೋಡಿಯ ಮದುವೆ ಅದ್ಧೂರಿಯಾಗಿ ನಡೆಯಿತು. ರಾಹುಲ್ ಅಥಿಯಾ ಇಬ್ಬರ ಮದುವೆ ಖಾಸಗಿಯಾಗಿ ನಡೆದ ಕಾರಣ ಮುಂಬೈ ಮತ್ತು ಬೆಂಗಳೂರಿನಲ್ಲಿ ಇಬ್ಬರ ರಿಸೆಪ್ಶನ್ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ.

ಇವರಿಬ್ಬರ ಮದುವೆಗೆ ನಟ ಸಲ್ಮಾನ್ ಖಾನ್ (Salman Khan), ಟೈಗರ್ ಶ್ರಾಫ್ (Tiger Shroff), ಅರ್ಜುನ್ ಕಪೂರ್ (Arjun Kapoor), ಕ್ರಿಕೆಟ್ ಲೋಕರ ತಾರೆಯರಾದ ಎಂ.ಎಸ್.ಧೋನಿ (M S Dhoni), ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಆತ್ಮೀಯರು ಬಂದಿದ್ದರು. ಮದುವೆಯಲ್ಲಿ ರಾಹುಲ್ ಅಥಿಯಾ ದಂಪತಿಗೆ ಭಾರಿ ಉಡುಗೊರೆಗಳು ಸಿಕ್ಕಿದ್ದು, ಕೋಟಿ ಕೋಟಿ ಬೆಲೆ ಬಾಳುತ್ತಿವೆ. ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ. ವರದಿಯ ತಿಳಿದುಬಂದಿರುವುದು ಏನೆಂದರೆ, ನಟ ಸಲ್ಮಾನ್ ಖಾನ್ ಅವರು ಹೊಸ ದಂಪತಿಗೆ 1.64 ಕೋಟಿ ಬೆಲೆ ಬಾಳುವ ಆಡಿ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿರಾಟ್ ಕೊಹ್ಲಿ ಅವರು 2.17 ಕೋಟಿ ರೂಪಾಯಿಯ ಬಿಎಂಡಬ್ಲ್ಯೂ ಕಾರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇದನ್ನು ಓದಿ..Cricket News: ಪದೇ ಪದೇ ವಿರಾಟ್ ಕೊಹ್ಲಿ ಯನ್ನು ಟಿ 20 ತಂಡದಿಂದ ತೆಗೆಯುತ್ತಿರುವುದಕ್ಕೆ ಕಾರಣ ನೀಡಿದ ದ್ರಾವಿಡ್. ಕಾರಣ ಕೇಳಿ ಅಭಿಮಾನಿಗಳು ಫುಲ್ ಗರಂ ಯಾಕೆ ಗೊತ್ತೆ??

cricket news rahul athiya marriage gifts Cricket News:

ನಟ ಅರ್ಜುನ್ ಕಪೂರ್ 1.50 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಆರ್ನಮೆಂಟ್ಸ್ ಅನ್ನು ವಧು ವರರಿಗೆ ಗಿಫ್ಟ್ ಆಗಿ ನೀಡಿದ್ದಾರೆ. ನಟ ಟೈಗರ್ ಶ್ರಾಫ್ ಅವರು ಶೋಪರ್ಡ್ ವಾಚ್ ಅನ್ನು ಗಿಫ್ಟ್ ಆಗಿ ನೀಡಿದ್ದು, ಅದರ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ ಆಗಿದೆ. ಟೀಮ್ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ಅವರು 80 ಲಕ್ಷ ಬೆಲೆ ಬಾಳುವ ಕವಾಸಕಿ ನಿಂಜಾ ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಹಾಗೆಯೇ ಅಥಿಯಾ ಶೆಟ್ಟಿ ಅವರ ತಂದೆ ಸುನೀಲ್ ಶೆಟ್ಟಿ (Suniel Shetty) ಅವರು ಅಳಿಯನಿಗೆ ಬರೋಬ್ಬರಿ 50 ಕೋಟಿ ರೂಪಾಯಿ ಬೆಲೆ ಬಾಳುವ ಫ್ಲ್ಯಾಟ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇದನ್ನು ಓದಿ..Kannada News: ಹೊಸ ಧಾರಾವಾಹಿಗಳ ಎಂಟ್ರಿ ಇಂದ ಅಲ್ಲೋಲ ಕಲ್ಲೋಲವಾದ ಟಿ ಆರ್ ಪಿ ಲಿಸ್ಟ್. ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ? ಶ್ರೀ ರಸ್ತು ಶುಭಮಸ್ತು ಕಥೆ ಏನಾಗಿದೆ ಗೊತ್ತೇ??

Comments are closed.