Kannada News: ತೆಲುಗು ಚಿತ್ರರಂಗ ಶೇಕ್: ಬಾಲಯ್ಯ ವಿರುದ್ಧ ತಿರುಗಿ ಬಿದ್ದ ನಾಗಾರ್ಜುನ ಮಕ್ಕಳು: ನಾಲಿಗೆ ಹರಿಬಿಟ್ಟು ಬಾಲಯ್ಯ ಹೇಳಿದ್ದೇನು ಗೊತ್ತೇ??

Kannada News: ತೆಲುಗು ಚಿತ್ರರಂಗದ ನಟ ಬಾಲಯ್ಯ ಅವರ ಸಿನಿಮಾ ವೀರಸಿಂಹ ರೆಡ್ಡಿ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಎನ್ನಿಸಿಕೊಂಡು, ಒಳ್ಳೆಯ ಹಣಗಳಿಕೆ ಸಹ ಮಾಡುತ್ತಿದೆ. ಈ ಸಂತೋಷದ ಕಾರಣಕ್ಕೆ ವೀರ ಸಿಂಹ ರೆಡ್ಡಿ ಚಿತ್ರತಂಡ ಸಕ್ಸಸ್ ಮೀಟ್ ಏರ್ಪಡಿಸಿತ್ತು. ಆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಬಾಲಕೃಷ್ಣ ಅವರು ಹೇಳಿರುವ ಒಂದು ಮಾತು ಈಗ ಭಾರಿ ಟೀಕೆಗೆ ಒಳಗಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದರ ಜೊತೆಗೆ ಅಕ್ಕಿನೇನಿ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆ ಮಾತಿಗೆ ಅಕ್ಕಿನೇನಿ ಕುಟುಂಬದ ಮಕ್ಕಳು ನಾಗಚೈತನ್ಯ ಮತ್ತು ಅಖಿಲ್ ಇಬ್ಬರು ಕೂಡ ಪ್ರತ್ಯುತ್ತರ ನೀಡಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು ಎಂದರೆ, ಸಕ್ಸಸ್ ಮೀಟ್ ನಲ್ಲಿ ಮಾತನಾಡುತ್ತಿದ್ದ ಬಾಲಯ್ಯ ಅವರು, “ನಮ್ಮ ತಂದೆಗೆ ಪ್ರತಿಸ್ಪರ್ಧಿಗಳಿದ್ದರು..” ಎಂದು ಮಾತು ಶುರು ಮಾಡಿ.. ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಹೆಸರು ಹೇಳಲು ಹೋಗಿ, ಅಕ್ಕಿನೇನಿ ತೊಕ್ಕಿನೇನಿ ಎಂದು ಹೇಳಿದ್ದಾರೆ. ಇದರಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಂತಹ ಮೇರು ನಟರ ಬಗ್ಗೆ ಹೀಗೆ ಅಪಹಾಸ್ಯವಾಗಿ ಮಾತನಾಡುವುದು ಸರಿಯಲ್ಲ ಎಂದು ನೆಟ್ಟಿಗರು ಕಮೆಂಟ್ಸ್ ಗಳ ಮೂಲಕ ಬಾಲಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಈ ವಿಚಾರಕ್ಕೆ ನಾಗಾರ್ಜುನ ಅವರ ಮಕ್ಕಳು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಓದಿ.. Cricket News: ಯಾರು ಕಾಣದಂತಹ ದುಬಾರಿ ಉಡುಗೊರೆಯನ್ನು ಪಡೆದ ರಾಹುಲ್: ಕೊಹ್ಲಿ, ಧೋನಿ, ಸಲ್ಮಾನ್ ಕೋಟಿ ಕೋಟಿ ಖರ್ಚು ಮಾಡಿ ಕೊಟ್ಟ ಉಡುಗೊರೆ ಏನು ಗೊತ್ತೇ??

kannada news balakrishna vs akkineni 1 Kannada News:

“ನಂದಮೂರಿ ತಾರಕ್ ರಾಮಾ ರಾವ್ ಅವರು, ಅಕ್ಕಿನೇನಿ ನಾಗೇಶ್ವರ್ ರಾವ್ ಅವರು ಹಾಗೂ ಎಸ್.ವಿ.ರಂಗಾರಾವ್ ಅವರು ತೆಲುಗು ಚಿತ್ರರಂಗದ ಆಧಾರ ಸ್ಥಂಬಗಳು, ಅಪಾರವಾದ ಹೆಮ್ಮೆಯ ಕೊಡುಗೆ ನೀಡಿದ್ದಾರೆ. ಅವರಿಗೆ ಅಗೌರವಿಸುವುದು ನಮ್ಮನ್ನು ನಾವೇ ಕೀಳಾಗಿ ನೋಡಿದ ಹಾಗೆ..” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಯಾರಿಗೆ ಎಂದು ಸ್ಪಷ್ಟನೆ ನೀಡದೆಯೇ, ಅಕ್ಕಿನೇನಿ ಕುಟುಂಬದ ಕುಡಿಗಳು ಈ ರೀತಿಯ ಪ್ರತಿಕ್ರಿಯೆ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಹೊಸ ಧಾರಾವಾಹಿಗಳ ಎಂಟ್ರಿ ಇಂದ ಅಲ್ಲೋಲ ಕಲ್ಲೋಲವಾದ ಟಿ ಆರ್ ಪಿ ಲಿಸ್ಟ್. ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ? ಶ್ರೀ ರಸ್ತು ಶುಭಮಸ್ತು ಕಥೆ ಏನಾಗಿದೆ ಗೊತ್ತೇ??

Comments are closed.