Kannada News: ಝೋಮೋಟೋ ಜಾಹಿರಾತಿಗೆ ಅಲ್ಲೂ ಅರ್ಜುನ್ ಪಡೆಯುವ ಸಂಭಾವನೆ ಕೇಳಿದರೆ, ಬೆಚ್ಚಿ ಬೆರಗಾಗಿ, ನಿಂತಲ್ಲೇ ನಿಂತು ಬಿಡ್ತೀರಾ. ಎಷ್ಟು ಗೊತ್ತೇ?

Kannada News: ಭಾರತ ಚಿತ್ರರಂಗದಲ್ಲಿ ನಟ ಅಲ್ಲು ಅರ್ಜುನ್ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಅಲ್ಲು ಅರ್ಜುನ್ ಅವರು ಸಿನಿಮಾಗಳಲ್ಲಿ ಮಾತ್ರವಲ್ಲದೆ, ಹಲವಾರು ಕಂಪನಿಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತೆಲುಗಿನಲ್ಲಿ ಅತಿ ಹೆಚ್ಚು ಕಂಪನಿಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಇರುವವರು ನಟ ಮಹೇಶ್ ಬಾಬು, ಇವರು 10 ರಿಂದ 15 ಕಂಪನಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರನ್ನು ಬಿಟ್ಟರೆ ಹೆಚ್ಚು ಕಂಪನಿಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವವರು ಅಲ್ಲು ಅರ್ಜುನ್ ಅವರು ಎಂದು ಹೇಳಬಹುದು. ಪ್ರಸ್ತುತ ಅಲ್ಲು ಅರ್ಜುನ್ ಅವರು ಜೋಮೋಟೋ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

ಇದಕ್ಕಾಗಿ ಅವರು ದಾಖಲೆಯ ಮೊತ್ತವನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ಮಹೇಶ್ ಬಾಬು ಅವರು ಇಷ್ಟು ವರ್ಷಗಳ ಕಾಲ ಬ್ರ್ಯಾಂಡ್ ಅಂಬಾಸಿಡರ್ ಆಗಿ ಪಡೆದುಕೊಂಡಿರುವ ಸಂಭಾವನೆಗಿಂತ ಹೆಚ್ಚು ಹಣವನ್ನು ಅಲ್ಲು ಅರ್ಜುನ್ ಅವರು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅಲ್ಲು ಅರ್ಜುನ್ ಅವರಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಒಳ್ಳೆಯ ಫ್ಯಾನ್ ಬೇಸ್ ಇದೆ, ಅದರಲ್ಲೂ ಪುಷ್ಪ ಸಿನಿಮಾ ನಂತರ ಪ್ಯಾನ್ ಇಂಡಿಯಾ ಹೀರೋ ಆಗಿ ಅಲ್ಲು ಅರ್ಜುನ್ ಅವರು ಭಾರತಾದ್ಯಂತ ಗುರುತಿಸಿಕೊಂಡಿದ್ದಾರೆ. ಇದನ್ನು ಓದಿ..Kannada News: ವಯಸ್ಸು 44 ಆದರೂ ಆ ಅಂದ ನೋಡಿ ಎಲ್ಲರೂ ಬಾಯ್ ಬಿಟ್ಟರು. ಈಕೆಯ ಅಂದಕ್ಕೆ ಸರಿಸಾಟಿ ಯಾರು ಇಲ್ಲವೇ? ವಿಡಿಯೋ ಹೇಗಿದೆ ಗೊತ್ತೇ??

kannada news allu arjun zomato ad remuneration Kannada News:

ಹಾಗಾಗಿ ಜೋಮೋಟೋ ಸಂಸ್ಥೆ ಭಾರಿ ಮೊತ್ತವನ್ನು ನೀಡಿ ಇವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ತೆಗೆದುಕೊಂಡಿದೆ. ಅಲ್ಲು ಅರ್ಜುನ್ ಅವರಿಗೆ ಬರೋಬ್ಬರಿ 15 ಕೋಟಿ ರೂಪಾಯಿಯನ್ನು ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ, ಅದಕ್ಕೆ ಜೊತೆಯಾಗಿ ಇನ್ನು 5 ಕೋಟಿ ರೂಪಾಯಿ ಹೆಚ್ಚು ಹಣ ನೀಡಿ, ಇನ್ನು ಒಂದು ವರ್ಷಗಳ ಕಾಲ ಅವರನ್ನೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮುಂದುವರೆಸಲಿದೆ. ಒಟ್ಟಾರೆಯಾಗಿ 20 ಕೋಟಿ ರೂಪಾಯಿಯನ್ನು ಸಂಭಾವನೆಯ ರೂಪದಲ್ಲಿ ನೀಡಲಿದೆ. ಬಾಲಿವುಡ್ ನಟ ನಟಿಯರು ಇಷ್ಟು ಸಂಭಾವನೆ ಪಡೆಯುತ್ತಾರೆ, ಈಗ ಅಲ್ಲು ಅರ್ಜುನ್ ಅವರು ಕೂಡ ಅದೇ ರೇಂಜ್ ನಲ್ಲಿ ಇರುವುದರಿಂದ ಇಷ್ಟು ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ.. ಇದನ್ನು ಓದಿ.. Kannada News: ಕ್ರಾಂತಿ ಸಿನಿಮಾ ನೋಡಿ ಹೊರಬಂದ ನಟ ಪ್ರೋಮೊದ್: ನೆಗೆಟಿವ್ ಮಾತಾಡೋರಿಗೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ?? ಉಲ್ಟಾ ಹೊಡೆಯುತ್ತಿರುವುದು ಯಾಕೆ??

Comments are closed.